ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

PAK vs ENG 1st T20: ಪಾಕಿಸ್ತಾನದ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಇಂಗ್ಲೆಂಡ್

17 ವರ್ಷಗಳ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ 7 ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಜಯ ದಾಖಲಿಸಿದೆ. ಕರಾಚಿಯಲ್ಲಿ ನಡೆದ ಮೊದಲನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ 6 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತು. ಈ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟಾಸ್‌ ಗೆದ್ದ ಇಂಗ್ಲೆಂಡ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ತಂಡ ಉತ್ತಮ ಆರಂಭವನ್ನೇ ಪಡೆಯಿತು. ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ 9.3 ಓವರ್ ಗಳಲ್ಲಿ 85 ರನ್ ಕಲೆ ಹಾಕಿ ಉತ್ತಮ ಅಡಿಪಾಯ ಹಾಕಿದರು.

Ind Vs Aus T20: ಗ್ರೀನ್, ವೇಡ್ ಸ್ಫೋಟಕ ಬ್ಯಾಟಿಂಗ್, ಟೀಂ ಇಂಡಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾInd Vs Aus T20: ಗ್ರೀನ್, ವೇಡ್ ಸ್ಫೋಟಕ ಬ್ಯಾಟಿಂಗ್, ಟೀಂ ಇಂಡಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ

ಪಾಕಿಸ್ತಾನ ತಂಡದ ಸ್ಕೋರ್ 85 ಆಗಿದ್ದಾಗ ನಾಯಕ ಬಾಬರ್ ಅಜಂ 31 ರನ್‌ ಗಳಿಸಿ ಔಟಾದರು, ಮೊದಲ ವಿಕೆಟ್ ಪತನದ ನಂತರ ಪಾಕಿಸ್ತಾನ ರನ್ ಗಳಿಸುವ ವೇಗಕ್ಕೆ ಕಡಿವಾಣ ಬಿದ್ದಿತು. ಮೊಹಮ್ಮದ್ ರಿಜ್ವಾನ್ 46 ಎಸೆತಗಳಲ್ಲಿ 68 ರನ್ ಗಳಿಸಿ ಔಟಾದರು. ಹೈದರ್ ಅಲಿ 13 ಎಸೆತಗಳಲ್ಲಿ 11 ರನ್ ಗಳಿಸಿ ನಿರಾಸೆ ಅನುಭವಿಸಿದರು. ನಂತರ ಬಂದ ಇಫ್ತಿಕರ್ ಅಹಮದ್ 17 ಎಸೆತಗಳಲ್ಲಿ 28 ರನ್ ಗಳಿಸಿದರು. ಉಳಿದತೆ ಶಾನ್ ಮಸೂದ್ (7), ಮೊಹಮ್ಮದ್ ನವಾಜ್ (4), ಖುಶ್ದಿಲ್ ಶಾ (5) ರನ್ ಗಳಿಸಿದರೆ, ನಸೀಮ್ ಶಾ ಶೂನ್ಯಕ್ಕೆ ಔಟಾದರು.

ಅಂತಿಮವಾಗಿ ಪಾಕಿಸ್ತಾನ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡ 158 ರನ್ ಗಳಿಸಿತು. ಇಂಗ್ಲೆಂಡ್ ಪರವಾಗಿ ಲೂಕ್ ವುಡ್ 4 ಓವರ್ ಗಳಲ್ಲಿ 24 ರನ್ ನೀಡಿ 3 ವಿಕೆಟ್ ಪಡೆದರು. ಆದಿಲ್ ರಶೀದ್ 4 ಓವರ್ ಗಳಲ್ಲಿ 27 ರನ್ ನೀಡಿ 2 ವಿಕೆಟ್ ಪಡೆದರು.

England Beat Pakistan By Six Wickets In The 1st T20I In Karachi

ಹ್ಯಾರಿ ಬ್ರೂಕ್, ಅಲೆಕ್ಸ್ ಹೇಲ್ಸ್ ಉತ್ತಮ ಬ್ಯಾಟಿಂಗ್

159 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ಬೇಗನೆ ಮೊದಲ ವಿಕೆಟ್ ಕಳೆದುಕೊಂಡಿತು. ಇಂಗ್ಲೆಂಡ್ ತಂಡ 19 ರನ್ ಗಳಿಸುವಷ್ಟರಲ್ಲಿ ಫಿಲಿಪ್ ಸಾಲ್ಟ್ 10 ರನ್ ಗಳಿಸಿ ಔಟಾದರು. ಬಹಳ ದಿನಗಳ ನಂತರ ತಂಡಕ್ಕೆ ವಾಪಸಾದ ಅಲೆಕ್ಸ್ ಹೇಲ್ಸ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. 40 ಎಸೆತಗಳಲ್ಲಿ 7 ಬೌಂಡರಿ ಸಹಿತ 53 ರನ್ ಗಳಿಸಿ ಅರ್ಧಶತಕ ಪೂರೈಸಿದರು.

ಡೇವಿಡ್ ಮಲನ್ (20) ರನ್ ಗಳಿಸಿದರೆ, ನಂತರ ಬಂದ ಹ್ಯಾರಿ ಬ್ರೂಕ್ 25 ಎಸೆತಗಳಲ್ಲಿ 7 ಬೌಂಡರಿ ಸಹಿತ 45 ರನ್ ಗಳಿಸಿ ಇಂಗ್ಲೆಂಡ್‌ ತಂಡಕ್ಕೆ ಸುಲಭದ ಜಯ ತಂದುಕೊಟ್ಟರು. ಅಂತಿಮವಾಗಿ ಇಂಗ್ಲೆಂಡ್ ತಂಡ ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದರು.

ಎರಡೂ ತಂಡಗಳ ಪ್ಲೇಯಿಂಗ್ IX

ಪಾಕಿಸ್ತಾನ : ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ , ಹೈದರ್ ಅಲಿ, ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಉಸ್ಮಾನ್ ಖಾದಿರ್, ಹ್ಯಾರಿಸ್ ರೌಫ್, ನಸೀಮ್ ಶಾ, ಶಾನವಾಜ್ ದಹಾನಿ

ಇಂಗ್ಲೆಂಡ್ : ಅಲೆಕ್ಸ್ ಹೇಲ್ಸ್, ಫಿಲಿಪ್ ಸಾಲ್ಟ್ , ಡೇವಿಡ್ ಮಲಾನ್, ಬೆನ್ ಡಕೆಟ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ (ನಾಯಕ), ಸ್ಯಾಮ್ ಕರ್ರಾನ್, ಡೇವಿಡ್ ವಿಲ್ಲಿ, ಲ್ಯೂಕ್ ವುಡ್, ಆದಿಲ್ ರಶೀದ್, ರಿಚರ್ಡ್ ಗ್ಲೀಸನ್

Story first published: Wednesday, September 21, 2022, 8:52 [IST]
Other articles published on Sep 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X