ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌ನಲ್ಲಿ 90ರ ದಶಕದ ಯುಗಾಂತ್ಯ: ಸೋಲಿನೊಂದಿಗೆ ರಂಗನಾ ಹೆರಾತ್‌ಗೆ ವಿದಾಯ

england beat sri lanka galle test rangana herath retires international cricket

ಗಾಲ್ಲೆ, ನವೆಂಬರ್ 9: ಅಂತಾರಾಷ್ಟ್ರೀಯ ಕ್ರಿಕೆಟ್‌ ಇತಿಹಾಸದಲ್ಲಿ 90ರ ದಶಕದ ಪ್ರತಿನಿಧಿಗಳ ಅಧ್ಯಾಯ ಅಧಿಕೃತವಾಗಿ ಅಂತ್ಯಗೊಂಡಿದೆ.

ಶ್ರೀಲಂಕಾದ ಎಡಗೈ ಸ್ಪಿನ್ನರ್ ರಂಗನಾ ಹೆರಾತ್ ತಮ್ಮ 19 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. 1999ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ 40 ವರ್ಷದ ಹೆರಾತ್, ಪ್ರಸ್ತುತದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 90ರ ದಶಕದಿಂದ ಆಡುತ್ತಿರುವ ಏಕೈಕ ಆಟಗಾರ ಎನಿಸಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಶ್ರೀಲಂಕಾದ ರಂಗನಾ ಹೆರಾತ್ ವಿದಾಯ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಶ್ರೀಲಂಕಾದ ರಂಗನಾ ಹೆರಾತ್ ವಿದಾಯ

ಇಂಗ್ಲೆಂಡ್ ವಿರುದ್ಧ ತವರಿನ ಗಾಲ್ಲೆ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಬಳಿಕ ಹೆರಾತ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗುವುದಾಗಿ ಮೊದಲೇ ಘೋಷಿಸಿದ್ದರು. ಆದರೆ, ಅವರಿಗೆ ಗೆಲುವಿನ ಉಡುಗೊರೆಯ ವಿದಾಯ ನೀಡುವುದು ಶ್ರೀಲಂಕಾ ತಂಡಕ್ಕೆ ಸಾಧ್ಯವಾಗಲಿಲ್ಲ.

ತಮ್ಮ ಕೊನೆಯ ಇನ್ನಿಂಗ್ಸ್‌ನಲ್ಲಿ ರನೌಟ್ ಆಗುವ ದುರಂತ ಮತ್ತು ಸೋಲಿನ ನಿರಾಶೆಯೊಂದಿಗೆ ಹೆರಾತ್, ಕ್ರಿಕೆಟ್‌ಗೆ ಗುಡ್‌ಬೈ ಹೇಳಿದರು. ಅವರಿಗೆ ಶ್ರೀಲಂಕಾ ಮತ್ತು ಇಂಗ್ಲೆಂಡ್ ತಂಡದ ಆಟಗಾರರು ಹಾಗೂ ಪ್ರೇಕ್ಷಕ ಸಮೂಹ ಗೌರವ ಸಲ್ಲಿಸಿತು.

ಹೀಗೂ ಬೌಲಿಂಗ್ ಮಾಡಬಹುದು!: ಮಿ.360 ಡಿಗ್ರಿ ಬೌಲರ್ ವಿಡಿಯೋ ವೈರಲ್ ಹೀಗೂ ಬೌಲಿಂಗ್ ಮಾಡಬಹುದು!: ಮಿ.360 ಡಿಗ್ರಿ ಬೌಲರ್ ವಿಡಿಯೋ ವೈರಲ್

ತಾವಾಡಿದ ಮೊದಲ ಟೆಸ್ಟ್‌ನ ಚೊಚ್ಚಲ ಇನ್ನಿಂಗ್ಸ್‌ನಲ್ಲಿಯೇ ಶತಕ ಬಾರಿಸಿದ ಇಂಗ್ಲೆಂಡ್‌ನ ವಿಕೆಟ್ ಕೀಪರ್ ಬೆನ್ ಫೋಕ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು.

ಲಂಕಾಗೆ ಸೋಲು

ಲಂಕಾಗೆ ಸೋಲು

462 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಶ್ರೀಲಂಕಾಕ್ಕೆ ಡ್ರಾ ಸಾಧಿಸುವುದೊಂದೇ ಎದುರಿಗಿದ್ದ ಅವಕಾಶವಾಗಿತ್ತು. ಕೊನೆಯ ದಿನವಾದ ಶುಕ್ರವಾರ ಇಂಗ್ಲೆಂಡ್ ಬೌಲರ್‌ಗಳು ಅದಕ್ಕೆ ಅವಕಾಶ ನೀಡಲಿಲ್ಲ.

250 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡ ಆತಿಥೇಯರು 211 ರನ್‌ ಗಳ ಹೀನಾಯ ಸೋಲು ಅನುಭವಿಸಿತು. ತಮ್ಮ ಅಂತಿಮ ಪಂದ್ಯದಲ್ಲಿ ಕೊನೆಯವರಾಗಿ ಬ್ಯಾಟಿಂಗ್‌ಗೆ ಇಳಿದ ರಂಗನಾ ಹೆರಾತ್, ಐದು ರನ್ ಗಳಿಸಿದ್ದಾಗ ದುರದೃಷ್ಟಕರ ರೀತಿಯಲ್ಲಿ ರನೌಟ್ ಆಗಿ, ತಮ್ಮ ವೃತ್ತಿ ಜೀವನವನ್ನು ಅಂತ್ಯಗೊಳಿಸಿದರು.

ಇದೇ ಮೊದಲ ಬಾರಿಗೆ ಇಂಗ್ಲೆಂಡ್ ತಂಡ ಗಾಲ್ಲೆ ಮೈದಾನದಲ್ಲಿ ಟೆಸ್ಟ್ ಗೆಲುವು ಸಾಧಿಸಿತು.

ಹೆರಾತ್ ಸಾಧನೆಗಳು

ಹೆರಾತ್ ಸಾಧನೆಗಳು

* 400 ಟೆಸ್ಟ್ ವಿಕೆಟ್ ಪಡೆದ ಮೊದಲ ಎಡಗೈ ಸ್ಪಿನ್ನರ್
* ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಎಡಗೈ ಬೌಲರ್
* 35 ವರ್ಷವಾದ ಬಳಿಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್
* ಮೈದಾನವೊಂದರಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದ ಮೂರನೇ ಬೌಲರ್
* ಶ್ರೀಲಂಕಾ ಪರ ಅತ್ಯಂತ ಸುದೀರ್ಘ ಕಾಲ ಕ್ರಿಕೆಟ್ ಆಡಿದವರು
* ಟೆಸ್ಟ್ ನಾಲ್ಕನೆಯ ಇನ್ನಿಂಗ್ಸ್‌ನಲ್ಲಿ ಹೆಚ್ಚು ಬಾರಿ 5 ವಿಕೆಟ್ ಪಡೆದವರು
* ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದ ಏಷ್ಯಾದ ಅತಿ ಹಿರಿಯ ಬೌಲರ್

ಅಭಿಮಾನಿಗಳ ಆಕ್ರೋಶಕ್ಕೆ ವಿರಾಟ್ ಕೊಹ್ಲಿ ತಣ್ಣನೆಯ ಪ್ರತಿಕ್ರಿಯೆ

ಗಾಲ್ಲೆ ಮೈದಾನ ಅಚ್ಚುಮೆಚ್ಚು

ಟೆಸ್ಟ್ ಕ್ರಿಕೆಟ್‌ನಲ್ಲಿ 400 ವಿಕೆಟ್ ಪಡೆದ ಮೊದಲ ಎಡಗೈ ಬೌಲರ್ ಎಂಬ ಕೀರ್ತಿಗೆ ಪಾತ್ರರಾಗಿರುವ ಹೆರಾತ್, 93 ಪಂದ್ಯಗಳಿಂದ 433 ವಿಕೆಟ್‌ ಪಡೆದಿದ್ದಾರೆ.

ಗಾಲ್ಲೆ ಮೈದಾನದಲ್ಲಿಯೇ ತಮ್ಮ ಮೊದಲ ಟೆಸ್ಟ್ ಆಡಿದ್ದ ಹೆರಾತ್, ಅದೇ ಮೈದಾನದಲ್ಲಿಯೇ ತಮ್ಮ ಕ್ರಿಕೆಟ್ ಜೀವನ ಮುಕ್ತಾಯಗೊಳಿಸಿದ್ದಾರೆ. ಈ ಮೈದಾನದಲ್ಲಿ ಅವರು ನೂರು ವಿಕೆಟ್ ಕಿತ್ತಿರುವುದು ವಿಶೇಷ. ಮತ್ತೊಂದು ವಿಶೇಷವೆಂದರೆ, ಪಾದಾರ್ಪಣೆಯ ಟೆಸ್ಟ್‌ನಲ್ಲಿಯೂ ಹೆರಾತ್ ರನೌಟ್ ಆಗಿದ್ದರು.

ಸಂಕ್ಷಿಪ್ತ ಸ್ಕೋರ್

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್
ಮೊದಲ ಇನ್ನಿಂಗ್ಸ್: 342/10 (97) ಬೆನ್ ಫೋಕ್ಸ್ 107, ಸ್ಯಾಮ್ ಕುರ್ರನ್ 48, ಕೀಟನ್ ಜೆನ್ನಿಂಗ್ಸ್ 46, ದಿಲ್ರುವಾನ್ ಪೆರೇರಾ 75/3, ಸುರಂಗಾ ಲಕ್ಮಲ್ 73/3
ಎರಡನೆಯ ಇನ್ನಿಂಗ್ಸ್: 322/6 (93) ಕೀಟನ್ ಜೆನ್ನಿಂಗ್ಸ್ 146*, ಬೆನ್ ಸ್ಟೋಕ್ಸ್ 62, ಬೆನ್ ಫೋಕ್ಸ್ 37, ದಿಲ್ರುವಾನ್ ಪೆರೇರಾ 94/2, ರಂಗನಾ ಹೆರಾತ್ 59/2

ಶ್ರೀಲಂಕಾ
ಮೊದಲ ಇನ್ನಿಂಗ್ಸ್: 203/10 (68) ಆಂಜೆಲೋ ಮ್ಯಾಥ್ಯೂಸ್ 52, ದಿನೇಶ್ ಚಂಡಿಮಾಲ್ 33, ನಿರೋಶನ್ ಡಿಕ್‌ವೆಲ್ಲಾ 28, ಮೊಯೀನ್ ಅಲಿ 66/4, ಆದಿಲ್ ರಶೀದ್ 30/2, ಜ್ಯಾಕ್ ಲೀಚ್ 41/2
ಎರಡನೆಯ ಇನ್ನಿಂಗ್ಸ್: 250/10 (85.1) ಆಂಜೆಲೋ ಮ್ಯಾಥ್ಯೂಸ್ 53, ಕುಸಾಲ್ ಮೆಂಡಿಸ್ 45, ದಿಲ್ರುವಾನ್ ಪೆರೇರಾ 30, ಮೊಯೀನ್ ಅಲಿ 71/4, ಜ್ಯಾಕ್ ಲೀಚ್ 60/3
ಫಲಿತಾಂಶ: ಇಂಗ್ಲೆಂಡ್‌ಗೆ 211 ರನ್ ಗೆಲುವು, ಸರಣಿಯಲ್ಲಿ 1-0 ಮುನ್ನಡೆ.

ಭಾರತದಲ್ಲಿ ಏಕಿದ್ದೀರಾ? ಬೇರೆ ದೇಶಕ್ಕೆ ಹೋಗಿ: ಕೊಹ್ಲಿ ಮಾತಿಗೆ ಟ್ವಿಟ್ಟಿಗರ ಆಕ್ರೋಶ

Story first published: Friday, November 9, 2018, 18:05 [IST]
Other articles published on Nov 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X