ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಇಂಗ್ಲೆಂಡ್‌ ಹೊಸ ದಾಖಲೆ, ಭಾರತಕ್ಕೂ ಸ್ಥಾನ!

England become 1st team to score half-a-million Test runs

ಲಂಡನ್, ಜನವರಿ 25: ಟೆಸ್ಟ್‌ ಕ್ರಿಕೆಟ್‌ನಲ್ಲಿ 5,00,000 ರನ್ ಪೂರೈಸಿದ ವಿಶ್ವದ ಮೊದಲ ತಂಡವಾಗಿ ಇಂಗ್ಲೆಂಡ್ ಗುರುತಿಸಿಕೊಂಡಿದೆ. ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ಅಂಗ್ಲರು ಈ ಸಾಧನೆ ಮೆರೆದಿದ್ದಾರೆ.

ರಾಹುಲ್ ಆಟಕ್ಕೆ ಮನಸೋತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿರಾಹುಲ್ ಆಟಕ್ಕೆ ಮನಸೋತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಶುಕ್ರವಾರದ (ಜನವರಿ 24) ಆಟದ ವೇಳೆ ಇಂಗ್ಲೆಂಡ್‌ ಇನ್ನಿಂಗ್ಸ್‌ನಲ್ಲಿ ನಾಯಕ ಜೋ ರೂಟ್‌ ಅವರ ಸಿಂಗಲ್‌ ಮೂಲಕ ತಂಡ, ಟೆಸ್ಟ್ ಕ್ರಿಕೆಟ್‌ನಲ್ಲಿ 500,000 ರನ್ ಮೈಲಿಗಲ್ಲು ಸ್ಥಾಪಿಸಿತು. 1022 ಪಂದ್ಯಗಳಲ್ಲಿ ಇಂಗ್ಲೆಂಡ್‌ ಈ ದಾಖಲೆ ನಿರ್ಮಿಸಿದೆ.

ಟೀಮ್ ಸೆಲೆಕ್ಷನ್ ಕಮಿಟಿಗೆ ಘಟಾನುಘಟಿಗಳಿಂದ ಅರ್ಜಿ: ಯಾರೆಲ್ಲಾ ಇದ್ದಾರೆ ನೋಡಿ!ಟೀಮ್ ಸೆಲೆಕ್ಷನ್ ಕಮಿಟಿಗೆ ಘಟಾನುಘಟಿಗಳಿಂದ ಅರ್ಜಿ: ಯಾರೆಲ್ಲಾ ಇದ್ದಾರೆ ನೋಡಿ!

1
46039

ಟೆಸ್ಟ್ ಮಾದರಿಯಲ್ಲಿ ಅತೀ ಹೆಚ್ಚು ರನ್‌ ದಾಖಲೆ ಮಾಡಿರುವ ದೇಶಗಳಾವುವು? ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂಬಿತ್ಯಾದಿ ಮಾಹಿತಿ ಕೆಳಗಿದೆ.

ಆಸ್ಟ್ರೇಲಿಯಾಕ್ಕೆ ದ್ವಿತೀಯ ಸ್ಥಾನ

ಆಸ್ಟ್ರೇಲಿಯಾಕ್ಕೆ ದ್ವಿತೀಯ ಸ್ಥಾನ

ಟೆಸ್ಟ್‌ನಲ್ಲಿ ಅತ್ಯಧಿಕ ರನ್ ದಾಖಲೆ ಸಾಲಿನಲ್ಲಿ ಆಸ್ಟ್ರೇಲಿಯಾ ತಂಡ ದ್ವಿತೀಯ ಸ್ಥಾನದಲ್ಲಿದೆ. ಆಸೀಸ್ 830 ಟೆಸ್ಟ್ ಪಂದ್ಯಗಳಲ್ಲಿ 432,706 ರನ್ ಕಲೆ ಹಾಕಿದೆ. ಇನ್ನು ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ತೃತೀಯ ಸ್ಥಾನದಲ್ಲಿದೆ.

ಟೀಮ್ ಇಂಡಿಯಾ ತೃತೀಯ

ಟೀಮ್ ಇಂಡಿಯಾ ತೃತೀಯ

ಟೆಸ್ಟ್ ಕ್ರಿಕೆಟ್‌ನಲ್ಲಿ ನಂಬರ್ ಒನ್ ರ್ಯಾಂಕಿಂಗ್‌ನಲ್ಲಿರುವ ಭಾರತ ಒಟ್ಟು 540 ಟೆಸ್ಟ್ ಪಂದ್ಯಗಳಲ್ಲಿ 273,518 ರನ್ ಗಳಿಸಿ ಅತ್ಯಧಿಕ ರನ್ ದಾಖಲೆಯಲ್ಲಿ ತೃತೀಯ ಸ್ಥಾನದಲ್ಲಿದೆ. 4ನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ 545 ಪಂದ್ಯಗಳಲ್ಲಿ 270,441 ರನ್ ಕಲೆ ಹಾಕಿದೆ.

ಇಂಗ್ಲೆಂಡ್ ಮತ್ತೊಂದು ದಾಖಲೆ

ಇಂಗ್ಲೆಂಡ್ ಮತ್ತೊಂದು ದಾಖಲೆ

ಅಷ್ಟೇ ಅಲ್ಲ, ದಕ್ಷಿಣ ಆಫ್ರಿಕಾ-ಇಂಗ್ಲೆಂಡ್‌ ಇದೇ ಟೆಸ್ಟ್ ಸರಣಿಯ 3ನೇ ಪಂದ್ಯದಲ್ಲಿ ಆಡಿದ್ದ ಇಂಗ್ಲೆಂಡ್‌, ವಿದೇಶಿ ನೆಲದಲ್ಲಿ 500 ಟೆಸ್ಟ್ ಪಂದ್ಯಗಳನ್ನಾಡಿದ ವಿಶ್ವದ ಮೊದಲ ತಂಡವೆಂಬ ದಾಖಲೆಗೂ ಕಾರಣವಾಗಿತ್ತು. ಇದೇ ಸಾಧನೆಯಲ್ಲಿ ಆಸ್ಟ್ರೇಲಿಯಾ 404 ಪಂದ್ಯಗಳಿಂದ ದ್ವಿತೀಯ ಸ್ಥಾನ ಪಡೆದಿದೆ.

ಶ್ರೇಯಾಂಕ 5ರಲ್ಲಿ ಇಂಗ್ಲೆಂಡ್‌

ಶ್ರೇಯಾಂಕ 5ರಲ್ಲಿ ಇಂಗ್ಲೆಂಡ್‌

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಇಂಗ್ಲೆಂಡ್‌, 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಮುನ್ನಡೆಯಲ್ಲಿದೆ. ಅಂದ್ಹಾಗೆ, ಸದ್ಯದ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಮೊದಲ ಐದು ಸ್ಥಾನಗಳಲ್ಲಿವೆ.

Story first published: Saturday, January 25, 2020, 17:21 [IST]
Other articles published on Jan 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X