ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೊಚ್ಚಿಗೆದ್ದ ರೋಚ್, ಬರೀ 77 ರನ್‌ಗೆ ಟೆಸ್ಟ್ ಇನ್ನಿಂಗ್ಸ್‌ ಮುಗಿಸಿದ ಇಂಗ್ಲೆಂಡ್!

England bowled out for 77 in first innings against West Indies

ಬ್ರಿಡ್ಜ್‌ಟೌನ್, ಜನವರಿ 25: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಇಂಗ್ಲೆಂಡ್ ತಂಡ, ಟೆಸ್ಟ್ ಪಂದ್ಯವೊಂದರಲ್ಲಿ ಕೇವಲ 77 ರನ್ನಿಗೆ ಇನ್ನಿಂಗ್ಸ್‌ ಮುಗಿಸುವ ಮೂಲಕ ಅಚ್ಚರಿಗೆ ಕಾರಣವಾಯಿತು. ಇಂಗ್ಲೆಂಡ್‌ನ ಇಂಥ ಕೆಟ್ಟ ದಾಖಲೆಗೆ ಕಾರಣವಾಗಿದ್ದು ವೆಸ್ಟ್ ಇಂಡೀಸ್ ಬೌಲರ್ ಕೆಮರ್ ರೋಚ್.

ಪಂದ್ಯದ Live Score ಕೆಳಗಿದೆ. ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44296

ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡ, ಕೆನ್ಸಿಂಗ್ಟನ್ ಓವಲ್‌ನಲ್ಲಿ ಆತಿಥೇಯ ವಿಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವಾಡುತ್ತಿದೆ. ಈ ವೇಳೆ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಕೆಮರ್ 11 ಓವರ್‌ ಎಸೆದು, 17 ರನ್ ನೀಡಿ 5 ವಿಕೆಟ್ ಉರುಳಿಸಿ ಗಮನ ಸೆಳೆದರು.

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ವೆಸ್ಟ್ ಇಂಡೀಸ್ ತಂಡ, ಶಿಮ್ರಾನ್ ಹೆಟ್ಮರ್ 81, ರೋಸ್ಟನ್ ಚೇಸ್ 54, ಶೈ ಹೋಪ್ 57 ರನ್ ನೆರವಿನೊಂದಿಗೆ 101.3 ಓವರ್ ಮುಕ್ತಾಯಕ್ಕೆ 289 ರನ್ ಗಳಿಸಿತು. ಇಂಗ್ಲೆಂಡ್ ಪರ ಕೀಟನ್ ಜೆನ್ನಿಂಗ್ಸ್ ಅವರ 17 ರನ್ನೇ ವೈಯಕ್ತಿಕ ದೊಡ್ಡ ಮೊತ್ತ. ಆಂಗ್ಲರು 30.2 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 77 ರನ್ ಪೇರಿಸುವುದರೊಂದಿಗೆ ಮೊದಲ ಇನ್ನಿಂಗ್ಸ್ ಮುಗಿಸಿದರು.

ಅಮಾನತು ತೆರೆವು: ತಂಡ ಸೇರಿಕೊಳ್ಳಲಿದ್ದಾರೆ ಹಾರ್ದಿಕ್, ಕೆಎಲ್ ರಾಹುಲ್ಅಮಾನತು ತೆರೆವು: ತಂಡ ಸೇರಿಕೊಳ್ಳಲಿದ್ದಾರೆ ಹಾರ್ದಿಕ್, ಕೆಎಲ್ ರಾಹುಲ್

ವೆಸ್ಟ್ ಇಂಡೀಸ್ ತಂಡ 2002ರಲ್ಲಿ ಆಸ್ಟ್ರೇಲಿಯಾವನ್ನು 79 ರನ್ನಿಗೆ, 2007ರಲ್ಲಿ ಶ್ರೀಲಂಕಾವನ್ನು 81 ರನ್ನಿಗೆ, ಇದೇ ತಂಡವನ್ನು 2009ರಲ್ಲಿ ಕಿಂಗ್‌ಸ್ಟನ್‌ನಲ್ಲಿ 51 ರನ್ನಿಗೆ, 2012ರಲ್ಲಿ ಪಾಕಿಸ್ತಾನವನ್ನು 72 ರನ್ನಿಗೆ, 2018ರಲ್ಲಿ ನ್ಯೂಜಿಲ್ಯಾಂಡನ್ನು 58 ರನ್ನಿಗೆ ಇನ್ನಿಂಗ್ಸ್‌ ಮುಗಿಸುವಂತೆ ನೋಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Story first published: Friday, January 25, 2019, 12:54 [IST]
Other articles published on Jan 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X