ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC Men's Test Cricketer of 2022: ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಗೆದ್ದ ಬೆನ್ ಸ್ಟೋಕ್ಸ್

England Captain Ben Stokes Wins ICC Mens Test Cricketer of the Year 2022

ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರು ಕೆಂಪು ಬಾಲ್ ಕ್ರಿಕೆಟ್‌ನಲ್ಲಿ ತಮ್ಮ ಅತ್ಯುತ್ತಮ ನಾಯಕತ್ವಕ್ಕಾಗಿ 2022ರ ವರ್ಷದ ಐಸಿಸಿ ಪುರುಷರ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಭಾಜನರಾದರು.

ಬೆನ್ ಸ್ಟೋಕ್ಸ್ 2022ರ ವರ್ಷದ ಟೆಸ್ಟ್ ಕ್ರಿಕೆಟ್‌ನಲ್ಲಿ 36.25ರ ಸರಾಸರಿಯಲ್ಲಿ 870 ರನ್ ಗಳಿಸಿದರು ಮತ್ತು 31.19ರ ಸರಾಸರಿಯಲ್ಲಿ 26 ವಿಕೆಟ್‌ಗಳನ್ನು ಪಡೆದು ಮಿಂಚಿದರು.

ಬೆನ್ ಸ್ಟೋಕ್ಸ್ ಅವರು ಇಂಗ್ಲೆಂಡ್ ತಂಡದ ಹೊಸ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಜೊತೆಗೂಡಿ ಇಂಗ್ಲೆಂಡ್ ಪುರುಷರ ಟೆಸ್ಟ್ ತಂಡದ ಆಟದ ಸ್ವರೂಪ ಮತ್ತು ಶೈಲಿಯನ್ನು ಸಂಪೂರ್ಣವಾಗಿ ಬದಲಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

ICC Men's ODI Cricketer Of 2022: ಸತತ 2ನೇ ಬಾರಿ ಐಸಿಸಿ ಪ್ರಶಸ್ತಿ ಗೆದ್ದ ಬಾಬರ್ ಅಜಂICC Men's ODI Cricketer Of 2022: ಸತತ 2ನೇ ಬಾರಿ ಐಸಿಸಿ ಪ್ರಶಸ್ತಿ ಗೆದ್ದ ಬಾಬರ್ ಅಜಂ

ಅಂದಿನಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡ ಪ್ರಾಬಲ್ಯ ಸಾಧಿಸಲು ನೆರವಾಗಿದೆ. ಇದೇ ವೇಳೆ ನಾಯಕನಾಗಿಯೂ, ಬೆನ್ ಸ್ಟೋಕ್ಸ್ ಅವರು ಬ್ಯಾಟ್ ಮತ್ತು ಬಾಲ್‌ನಲ್ಲಿ ಇಂಗ್ಲೆಂಡ್‌ ತಂಡದ ಪರ ಆಕ್ರಮಣಕಾರಿ ವಿಧಾನಕ್ಕೆ ಸ್ಥಿರವಾದ ಆಡುತ್ತಿದ್ದಾರೆ.

ಇಂಗ್ಲೆಂಡ್ ತಂಡದ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಬೆನ್ ಸ್ಟೋಕ್ಸ್ ಅವರು 10 ಟೆಸ್ಟ್‌ ಪಂದ್ಯಗಳಲ್ಲಿ 9 ಗೆಲುವುಗಳಿಗೆ ಮುನ್ನಡೆಸಿದ್ದಾರೆ. ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಸರಣಿ ವಿಜಯಗಳನ್ನು ಪೂರ್ಣಗೊಳಿಸಿದ್ದಾರೆ.

England Captain Ben Stokes Wins ICC Mens Test Cricketer of the Year 2022

ನಂತರ ಮುಂದೂಡಿಕೆಯಾಗಿದ್ದ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಭಾರತವನ್ನು ಸೋಲಿಸಿ 2-2ರಲ್ಲಿ ಸರಣಿಯನ್ನು ಸಮಬಲಗೊಳಿಸಿದರು. ತವರಿನಿಂದ ಹೊರಗೆ 3-0 ಅಂತರದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿತು. ಪಾಕಿಸ್ತಾನ ನೆಲದಲ್ಲಿ ಇಂಗ್ಲೆಂಡ್‌ನ ಅತ್ಯುತ್ತಮ ಅಂತರದ ಸರಣಿ ಗೆಲುವಾಗಿತ್ತು.

ಬೆನ್ ಸ್ಟೋಕ್ಸ್ ನಾಯಕನಾಗಿ ನೇಮಕಗೊಳ್ಳುವ ಮೊದಲು, ಇಂಗ್ಲೆಂಡ್ ತಂಡ ಸತತ ನಾಲ್ಕು ಸರಣಿಗಳಲ್ಲಿ ಸೋತಿತ್ತು ಮತ್ತು ಅವರ ಹಿಂದಿನ 17 ಟೆಸ್ಟ್‌ ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆಲುವು ಸಾಧಿಸಿತ್ತು.

ಇಂಗ್ಲೆಂಡ್ ತಂಡದ ನಾಯಕನಾಗಿಯೂ ಬೆನ್ ಸ್ಟೋಕ್ಸ್ ಅತ್ಯಂತ ಪ್ರಭಾವಶಾಲಿಯಾಗಿದ್ದಾರೆ. ಮೈದಾನದಲ್ಲಿ ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಂಡರು ಮತ್ತು ವರ್ಷವಿಡೀ ತನ್ನ ಬೌಲರ್‌ಗಳನ್ನು ಉತ್ತಮವಾಗಿ ಬಳಸಿಕೊಂಡರು. ತಂಡಕ್ಕೆ ಅಗತ್ಯವಿದ್ದಾಗ ಹೊಸ ಅಟಗಾರರನ್ನು ಪರಿಚಯಿಸಿ, ಅವರಿಂದ ಅತ್ಯುತ್ತಮ ಪ್ರದರ್ಶನ ಹೊರ ತೆಗೆಸಿದರು.

ICC Emerging Women's Cricketer: 2022ರ ಉದಯೋನ್ಮುಖ ಮಹಿಳಾ ಕ್ರಿಕೆಟರ್ ಗೌರವ ಪಡೆದ ರೇಣುಕಾ ಸಿಂಗ್ICC Emerging Women's Cricketer: 2022ರ ಉದಯೋನ್ಮುಖ ಮಹಿಳಾ ಕ್ರಿಕೆಟರ್ ಗೌರವ ಪಡೆದ ರೇಣುಕಾ ಸಿಂಗ್

ಬೆನ್ ಸ್ಟೋಕ್ಸ್ 2022ರಲ್ಲಿ 36.25 ಸರಾಸರಿಯಲ್ಲಿ 870 ರನ್ ಗಳಿಸಿದರು ಮತ್ತು 71.21ರ ಆಕ್ರಮಣಕಾರಿ ಸ್ಟ್ರೈಕ್‌ರೇಟ್‌ನೊಂದಿಗೆ ಎರಡು ಶತಕಗಳನ್ನು ಬಾರಿಸಿದರು.

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 103 ರನ್ ಅವರ ವರ್ಷದ ಅಸಾಧಾರಣ ಪ್ರದರ್ಶನವಾಗಿತ್ತು.

ಇನ್ನು ಐಸಿಸಿ ವರ್ಷದ ಪುರುಷರ ಟೆಸ್ಟ್ ಕ್ರಿಕೆಟಿಗ ಸ್ಪರ್ಧೆಯಲ್ಲಿ ಸಹವರ್ತಿ ಜಾನಿ ಬೈರ್‌ಸ್ಟೋವ್ ನಾಮನಿರ್ದೇಶನಗೊಂಡಿದ್ದರು. ಅಲ್ಲದೆ, ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ ಮತ್ತು ದಕ್ಷಿಣ ಆಫ್ರಿಕಾದ ಬೌಲರ್ ಕಗಿಸೊ ರಬಾಡ ಅವರನ್ನೂ ಕೂಡ ಹಿಂದಿಕ್ಕೆ ಪ್ರಶಸ್ತಿ ಗೆದ್ದರು. 2022ರ ಐಸಿಸಿ ವರ್ಷದ ಪುರುಷರ ಟೆಸ್ಟ್ ತಂಡದಲ್ಲಿ ಇವರೆಲ್ಲರೂ ಸ್ಥಾನ ಪಡೆದಿದ್ದಾರೆ. ಆ ತಂಡಕ್ಕೂ ಬೆನ್ ಸ್ಟೋಕ್ಸ್ ನಾಯಕನಾಗಿದ್ದಾರೆ.

Story first published: Thursday, January 26, 2023, 15:35 [IST]
Other articles published on Jan 26, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X