ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಾರಕ್ಕೆ ಏಳೇದಿನ, ಹತ್ತಲ್ಲ: ಭಾರತದ ಬೆನ್ನಿಗೆ ನಿಂತ ಇಂಗ್ಲೆಂಡ್ ಕೋಚ್!

England coach Trevor Bayliss defends India after Lord’s defeat

ಲಂಡನ್, ಆಗಸ್ಟ್14: ಟೆಸ್ಟ್ ಸರಣಿಯ ಎರಡು ಪಂದ್ಯಗಳನ್ನು ಕಳೆದುಕೊಂಡಿರುವ ಭಾರತವನ್ನು ಎಲ್ಲರೂ ಟೀಕಿಸುತ್ತಿರುವಾಗ ಇಂಗ್ಲೆಂಡ್ ಕೋಚ್ ಟ್ರೆವರ್ ಬೇಲಿಸ್ ಸಮರ್ಥಿಸಿಕೊಂಡಿದ್ದಾರೆ. ಪ್ರವಾಸಿಗರು ಸರಿಯಾದ ತರಬೇತಿಯಲ್ಲಿ ಪಾಲ್ಗೊಳ್ಳಲಿಲ್ಲ. ಇಲ್ಲದಿದ್ದರೆ ಗೆಲ್ಲುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಮಹಿಳೆಯರ ಚಾಲೆಂಜರ್ಸ್ ಟಿ 20 ಕ್ರಿಕೆಟ್: ಇಂಡಿಯಾ ರೆಡ್ ತಂಡಕ್ಕೆ ಗೆಲುವುಮಹಿಳೆಯರ ಚಾಲೆಂಜರ್ಸ್ ಟಿ 20 ಕ್ರಿಕೆಟ್: ಇಂಡಿಯಾ ರೆಡ್ ತಂಡಕ್ಕೆ ಗೆಲುವು

ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 0-2ಯ ಹಿನ್ನೆಡೆ ಅನುಭವಿಸಿದೆ. ಹೀಗಾಗಿ ಕ್ರೀಡಾವಲಯದ ಟೀಕೆಗೆ ಭಾರತ ಕ್ರಿಕೆಟ್ ತಂಡ ಒಳಗಾಗುತ್ತಲೇ ಇದೆ. ಈ ನಡುವೆ ಇಂಗ್ಲೆಂಡ್ ಕೋಚ್ ಟ್ರೆವರ್ ಭಾರತದ ಬೆನ್ನಿಗೆ ನಿಲ್ಲುವ ಮೂಲಕ ತಾನು ಅಪ್ಪಟ 'ಕೋಚ್' ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ.

'ಆಸ್ಟ್ರೇಲಿಯಾ, ಭಾರತ ಮತ್ತ ಇಂಗ್ಲೆಂಡ್ ನಂತ ತಂಡಗಳು ಹೆಚ್ಚು ಪಂದಗ್ಯಗಳನ್ನಾಡಿವೆ. ಹೆಚ್ಚು ಅಭ್ಯಾಸ ಪಂದ್ಯಗಳನ್ನು ಆಡಿದಷ್ಟೂ ತಂಡ ಹೆಚ್ಚು ಗಟ್ಟಿಯಾಗುತ್ತದೆ. ಹೀಗಾಗಿ ಹೆಚ್ಚಿನ ತಂಡಗಳು ಅವು ಆಡುವುದಕ್ಕಿಂತ ಹೆಚ್ಚಿನ ಅಭ್ಯಾಸ ಪಂದ್ಯಗಳನ್ನು ಆಡಲು ಬಯಸುತ್ತವೆ. ಭಾರತ ಹೆಚ್ಚು ಅಭ್ಯಾಸ ಪಂದ್ಯಗಳನ್ನಾಡದ್ದು ಸೋಲಿಗೆ ಕಾರಣವಾಗಿದೆಯಷ್ಟೇ' ಎಂದು ಬೇಲಿಸ್ ಹೇಳಿದರು.

'ಹೊರ ದೇಶಕ್ಕೆ ಪ್ರವಾಸ ಸಂದರ್ಭ ಇಂಗ್ಲೆಂಡ್ ಕೂಡ ಇಂಥದ್ದೇ ಪರಿಸ್ಥಿತಿಯನ್ನು ಎದುರಿಸಬಲ್ಲದು. ಆಗೆಲ್ಲ ನಾವು ಯೋಚಿಸೋದಿಷ್ಟೆ, ಅಭ್ಯಾಸ ಪಂದ್ಯಗಳು ಸರಿಯಾಗಿ ನಡೆದಿತ್ತೇ ಎಂದು. ಒಟ್ಟಿನಲ್ಲಿ ಅಭ್ಯಾಸ ಪಂದ್ಯಗಳಲ್ಲಿ ತೊಡಗಿಕೊಂಡಷ್ಟೂ ತಂಡಕ್ಕೆ ಅನುಕೂಲ ಹೆಚ್ಚು. ಆದರೆ ಬಯಸಿದಷ್ಟು ಅಭ್ಯಾಸ ಪಂದ್ಯಗಳನ್ನಾಡಲು ಸಾಧ್ಯವಿಲ್ಲ. ಯಾಕೆಂದರೆ ವಾರಕ್ಕಿರೋದು ಬರೀ ಏಳುದಿನ, ಹತ್ತಲ್ಲವಲ್ಲ' ಎಂದಿದ್ದಾರೆ.

Story first published: Tuesday, August 14, 2018, 18:16 [IST]
Other articles published on Aug 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X