ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೂ ಅನುಮತಿ ನೀಡಿದ ಮಂಡಳಿ

England county cricket to resume on August 1, training from July

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಚಾಲನೆ ದೊರೆಯುತ್ತಿರುವ ಬೆನ್ನಲ್ಲೇ ಇಂಗ್ಲೆಂಡ್ ನ ಕೌಂಟಿ ಚಾಂಪಿಯನ್ ಶಿಪ್ ನಡೆಸಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಅನುಮತಿ ನೀಡಿದೆ. ಹೀಗಾಗಿ ಆಗಸ್ಟ್ ಒಂದರಿಂದ ಆಂಗ್ಲರ ನಾಡಿನಲ್ಲಿ ಕೌಂಟಿ ಕ್ರಿಕೆಟ್ ಆರಂಭವಾಗಲಿದೆ.

ಈ ಮೊದಲು ಕೌಂಟಿ ಚಾಂಪಿಯನ್ ಶಿಪ್ ಎಪ್ರಿಲ್ 12ರಿಂದ ಆರಂಭವಾಗಲಿತ್ತು. ಆದರೆ ಕೊರೊನಾ ವೈರಸ್ ಸೋಂಕು ಭೀತಿಯ ಕಾರಣ ಮುಂದೂಡಲಾಗಿತ್ತು. ಇಂಗ್ಲೆಂಡ್‌ನಲ್ಲಿ ಕೊರೊನಾ ವೈರಸ್‌ನ ಪ್ರಭಾವ ನಿಯಂತ್ರಣದಲ್ಲಿರುವ ಹಿನ್ನೆಲೆಯಲ್ಲಿ ಈಗ ಆಗಸ್ಟ್ ಒಂದರಿಂದ ನಡೆಸಲು ಇಸಿಬಿ ಅನುಮತಿ ನೀಡಿದೆ.

ಐಪಿಎಲ್ ಇತಿಹಾಸದಲ್ಲಿ ಹಿರಿ ವಯಸ್ಸಿನಲ್ಲಿ ಶತಕಗಳಿಸಿದ ಟಾಪ್ 5 ಆಟಗಾರರುಐಪಿಎಲ್ ಇತಿಹಾಸದಲ್ಲಿ ಹಿರಿ ವಯಸ್ಸಿನಲ್ಲಿ ಶತಕಗಳಿಸಿದ ಟಾಪ್ 5 ಆಟಗಾರರು

ಇನ್ನು ಕೌಂಟಿ ಚಾಂಪಿಯನ್‌ಷಿಪ್‌ನ ಯೋಜನಗಳು ಮತ್ತು ಪಂದ್ಯಗಳ ವೇಳಾಪಟ್ಟಿಯನ್ನು ಇನ್ನಷ್ಟೇ ಅಂತಿಮಗೊಳಿಸಬೇಕಾಗಿದೆ. ಜುಲೈನಿಂದ ಆಟಗಾರರ ತರಬೇತಿಗೆ ಚಾಲನೆ ದೊರೆಯಲಿದೆ. 18 ಪ್ರಥಮ ದರ್ಜೆ ತಂಡಗಳ ನಡುವೆ ಕೌಂಟಿ ಕ್ರಿಕೆಟ್ ಚಾಂಪಿಯನ್ ಶಿಪ್ ನಡೆಯಲಿದೆ.

ಆಟಗಾರರು, ತರಬೇತುದಾರರು, ಅಧಿಕಾರಿಗಳ ಸುರಕ್ಷತೆಯೆ ನಮ್ಮ ಪ್ರಥಮ ಆದ್ಯತೆಯಾಗಿರಲಿದೆ. ಚರ್ಚೆ ನಡೆಸಿ, ಸರ್ಕಾರದ ಸಲಹೆಗಳನ್ನು ಪಾಲಿಸಿ ಒಂದು ಉತ್ತಮ ಯೋಜನೆ ರೂಪಿಸಲಾಗುತ್ತದೆ ಎಂದು ಇಸಿಬಿ ಸಿಇಒ ಟಾಮ್ ಹ್ಯಾರಿಸನ್ ಹೇಳಿದ್ದಾರೆ.

ಭಾರತ ಪಾಕ್ ಆಟಗಾರರ ನಡುವಿನ ಬಾಂಧವ್ಯದ ಕುತೂಹಲಕಾರಿ ಸಂಗತಿ ಹೇಳಿದ ಆಕಾಶ್ ಚೋಪ್ರಾಭಾರತ ಪಾಕ್ ಆಟಗಾರರ ನಡುವಿನ ಬಾಂಧವ್ಯದ ಕುತೂಹಲಕಾರಿ ಸಂಗತಿ ಹೇಳಿದ ಆಕಾಶ್ ಚೋಪ್ರಾ

ಇಂಗ್ಲೆಂಡ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮುಂದಿನ ವಾರವೇ ಚಾಲನೆ ದೊರೆಯಲಿದೆ. ಕೊರೊನಾ ವೈರಸ್ ಬಳಿಕ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳು ಮುಖಾಮುಖಿಯಾಗುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರು ಚಾಲನೆ ದೊರೆಯಲಿದೆ.

Story first published: Thursday, July 2, 2020, 9:43 [IST]
Other articles published on Jul 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X