ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಪುನಾರಂಭ: ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಟೆಸ್ಟ್‌ನ ಪ್ರಸ್ತಾಪಿತ ದಿನಾಂಕ ಘೋಷಣೆ

England Cricket Announces Proposed Dates, Venues For West Indies Test Series

ಕೊರೊನಾ ವೈರಸ್‌ನ ಬಳಿಕ ಮತ್ತೆ ಕ್ರಿಕೆಟ್ ಆರಂಭಕ್ಕೆ ವೇದಿಕೆ ಸಿದ್ದವಾಗುತ್ತಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಇಂಗ್ಲೆಂಡ್‌ಗೆ ಹಾರಲಿದೆ. ಈ ಸರಣಿಯ ಪ್ರಸ್ತಾಪಿತ ದಿನಾಂಕ ಮತ್ತು ಪಂದ್ಯದ ಸ್ಥಳಗಳನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಘೋಷಿಸಿದ್ದು ಯುಕೆ ಸರ್ಕಾರದ ಅನುಮತಿ ಮಾತ್ರವೇ ಬಾಕಿಯಿದೆ.

ಈ ಸರಣಿಯನ್ನು ಸಂಪೂರ್ಣ ಜೀವ ರಕ್ಷಕ ವಾತಾವರಣದಲ್ಲಿ ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಮೊದಲ ಟೆಸ್ಟ್ ಪಂದ್ಯ ಸೌಥಾಂಪ್ಟನ್‌ನ ರೋಸ್ ಬೌಲ್ ಸ್ಟೇಡಿಯಮ್‌ನಲ್ಲಿ ನಡೆಯಲಿದೆ. ಮೊದಲ ಟೆಸ್ಟ್ ಜುಲೈ 8-12ರ ಮಧ್ಯೆ ನಡೆಸಲು ಉದ್ದೇಶಿಸಲಾಗಿದೆ.

ಪದಾರ್ಪಣಾ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದು ನಿಬ್ಬೆರಗಾಗಿಸಿದ ನಾಲ್ವರು ಬೌಲರ್‌ಗಳುಪದಾರ್ಪಣಾ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದು ನಿಬ್ಬೆರಗಾಗಿಸಿದ ನಾಲ್ವರು ಬೌಲರ್‌ಗಳು

ಎರಡು ಮತ್ತು ಮೂರನೇ ಟೆಸ್ಟ್ ಪಂದ್ಯಗಳು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಮ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಎರಡನೇ ಪಂದ್ಯ ಜುಲೈ 16 -20ರಂದು ನಡೆದರೆ ಮೂರನೇ ಪಂದ್ಯ ಜುಲೈ 24-28ರ ಮಧ್ಯೆ ನಡೆಯಲಿದೆ. ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರಿಕೆಟ್ ಅಂಗಳ ತರಬೇತಿಗಾಗಿ ಆಯ್ಕೆ ಮಾಡಲಾಗಿದೆ.

ಈಗಾಗಲೇ ತೀರ್ಮಾನ ಕೈಗೊಂಡಿರುವ ಪ್ರಕಾರ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ನೂನ್ 6ನೇ ತಾರೀಕಿನಂದು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. 9ನೇ ತಾರೀಕಿನಂದು ಇಂಗ್ಲೆಂಡ್‌ಗೆ ತಲುಪಲಿದ್ದು ಓಲ್ಡ್ ಟ್ರಾಫರ್ಡ್‌ನಲ್ಲಿ ತರಬೇತಿಯ ಜೊತೆಗೆ ಮೂರು ವಾರಗಳ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ.

ನೆಚ್ಚಿನ ಆಲ್‌ ಟೈಮ್ ಒಡಿಐ ತಂಡ ಪ್ರಕಟಿಸಿದ ಶ್ರೀಶಾಂತ್, ದಾದಾ ನಾಯಕನೆಚ್ಚಿನ ಆಲ್‌ ಟೈಮ್ ಒಡಿಐ ತಂಡ ಪ್ರಕಟಿಸಿದ ಶ್ರೀಶಾಂತ್, ದಾದಾ ನಾಯಕ

ಈ ಸರಣಿ ಈ ತಿಂಗಳಲ್ಲೇ ಆರಂಭವಾಗಬೇಕಾಗಿತ್ತು. ಆದರೆ ಕೊರೊನಾ ವೈರಸ್‌ನ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ. ಕೊರೊನಾ ವೈರಸ್‌ನ ನಂತರ ಸ್ಥಗಿತವಾಗಿರುವ ಕ್ರಿಕೆಟ್ ಪಂದ್ಯಕ್ಕೆ ಈ ಸರಣಿಯ ಮೂಲಕ ಮತ್ತೆ ಚಾಲನೆ ದೊರೆಯಲಿದೆ. ಹೀಗಾಗಿ ಈ ಟೆಸ್ಟ್ ಸರಣಿಯ ಮೇಲೆ ಅಭಿಮಾನಿಗಳು ಸಾಕಷ್ಟು ಕುತೂಹಲದಿಂದ ಕಣ್ಣಿಟ್ಟಿದ್ದಾರೆ.

Story first published: Tuesday, June 2, 2020, 21:03 [IST]
Other articles published on Jun 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X