ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ಮೂಲದ ಡಾಕ್ಟರ್‌ಗೆ ಇಂಗ್ಲೆಂಡ್‌ ಕ್ರಿಕೆಟ್ ತಂಡದಿಂದ ವಿಶೇಷ ಗೌರವ

England cricket team honours Indian-origin doctors

ಲಂಡನ್, ಜುಲೈ 10: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿರುವವರಿಗೆ ಗೌರವ ಸಲ್ಲಿಸಲು ಮುಂದಾಗಿರುವ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಇದಕ್ಕಾಗಿ ವಿಭಿನ್ನ ಕ್ರಮ ಕೈಗೊಂಡಿದೆ. ಆರೋಗ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದವರ ಹೆಸರಿರುವ ಜೇರ್ಸಿಯನ್ನು ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಟೆಸ್ಟ್ ಪಂದ್ಯದ ವೇಳೆ ಧರಿಸಲು ಇಸಿಬಿ ನಿರ್ಧರಿಸಿದೆ.

ಇಂಗ್ಲೆಂಡ್ vs ವೆಸ್ಟ್ ಇಂಡೀಸ್, Live: ಕ್ರೇಗ್ ಬ್ರಾಥ್‌ವೇಟ್ ಅರ್ಧ ಶತಕದಾಟಇಂಗ್ಲೆಂಡ್ vs ವೆಸ್ಟ್ ಇಂಡೀಸ್, Live: ಕ್ರೇಗ್ ಬ್ರಾಥ್‌ವೇಟ್ ಅರ್ಧ ಶತಕದಾಟ

ಕೊರೊನಾವೈರಸ್ ಭೀತಿ ಶುರುವಾಗಿ ನಿಲುಗಡೆಯಾಗಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್, 117 ದಿನಗಳ ಬಳಿಕ ಇಂಗ್ಲೆಂಡ್-ವೆಸ್ಟ್ ಇಂಡೀಸ್ ಟೆಸ್ಟ್‌ ಮೂಲಕ ಪುನರಾರಂಭವಾಗಿದೆ. ಈ ವೇಳೆ ಕೊರೊನಾ ವೈರಿಯರ್ಸ್‌ಗೆ ಗೌರವಾರ್ಥವಾಗಿ ಇಂಗ್ಲೆಂಡ್ ಕ್ರಿಕೆಟ್ 'ರೈಸ್‌ ದ ಬ್ಯಾಟ್' ಪ್ರಚಾರವಾಗಿ ಕೊರೊನಾ ವಿರುದ್ಧ ಹೋರಾಡಿದವರ ಹೆಸರಿರುವ ಜೆರ್ಸಿ ಧರಿಸಿದೆ.

ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?

ಇಂಗ್ಲೆಂಡ್ ಕ್ರಿಕೆಟ್‌ ತಂಡದ 'ರೈಸ್ ದ ಬ್ಯಾಟ್' ಕ್ಯಾಂಪೇನ್‌ನಲ್ಲಿ ಭಾರತ ಮೂಲದ ಡಾ. ವಿಕಾಸ್ ಕುಮಾರ್ ಹೆಚ್ಚು ಗಮನ ಸೆಳೆದಿದ್ದಾರೆ. ಡಾರ್ಲಿಂಗ್ಟನ್‌ನ ನ್ಯಾಷನಲ್ ಹೆಲ್ತ್ ಸರ್ವೀಸಸ್ (ಎನ್‌ಎಚ್‌ಎಸ್) ಟ್ರಸ್ಟ್ ಆಸ್ಪತ್ರೆಯ ಕ್ರಿಟಿಕಲ್ ಕೇರ್ ಘಟಕದಲ್ಲಿ ಕಾರ್ಯ ನಿವರ್ಹಿಸುತ್ತಿರುವ ಡಾ. ವಿಕಾಸ್‌ಗೆ ಇಂಗ್ಲೆಂಡ್ ತಂಡ ಜೆರ್ಸಿಯ ಮೂಲಕ ವಿಶೇಷ ಗೌರವ ಸಲ್ಲಿಸಿದೆ.

35ರ ಹರೆಯದ ವಿಕಾಸ್ ಕುಮಾರ್ ಹೆಸರಿರುವ ಜೆರ್ಸಿಯನ್ನು ಇಂಗ್ಲೆಂಡ್ ತಂಡದ ನಾಯಕ ಬೆನ್‌ ಸ್ಟೋಕ್ಸ್ ಧರಿಸಿದ್ದಾರೆ. ವಿಶ್ವಕಪ್‌ ಗೆದ್ದ ಇಂಗ್ಲೆಂಡ್‌ ಹೀರೋ ತನ್ನ ಹೆಸರಿರುವ ಜೆರ್ಸಿ ಧರಿಸಿದ್ದು ನೋಡುವಾಗ ವಿಕಾಸ್‌ಗೆ ಎಷ್ಟು ಹೆಮ್ಮೆ ಅನ್ನಿಸಿರಲಿಕ್ಕಿಲ್ಲ, ಖುಷಿ ಅನ್ನಿಸಿರಲಿಕ್ಕಿಲ್ಲ?

ಭಾರತದ ಮೊದಲ ಕ್ರಿಕೆಟ್ ಸೂಪರ್ ಸ್ಟಾರ್ ಸುನಿಲ್ ಗವಾಸ್ಕರ್‌ಗೆ 71ನೇ ಹುಟ್ಟುಹಬ್ಬಭಾರತದ ಮೊದಲ ಕ್ರಿಕೆಟ್ ಸೂಪರ್ ಸ್ಟಾರ್ ಸುನಿಲ್ ಗವಾಸ್ಕರ್‌ಗೆ 71ನೇ ಹುಟ್ಟುಹಬ್ಬ

'ನನ್ನ ಹೆಸರಿರುವ ಜೆರ್ಸಿಯನ್ನು ಬೆನ್ ಸ್ಟೋಕ್ಸ್ ಧರಿಸಿರುವುದನ್ನು ನೋಡೋಕೆ ತುಂಬಾ ಖುಷಿ ಅನ್ನಿಸುತ್ತದೆ. ಈ ಕೊರೊನಾ ಸಂದರ್ಭದಲ್ಲಿ ನಮಗೆಲ್ಲರಿಗೂ ಬಹಳ ಕಷ್ಟವಾಗಿತ್ತು. ಎನ್‌ಎಚ್‌ಎಸ್‌ನ ಎಲ್ಲಾ ಸಿಬ್ಬಂದಿ ಬಹಳಷ್ಟು ತ್ಯಾಗ ಮಾಡಿದ್ದರು. ಈ ಗುರುತಿಸುವಿಕೆ ಭಾರತದ ನನ್ನೆಲ್ಲ ವೈದ್ಯ ಸ್ನೇಹಿತರೂ ಸೇರಿ ಎಲ್ಲಾ ಆರೋಗ್ಯ ಸಿಬ್ಬಂದಿಗೆ ಸಲ್ಲುತ್ತದೆ,' ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ಕುಮಾರ್ ಹೇಳಿಕೊಂಡಿದ್ದಾರೆ.

Story first published: Saturday, July 11, 2020, 9:38 [IST]
Other articles published on Jul 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X