ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ನ ಎಲ್ಲಾ ಕ್ರಿಕೆಟಿಗರಿಗೆ ಕೊರೊನಾ ನೆಗೆಟಿವ್, ಸರಣಿಗೆ ಸಿದ್ಧತೆ

England cricketers return negative for COVID-19 ahead of West Indies series

ಲಂಡನ್, ಜೂನ್ 24: ಮುಂಬರಲಿರುವ ವೆಸ್ಟ್ ಇಂಡೀಸ್ vs ಇಂಗ್ಲೆಂಡ್ ಟೆಸ್ಟ್‌ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಸಿದ್ಧಗೊಂಡಿದ್ದು, ತಂಡದ ಎಲ್ಲಾ ಆಟಗಾರರ ಕೊರೊನಾವೈರಸ್ ಪರೀಕ್ಷೆಯ ಫಲಿತಾಂಶ ನೆಗೆಟಿವ್ ಎಂದು ಬಂದಿದೆ. ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಈ ವಿಚಾರವನ್ನು ಖಾತರಿಪಡಿಸಿದೆ.

ಐಪಿಎಲ್‌ಗಾಗಿ ಏಷ್ಯಾಕಪ್ ರದ್ದಾಗಲ್ಲ, ಶ್ರೀಲಂಕಾ ಇಲ್ಲವೇ ಯುಎಇನಲ್ಲಿ ಟೂರ್ನಿ: ಪಿಸಿಬಿ ಮುಖ್ಯಸ್ಥಐಪಿಎಲ್‌ಗಾಗಿ ಏಷ್ಯಾಕಪ್ ರದ್ದಾಗಲ್ಲ, ಶ್ರೀಲಂಕಾ ಇಲ್ಲವೇ ಯುಎಇನಲ್ಲಿ ಟೂರ್ನಿ: ಪಿಸಿಬಿ ಮುಖ್ಯಸ್ಥ

ಸೌತಾಂಪ್ಟನ್ ಮತ್ತು ಮ್ಯಾನ್ಚೆಸ್ಟರ್‌ನಲ್ಲಿ ಇರುವ ಸುಮಾರು 702 ಮಂದಿಗೆ ಜೂನ್ 3ರಿಂದ ಜೂನ್ 23ರ ವರೆಗೆ ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ. ಇದರಲ್ಲಿ ಕೆಲವರು ಹಲವಾರು ಬಾರಿ ಪರೀಕ್ಷೆಗೆ ಒಳಗಾಗಿದ್ದಾರೆ. ಇವರೆಲ್ಲರ ಪರೀಕ್ಷಾ ಫಲಿತಾಂಶ ನೆಗೆಟಿವ್ ಎಂದು ಬಂದಿದೆ ಎಂದು ಇಸಿಬಿ ತಿಳಿಸಿದೆ.

ಕೊರೊನಾ: ವಿಶ್ವದಾಖಲೆ ನಿರ್ಮಿಸಿದ್ದ ನ್ಯೂಯಾರ್ಕ್ ಸಿಟಿ ಮ್ಯಾರಥಾನ್ ರದ್ದುಕೊರೊನಾ: ವಿಶ್ವದಾಖಲೆ ನಿರ್ಮಿಸಿದ್ದ ನ್ಯೂಯಾರ್ಕ್ ಸಿಟಿ ಮ್ಯಾರಥಾನ್ ರದ್ದು

'ಬೇರೆ ಬೇರೆ ಸ್ಟೇಕ್‌ಹೋಲ್ಡರ್‌ಗಳ ಜೊತೆ ಸೇರಿ ಏಜಸ್ ಬೌಲ್ ಮತ್ತು ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಜೂನ್ 3ರಿಂದ ಜೂನ್ 23ರ ವರೆಗೆ ನಡೆಸಿದ ಎಲ್ಲಾ 702 ಫಲಿತಾಂಶಗಳು ನೆಗೆಟಿವ್ ಎಂದು ಬಂದಿದೆ ಎಂದು ನಾವು ಈ ಮೂಲಕ ಖಾತರಿಪಡಿಸುತ್ತಿದ್ದೇವೆ,' ಎಂದು ಇಸಿಬಿ ಹೇಳಿದೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಿಂದಿಕ್ಕಿದ ಕನ್ನಡಿಗ ರಾಹುಲ್ ದ್ರಾವಿಡ್!ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಿಂದಿಕ್ಕಿದ ಕನ್ನಡಿಗ ರಾಹುಲ್ ದ್ರಾವಿಡ್!

'ಪರೀಕ್ಷೆ ನಡೆಸಿದ ಗುಂಪಿನಲ್ಲಿ ಆಟಗಾರರು, ಬೆಂಬಲ ಸಿಬ್ಬಂದಿ, ಪಂದ್ಯಗಳ ಅಧಿಕಾರಿಗಳು, ಇಸಿಬಿ ಸಿಬ್ಬಂದಿ, ತಾಣಗಳ ಸಿಬ್ಬಂದಿ ಮತ್ತು ಹೋಟೆಲ್ ಸಿಬ್ಬಂದಿಗಳು ಸೇರಿದ್ದರು,' ಎಂದು ಎಸಿಬಿ ಮಾಹಿತಿ ಒದಗಿಸಿದೆ. ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಮನೆ ಸದಸ್ಯರೊಬ್ಬರು ಅನಾರೋಗ್ಯಗೊಂಡಿದ್ದು, ಆರ್ಚರ್ ಎರಡನೇ ಬಾರಿಗೆ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ತಿಳಿದುಬಂದಿದೆ.

Story first published: Thursday, June 25, 2020, 10:20 [IST]
Other articles published on Jun 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X