ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಬ್ಯಾನ್ ಬಳಿಕ ಜನಾಂಗೀಯ ನಿಂದನೆಗೆ ಒಳಗಾಗಿದ್ದೆ: ಜೋಫ್ರಾ ಆರ್ಚರ್

England fast bowler Jofra Archer reveals racist abuse

ಮ್ಯಾನ್ಚೆಸ್ಟರ್, ಜುಲೈ 22: ಜೈವಿಕ ಸುರಕ್ಷಾ ಮುನ್ನೆಚ್ಚರಿಕೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್‌ನಿಂದ ಕೈ ಬಿಡಲಾಗಿದ್ದ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್, ತಾನು ಟೆಸ್ಟ್ ಬ್ಯಾನ್ ಬಳಿಕ ಜನಾಂಗೀಯ ನಿಂದನೆಗೆ ಒಳಗಾಗಿದ್ದೆ ಮತ್ತು ಮಾನಸಿಕ ದೌರ್ಬಲ್ಯವನ್ನು ಅನುಭವಿಸಿದ್ದೆ ಎಂದಿದ್ದಾರೆ.

 ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು! ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಆಡಿದ್ದ ಜೋಫ್ರಾ ಆರ್ಚರ್, ಜೈವಿಕ ಸುರಕ್ಷಾ ಪರಿಸರವನ್ನು ತೊರೆದು, ಹೋವ್‌ನಲ್ಲಿರುವ ತನ್ನ ಮನೆಗೆ ಅನಧಿಕೃತವಾಗಿ ಪ್ರಯಾಣ ಬೆಳೆಸಿದ್ದರು. ಇದು ಇಂಗ್ಲೆಂಡ್‌ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್‌ನ ಕೆಂಗಣ್ಣಿಗೆ ಕಾರಣವಾಗಿತ್ತು. ಇದೇ ಕಾರಣಕ್ಕಾಗಿ ಆರ್ಚರ್ ಅವರನ್ನು ದ್ವಿತೀಯ ಟೆಸ್ಟ್‌ನಿಂದ ಕೈ ಬಿಡಲಾಗಿತ್ತು.

ಆತನಂತಾ ಆಟಗಾರ ಟೀಮ್ ಇಂಡಿಯಾದಲ್ಲಿದ್ದರೆ ಸೋಲೇ ಇಲ್ಲ: ಇರ್ಫಾನ್ ಪಠಾಣ್ಆತನಂತಾ ಆಟಗಾರ ಟೀಮ್ ಇಂಡಿಯಾದಲ್ಲಿದ್ದರೆ ಸೋಲೇ ಇಲ್ಲ: ಇರ್ಫಾನ್ ಪಠಾಣ್

ದ್ವಿತೀಯ ಟೆಸ್ಟ್‌ನಿಂದ ನಿಷೇಧಕ್ಕೀಡಾಗಿದ್ದ ಆರ್ಚರ್‌ಗೆ ಸಾಮಾಜಿಕ ಜಾಲತಾಣದಲ್ಲಿ ಜನಾಂಗೀಯ ನಿಂದನೆ ಮಾಡಲಾಗಿತ್ತಂತೆ. ಇದಕ್ಕೆ ಸಂಬಂಧಿಸಿದ ಮಾಹಿತಿನ್ನು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್‌ ಬೋರ್ಡ್‌ಗೆ ನೀಡಿ, ನಿಂದನೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿಕೊಂಡಿರುವುದಾಗಿ ಆರ್ಚರ್ ತಿಳಿಸಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಬ್ಯಾಟಿಂಗ್ ಅಬ್ಬರ ನಡೆಸಲಿದ್ದಾರೆ ಎಬಿ ಡಿ ವಿಲಿಯರ್ಸ್!ಟಿ20 ವಿಶ್ವಕಪ್‌ನಲ್ಲಿ ಬ್ಯಾಟಿಂಗ್ ಅಬ್ಬರ ನಡೆಸಲಿದ್ದಾರೆ ಎಬಿ ಡಿ ವಿಲಿಯರ್ಸ್!

'ಕಳೆದ ಕೆಲ ದಿನಗಳಿಂದ ನಾನು ಇನ್‌ಸ್ಟಾಗ್ರಾಮ್‌ನಲ್ಲಿ ಜನಾಂಗೀಯ ನಿಂದನೆ ಎದುರಿಸಿದ್ದೇನೆ. ಇದು ಸಾಕೆಂದರೆ ಸಾಕೆಂದು ನಾನು ನಿರ್ಧರಿಸಿದ್ದೇನೆ,' ಎಂದು ಡೈಲಿ ಮೇಲ್‌ನಲ್ಲಿನ ತನ್ನ ಅಂಕಣದಲ್ಲಿ ಆರ್ಚರ್ ಬರೆದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಮಧ್ಯೆ ಮೂರನೇ ಮತ್ತು ನಿರ್ಣಾಯ ಟೆಸ್ಟ್ ಪಂದ್ಯ ಜುಲೈ 24ರ ಶುಕ್ರವಾರ ನಡೆಯಲಿದೆ. ಈ ಟೆಸ್ಟ್‌ಗೆ ಆರ್ಚರ್ ಇಂಗ್ಲೆಂಡ್ ತಂಡದಲ್ಲಿ ಸೇರಿಸಲ್ಪಟ್ಟಿದ್ದಾರೆ.

Story first published: Wednesday, July 22, 2020, 23:09 [IST]
Other articles published on Jul 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X