ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಭಾರತ ವಿರುದ್ಧ ಸೋತ ಇಂಗ್ಲೆಂಡ್‌ಗೆ ದಂಡದ ಬರೆ

England has been fined for slow over-rate in the 4th T20 against India

ಅಹ್ಮದಾಬಾದ್: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುರುವಾರ (ಮಾರ್ಚ್ 18) ನಡೆದ ಭಾರತ-ಇಂಗ್ಲೆಂಡ್ ನಾಲ್ಕನೇ ಟಿ20ಐ ಪಂದ್ಯದಲ್ಲಿ ಭಾರತ 8 ರನ್‌ಗಳ ಜಯ ದಾಖಲಿಸುವುದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 2-2ರ ಸಮಬಲ ಸಾಧಿಸಿದೆ. ನಾಲ್ಕನೇ ಪಂದ್ಯದಲ್ಲಿ ಸೋಲಿನೊಂದಿಗೆ ಇಂಗ್ಲೆಂಡ್‌ಗೆ ದಂಡದ ಬರೆಯೂ ಬಿದ್ದಿದೆ.

ವಿರಾಟ್ ಕೊಹ್ಲಿ ಜೊತೆಗೆ ಜಸ್‌ಪ್ರೀತ್‌ ಬೂಮ್ರಾ ಪತ್ನಿಯಿರುವ ಚಿತ್ರ ವೈರಲ್!ವಿರಾಟ್ ಕೊಹ್ಲಿ ಜೊತೆಗೆ ಜಸ್‌ಪ್ರೀತ್‌ ಬೂಮ್ರಾ ಪತ್ನಿಯಿರುವ ಚಿತ್ರ ವೈರಲ್!

4ನೇ ಟಿ20ಐ ಪಂದ್ಯದಲ್ಲಿ ಸ್ಲೋ ಓವರ್‌ರೇಟ್ ಮಾಡಿದ್ದಕ್ಕಾಗಿ ಇಯಾನ್ ಮಾರ್ಗನ್ ಬಳಗಕ್ಕೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಂದ್ಯದ ಸಂಭಾವನೆಯ ಶೇ. 20ರಷ್ಟು ದಂಡ ವಿಧಿಸಿದೆ. ದ್ವಿತೀಯ ಟಿ20ಐನಲ್ಲಿ ಸ್ಲೇ ಓವರ್‌ರೇಟ್ ಮಾಡಿದ್ದಕ್ಕಾಗಿ ಭಾರತಕ್ಕೂ 20 ಶೇ. ದಂಡ ವಿಧಿಸಲಾಗಿತ್ತು.

4ನೇ ಪಂದ್ಯದಲ್ಲಿ ಅಸಲಿಗೆ ಇಂಗ್ಲೆಂಡ್‌ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿತ್ತು. ಟಾಸ್ ಕೂಡ ಇಂಗ್ಲೆಂಡ್ ಗೆದ್ದಿದ್ದರಿಂದ ಇಂಗ್ಲೆಂಡ್ ಗೆಲುವಿನ ಹುಮ್ಮಸ್ಸಿನಲ್ಲಿತ್ತು ಕೂಡ. ಆದರೆ ಚೊಚ್ಚಲ ಅಂತಾರಾಷ್ಟ್ರೀಯ ಇನ್ನಿಂಗ್ಸ್‌ ಆಡಿದ ಸೂರ್ಯಕುಮಾರ್ ಯಾದವ್ ಸ್ಫೋಟಕ ಅರ್ಧ ಶತಕ (31 ಎಸೆತ, 57 ರನ್) ತಂಡಕ್ಕೆ ರನ್ ಬಲ ತುಂಬಿತ್ತು.

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾ ಏಕದಿನ ತಂಡದಲ್ಲಿ ಸ್ಥಾನ ಪಡೆದ ಕನ್ನಡಿಗ ಪ್ರಸಿದ್ಧ್ ಕೃಷ್ಣಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾ ಏಕದಿನ ತಂಡದಲ್ಲಿ ಸ್ಥಾನ ಪಡೆದ ಕನ್ನಡಿಗ ಪ್ರಸಿದ್ಧ್ ಕೃಷ್ಣ

ಐಸಿಸಿ ನಿಯಮದ ಪ್ರಕಾರ ಟೆಸ್ಟ್‌ ಕ್ರಿಕೆಟ್‌ನಲ್ಲಾದರೆ ಫೀಲ್ಡಿಂಗ್ ಮಾಡುವ ತಂಡ ಗಂಟೆಗೆ 15ರಂತೆ ಓವರ್‌ ಮುಗಿಸಿರಬೇಕಾಗುತ್ತದೆ. ಅದೇ ಏಕದಿನದಲ್ಲಾದರೆ ಗಂಟೆಗೆ 14.28 ಓವರ್‌, ಟಿ20ಐನಲ್ಲಾದರೆ ಗಂಟೆಗೆ 14.11 ಓವರ್‌ ಮುಗಿಸಿರಬೇಕಾಗುತ್ತದೆ. ಈ ಕಾಲಾವಧಿ ಮೀರಿದರೆ ಫೀಲ್ಡಿಂಗ್ ತಂಡಕ್ಕೆ ದಂಡ ವಿಧಿಸಲಾಗುತ್ತದೆ.

Story first published: Saturday, March 20, 2021, 8:41 [IST]
Other articles published on Mar 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X