ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ಗೆ ಅಂತಿಮ ಪಂದ್ಯ ಗೆಲ್ಲಲು ಇರುವ ದಾರಿ ಹೇಳಿದ ಕೆವಿನ್ ಪೀಟರ್ಸನ್

England have a chance levelling things up if they bat well in 1st innings: Pietersen

ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ 1-2 ಅಂತರದಿಂದ ಇಂಗ್ಲೆಂಡ್ ಹಿನ್ನಡೆಯನ್ನು ಅನುಭವಿಸುತ್ತಿದೆ. ಅಂತಿಮ ಟೆಸ್ಟ್ ಪಂದ್ಯ ಮಾತ್ರವೇ ಬಾಕಿಯಿದ್ದು ಇಂಗ್ಲೆಂಡ್ ತಂಡಕ್ಕೆ ಸರಣಿಯನ್ನು ಸಮಬಲಗೊಳಿಸುವ ಅವಕಾಶ ಮಾತ್ರ ಮುಂದಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಪ್ರತಿಕ್ರಿಯಿಸಿದ್ದು ಇಂಗ್ಲೆಂಡ್ ತಂಡಕ್ಕೆ ಇನ್ನು ಕೂಡ ತಿರುಗಿ ಬೀಳುವ ಅವಕಾಶವಿದೆ ಎಂದು ಹೇಳಿದ್ದಾರೆ.

ಭಾರತದ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡಬೇಕು. ಅದು ಸಾಧ್ಯವಾದಲ್ಲಿ ಇಂಗ್ಲೆಂಡ್ ತಂಡಕ್ಕೆ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಸಾಧ್ಯವಾಗಬಹುದು ಎಂದು ಹೇಳಿದ್ದಾರೆ.

ಪಿಚ್ ಬಗ್ಗೆ ಟೀಕಿಸುವವರಿಗೆ ಕಠಿಣ ಮಾತುಗಳ ಪ್ರತ್ಯುತ್ತರ ನೀಡಿದ ಅಜಿಂಕ್ಯ ರಹಾನೆಪಿಚ್ ಬಗ್ಗೆ ಟೀಕಿಸುವವರಿಗೆ ಕಠಿಣ ಮಾತುಗಳ ಪ್ರತ್ಯುತ್ತರ ನೀಡಿದ ಅಜಿಂಕ್ಯ ರಹಾನೆ

ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 224 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಅದ್ಭುತ ಆರಂಭವನ್ನು ಪಡೆದಿತ್ತು. ಆದರೆ ಅದಾದ ಬಳಿಕ ನಡೆದ ಎರಡು ಪಂದ್ಯಗಳಲ್ಲಿ ಆತಿಥೇಯ ಭಾರತ ಭರ್ಜರಿಯಾಗಿ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಸರಣಿಯಲ್ಲಿ ಮುನ್ನಡೆಯನ್ನು ಸಾಧಿಸಿದೆ.

"ಮುಂದಿನ ಪಂದ್ಯದ ಪಿಚ್ ರಸ್ತೆಯಂತೆ ಇರುತ್ತದೆ ಎಂದು ನಾನು ಭಾವಿಸುವುದಿಲ್ಲ. ಹಾಗಾಗಿ ನಿಜವಾಗಿಯೂ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದರೆ ಸರಣಿಯನ್ನು ಸಮಬಲಗೊಳಿಸುವ ಅವಕಾಶ ಇಂಗ್ಲೆಂಡ್ ತಂಡದ ಮುಂದಿದೆ" ಎಂದು ಕೆವಿನ್ ಪೀಟರ್ಸನ್ ಹೇಳಿಕೆ ನೀಡಿದ್ದಾರೆ.

ಶಸ್ತ್ರ ಚಿಕಿತ್ಸೆಯ ಬಳಿಕ ಮೈದಾನಕ್ಕಿಳಿದ ರವೀಂದ್ರ ಜಡೇಜಾ: ವಿಡಿಯೋಶಸ್ತ್ರ ಚಿಕಿತ್ಸೆಯ ಬಳಿಕ ಮೈದಾನಕ್ಕಿಳಿದ ರವೀಂದ್ರ ಜಡೇಜಾ: ವಿಡಿಯೋ

ನಾನು ಇಂಗ್ಲೆಂಡ್ ತಂಡದ ಯುವ ಆಟಗಾರರ ಮೇಲೆ ಹೆಚ್ಚು ಬಿಟ್ಟು ಮಾಡಲಾರೆ, ಯಾಕೆಂದರೆ ಇದು ನಿಜವಾಗಿಯೂ ಅವರಿಗೆ ಕಠಿಣ ಪರೀಕ್ಷೆಯ ಸಂದರ್ಭ. ಭಾರತದಂತಾ ದೇಶಕ್ಕೆ ಅವರ ಮೊದಲ ಪ್ರವಾಸವಿದು. ಇದು ಅವರಿಗೆ ಪಾಠ ಕಲಿಯುವ ಸಂದರ್ಭ ಎಮದು ಕೆವಿನ್ ಪೀಟರ್ಸನ್ ಯುವ ಆಟಗಾರರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ

Story first published: Wednesday, March 3, 2021, 11:06 [IST]
Other articles published on Mar 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X