ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ್ಯಶಸ್ ಟೆಸ್ಟ್: ಮದ್ಯಪಾನ ಮಾಡಿದ್ದ ಇಂಗ್ಲೆಂಡ್ ಆಟಗಾರರ ವಿರುದ್ಧ ತನಿಖೆಗೆ ಮುಂದಾದ ಇಸಿಬಿ

England launches investigation against Joe Root and James Anderson

ಇತ್ತೀಚೆಗಷ್ಟೇ ಮುಕ್ತಾಯವಾದ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸರಣಿ ಸೋಲನ್ನು ಕಂಡ ಇಂಗ್ಲೆಂಡ್ ಇದೀಗ ಸೋಲಿನ ಕಹಿ ಬೆನ್ನಲ್ಲೇ ವಿವಾದವೊಂದನ್ನು ಎದುರಿಸುತ್ತಿದೆ.

ಹೌದು,ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡಿದ್ದ ಇಂಗ್ಲೆಂಡ್ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 0 - 4 ಅಂತರದ ಹೀನಾಯ ಸೋಲನ್ನು ಅನುಭವಿಸಿತ್ತು. ಕಳೆದ ಭಾನುವಾರದಂದು ಮುಕ್ತಾಯಗೊಂಡ ಐದನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸುವುದರ ಮೂಲಕ ಸರಣಿಯನ್ನು ಕೈವಶ ಪಡಿಸಿಕೊಂಡಿತು. ಹೀಗೆ ಟೆಸ್ಟ್ ಸರಣಿ ಭಾನುವಾರ ಮುಕ್ತಾಯವಾದ ಬೆನ್ನಲ್ಲೇ ರಾತ್ರಿಯಿಂದಲೇ ಆ್ಯಶಸ್ ಟೆಸ್ಟ್ ಸರಣಿ ಪಾರ್ಟಿ ಆರಂಭಗೊಂಡಿದೆ. ಈ ಪಾರ್ಟಿಯಲ್ಲಿ ಇಂಗ್ಲೆಂಡ್ ತಂಡದ ಆಟಗಾರರಾದ ಜೋ ರೂಟ್ ಮತ್ತು ಜೇಮ್ಸ್ ಆ್ಯಂಡರ್ಸನ್ ಆಸ್ಟ್ರೇಲಿಯಾ ತಂಡದ ಆಟಗಾರರಾದ ಟ್ರೆವಿಸ್ ಹೆಡ್, ಅಲೆಕ್ಸ್ ಕ್ಯಾರಿ ಮತ್ತು ನಾಥನ್ ಲಿಯಾನ್ ಜೊತೆ ಸೇರಿ ಭಾನುವಾರ ರಾತ್ರಿಯಿಂದ ಸೋಮವಾರದ ಬೆಳಗಿನ ಜಾವ 6 ಗಂಟೆಯವರೆಗೂ ಕೂಡ ಮದ್ಯಪಾನ ಸೇವಿಸುತ್ತಾ ಹೋಬಾರ್ಟ್ ನಗರದ ಹೋಟೆಲ್ ಒಂದರಲ್ಲಿ ಪಾರ್ಟಿ ಮಾಡಿದ್ದಾರೆ.

ಹೀಗೆ ಆಟಗಾರರು ನಿಯಮಗಳನ್ನು ಬ್ರೇಕ್ ಮಾಡಿ ಪಾರ್ಟಿ ಮಾಡುತ್ತಿದ್ದ ವಿಷಯವನ್ನು ಮೌಖಿಕ ದೂರಿನ ಮೂಲಕ ಪೊಲೀಸರಿಗೆ ಅದೇ ಹೋಟೆಲ್‌ನಲ್ಲಿದ್ದ ಅನಾಮಿಕರು ತಿಳಿಸಿದ್ದು, ಬೆಳಗಿನ ಜಾವ 6 ಗಂಟೆ ಸಮಯಕ್ಕೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜೋ ರೂಟ್ ಸೇರಿದಂತೆ ಉಳಿದ ಆಟಗಾರರನ್ನೂ ಅಲ್ಲಿಂದ ಕಳುಹಿಸಿದ್ದಾರೆ. ಹೀಗೆ ಪೊಲೀಸರು ಜೋ ರೂಟ್ ಮತ್ತು ಇತರೆ ಆಟಗಾರರ ಜೊತೆ ಅಲ್ಲಿಂದ ತೆರಳುವಂತೆ ನಡೆಸುತ್ತಿದ್ದ ಮಾತುಕತೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಆ ದೃಶ್ಯಗಳು ಹರಿದಾಡುತ್ತಿವೆ.

ಹೀಗೆ ಈ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಇದೀಗ ಆ್ಯಶಸ್ ಟೆಸ್ಟ್ ಜಯದ ಪಾರ್ಟಿಯಲ್ಲಿ ಭಾಗವಹಿಸಿದ್ದ ಇಂಗ್ಲೆಂಡ್ ತಂಡದ ಆಟಗಾರರಾದ ಜೋ ರೂಟ್ ಮತ್ತು ಜೇಮ್ಸ್ ಆ್ಯಂಡರ್ಸನ್ ವಿರುದ್ಧ ತನಿಖೆಗೆ ಮುಂದಾಗಿದೆ.

ಕೊಹ್ಲಿ ನಾಯಕತ್ವ ತ್ಯಜಿಸಿದ್ದರ ಬಗ್ಗೆ ಶಾಹಿದ್ ಅಫ್ರಿದಿ ಕೊಟ್ಟ ಹೇಳಿಕೆ ನಿಜಕ್ಕೂ ಆಶ್ಚರ್ಯ | Oneindia Kannada

Story first published: Wednesday, January 19, 2022, 16:02 [IST]
Other articles published on Jan 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X