ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಮಹಿಳಾ ತಂಡ ಒಳಗೊಂಡ ತ್ರಿಕೋನ ಸರಣಿ ಆಯೋಜನೆಗೆ ಇಂಗ್ಲೆಂಡ್ ಒಲವು

England Likely To Host India, South Africa Women’s Team For Tri-series

ಕೊರೊನಾ ವೈರಸ್‌ನಿಂದಾಗ ಕ್ರಿಕೆಟ್ ಸ್ಥಗಿತಗೊಂಡ ಬಳಿಕ ಮತ್ತೆ ಕ್ರಿಕೆಟ್ ಆಟಕ್ಕೆ ಸಿದ್ದತೆಗಳು ನಡೆಯುತ್ತಿದೆ. ಇದರಲ್ಲಿ ಇಂಗ್ಲೆಂಡ್ ಮುಂಚೂಣಿಯಲ್ಲಿದೆ. ವಿಂಡೀಸ್ ವಿರುದ್ಧದ ಸರಣಿಗೆ ದಿನಗಣನೆ ಆರಂಭವಾಗಿದೆ. ಮತ್ತೊಂದೆಡೆ ಪಾಕಿಸ್ತಾನ ಕೂಡ ತಮ್ಮ ತಂಡವನ್ನು ಇಂಗ್ಲೆಂಡ್‌ಗೆ ಕಳುಹಿಸಲು ಸಿದ್ದವಾಗುತ್ತಿದೆ.

ಈ ಮಧ್ಯೆ ಭಾರತ ಮಹಿಳಾ ತಂಡವನ್ನೂ ಒಳಗೊಂಡ ಮಹಿಳಾ ಕ್ರಿಕೆಟ್ ತ್ರಿಕೋನ ಸರಣಿ ಆಯೋಜನೆಗೆ ಇಂಗ್ಲೆಂಡ್ ಉತ್ಸುಕವಾಗಿದೆ. ಭಾರತ, ದಕ್ಷಿಣ ಆಫ್ರಿಕಾ ತಂಡಗಳನ್ನು ಒಳಗೊಂಡ ತ್ರಿಕೋನ ಸರಣಿ ಆಯೋಜನೆ ಮಾಡಲು ಇಂಗ್ಲೆಂಡ್ ಸಿದ್ದತೆ ನಡೆಸುತ್ತಿದೆ. ಈಗಾಗಲೇ ಬಿಸಿಸಿಐ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ.

'ಇಂಗ್ಲೆಂಡ್‌ನಲ್ಲಿ ನಾನೂ ವರ್ಣಭೇದ ಎದುರಿಸಿದ್ದೆ' ಎಂದ ಭಾರತೀಯ ಕ್ರಿಕೆಟರ್!'ಇಂಗ್ಲೆಂಡ್‌ನಲ್ಲಿ ನಾನೂ ವರ್ಣಭೇದ ಎದುರಿಸಿದ್ದೆ' ಎಂದ ಭಾರತೀಯ ಕ್ರಿಕೆಟರ್!

ಪುರುಷರ ಕ್ರಿಕೆಟ್‌ಗೆ ಜುಲೈ ತಿಂಗಳಿನಲ್ಲಿ ಚಾಲನೆ ದೊರೆಯುತ್ತಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಯೋಜನೆ ಮಾಡಲು ಇಸಿಬಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಾಮ್ ಹಾರಿಸನ್ ಗಮನಹರಿಸಿದ್ದಾರೆ. ಇಂಗ್ಲೆಂಡ್ ಮಾಜಿ ನಾಯಕನ ಮೈಕಲ್ ವಾನ್ ಜೊತೆಗೆ ಪಾಡ್ ಕಾಸ್ಟ್‌ನಲ್ಲಿ ಪಾಲ್ಗೊಂಡಿದ್ದ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ.

ನಾವು ಅಂತಾರಾಷ್ಟ್ರೀಯ ಕ್ರಿಕೆಟನ್ನು ಪಡೆದುಕೊಳ್ಳಲಿದ್ದೇವೆ. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ. ಈ ಬೇಸಿಗೆಯಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಗಳಿಸಿಕೊಳ್ಳಲು ಸಿದ್ದತೆಗಳು ಆಗುತ್ತಿದೆ. ಬಿಸಿಸಿಐ ಮತ್ತು ಕ್ರಿಕೆಟ್ ಸೌತ್ ಆಫ್ರಿಕಾ ಜೊತೆಗೆ ಮಾತುಕತೆಯನ್ನು ನಡೆಸಲಾಗುತ್ತಿದ್ದು ತ್ರಿಕೋನ ಸರಣಿಗಾಗಿ ಚರ್ಚೆಗಳು ನಡೆಯುತ್ತಿದೆ ಎಂದು ಟಾಮ್ ಹಾರಿಸನ್ ಹೇಳಿಕೊಂಡಿದ್ದಾರೆ.

ಆಗಸ್ಟ್‌ನಲ್ಲಿ ಇಂಡಿಯಾ vs ಶ್ರೀಲಂಕಾ ಕ್ರಿಕೆಟ್ ಸರಣಿಗೆ ಒಪ್ಪಿಗೆ ಸೂಚಿಸಿದ ಬಿಸಿಸಿಐಆಗಸ್ಟ್‌ನಲ್ಲಿ ಇಂಡಿಯಾ vs ಶ್ರೀಲಂಕಾ ಕ್ರಿಕೆಟ್ ಸರಣಿಗೆ ಒಪ್ಪಿಗೆ ಸೂಚಿಸಿದ ಬಿಸಿಸಿಐ

ಈ ಸರಣಿಯ ಆಯೋಜನೆ ಕೊರೊನಾ ವೈರಸ್‌ನಿಂದ ಉಂಟಾಗಿರುವ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿದೆ ಎಂದು ಅವರು ಹೇಳಿದ್ದಾರೆ. ಸದ್ಯ ಭಾರತದಲ್ಲಿ ಕೊರೊನಾ ವೈರಸ್‌ನ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿದೆ.

Story first published: Thursday, June 11, 2020, 7:33 [IST]
Other articles published on Jun 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X