ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ವಿರುದ್ಧ ಗೆಲ್ಲಲೇಬೇಕಿರುವ ಸಂದಿಗ್ಧದಲ್ಲಿ ಇಂಗ್ಲೆಂಡ್

England must win against India to stay in the race for semis

ಲಂಡನ್, ಜೂನ್ 29 : ಭಾರತದೊಂದಿಗೆ ಭಾನುವಾರ ಬರ್ಮಿಂಗ್ಹ್ಯಾಮ್ ನಲ್ಲಿ ಸೆಣಸಲಿರುವ ಇಂಗ್ಲೆಂಡ್ ಗೆಲ್ಲಲೇಬೇಕಾದ ಸಂದಿಗ್ಧದಲ್ಲಿ ಸಿಲುಕಿದೆ. ಒಂದು ವೇಳೆ ಭಾರತದ ವಿರುದ್ಧವೂ ಇಂಗ್ಲೆಂಡ್ ಸೋತರೆ, ಅದರ ಸ್ಥಾನ ಆಕ್ರಮಿಸಿಕೊಳ್ಳಲು ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳು ಸಜ್ಜಾಗಿ ಕುಳಿತಿವೆ.

{headtohead_cricket_3_4}

ಕಳೆದ ಮೂರು ಪಂದ್ಯಗಳಲ್ಲಿ ಇಂಗ್ಲೆಂಡ್ ಒಂದರಲ್ಲಿ ಗೆದ್ದು ಎರಡರಲ್ಲಿ ಸೋತಿದೆ. ಅಫಘಾನಿಸ್ತಾನದ ವಿರುದ್ಧ ಗೆದ್ದರೂ, ಮುಂದಿನೆರಡು ಪಂದ್ಯಗಳನ್ನು, ಅನುಕ್ರಮವಾಗಿ ಶ್ರೀಲಂಕಾ ವಿರುದ್ಧ 20 ರನ್ ಗಳಿಂದ ಮತ್ತು ಆಸ್ಟ್ರೇಲಿಯಾದ ವಿರುದ್ಧ 64 ರನ್ ಗಳಿಂದ ಸೋತಿದೆ.

ಆಸೀಸ್‌ ವಿರುದ್ಧದ ಹೀನಾಯ ಸೋಲಿನ ನಂತರ ಮಾರ್ಗನ್‌ ಹೇಳಿದ್ದೇನು? ಆಸೀಸ್‌ ವಿರುದ್ಧದ ಹೀನಾಯ ಸೋಲಿನ ನಂತರ ಮಾರ್ಗನ್‌ ಹೇಳಿದ್ದೇನು?

ಈ ನಿಟ್ಟಿನಲ್ಲಿ ಎಗ್ಬಸ್ಟನ್ ನಲ್ಲಿ ಭಾನುವಾರ, ಭಾರತೀಯ ಕಾಲಮಾನ 3 ಗಂಟೆಗೆ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ಗೆಲ್ಲಲೇಬೇಕಿದೆ. ಇಂಗ್ಲೆಂಡ್ ಆಡಿರುವ 7 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 3ರಲ್ಲಿ ಸೋತಿದೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳು ಆಡಿರುವ 7 ಪಂದ್ಯಗಳಲ್ಲಿ 3ರಲ್ಲಿ ಸೋತಿವೆ.

ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ (6 ಗೆಲುವು, 12 ಅಂಕ) ಸೆಮಿಫೈನಲ್ ಪ್ರವೇಶಿಸುವುದು ಖಚಿತವಾಗಿದೆ. ಎರಡನೇ ಸ್ಥಾನದಲ್ಲಿರುವ ಭಾರತ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು (ಅಜೇಯವಾಗಿ ಉಳಿದ ಏಕೈಕ ತಂಡ) ಸೆಮಿಫೈನಲ್ ಗೆಲ್ಲಲು ಇನ್ನೊಂದು ಪಂದ್ಯ ಗೆಲ್ಲಬೇಕು ಅಷ್ಟೆ. ಅದನ್ನು ಭಾನುವಾರವೇ ಮಾಡಿ ಸೆಮೀಸ್ ಪ್ರವೇಶಿಸಲು ಭಾರತ ತುದಿಗಾಲಿನಲ್ಲಿ ನಿಂತಿದೆ.

'ಹಿಟ್‌ಮ್ಯಾನ್‌' ರೋಹಿತ್‌ ವಿಶ್ವದಾಖಲೆಯನ್ನು ಮುರಿದ ಐಯಾನ್‌ ಮಾರ್ಗನ್‌! 'ಹಿಟ್‌ಮ್ಯಾನ್‌' ರೋಹಿತ್‌ ವಿಶ್ವದಾಖಲೆಯನ್ನು ಮುರಿದ ಐಯಾನ್‌ ಮಾರ್ಗನ್‌!

ಸದ್ಯಕ್ಕೆ ಭಾರತ ತಂಡ ಅತ್ಯಂತ ಬಲಿಷ್ಠವಾಗಿ ಕಾಣಿಸುತ್ತಿದ್ದು, ಕಡಿಮೆ ಸ್ಕೋರ್ ಮಾಡಿದ ಕಳೆದೆರಡು ಪಂದ್ಯಗಳಲ್ಲಿ ಆತಂಕದ ಕ್ಷಣಗಳನ್ನು ಕಂಡರೂ, ಉತ್ತಮ ಬೌಲಿಂಗ್ ಮತ್ತು ಫೀಲ್ಡಿಂಗ್ ನಿಂದಾಗಿ ಮತ್ತು ಸಾಂಘಿಕ ಆಟದಿಂದಾಗಿ ಗೆದ್ದು ಬೀಗುತ್ತಿದೆ. ಅಫಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಭಾರತ ಕಡಿಮೆ ಸ್ಕೋರ್ ಗಳಿಸಿತ್ತು. ಅಫಘಾನಿಸ್ತಾನದ ವಿರುದ್ಧ ಕೇವಲ 224 ರನ್ ಗಳಿಸಿ, 11 ರನ್ ಗಳಿಂದ ಗೆದ್ದಿದ್ದರೆ, ವೆಸ್ಟ್ ಇಂಡೀಸ್ ವಿರುದ್ಧ ಕೇವಲ 268 ರನ್ ಮಾತ್ರ ಭಾರತ ಗಳಿಸಿತ್ತು.

ಆರಂಭಿಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ 104 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿದರೂ, ಇಂಗ್ಲೆಂಡ್ ನಂತರದ ಕೆಲ ಪಂದ್ಯಗಳಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನೆರಡು ಪಂದ್ಯಗಳನ್ನು ಇಂಗ್ಲೆಂಡ್ ಗೆದ್ದರೆ ಸಲೀಸಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಆದರೆ, ಅದು ಟೂರ್ನಿಯ ಬಲಿಷ್ಠ ತಂಡಗಳಾದ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ಸೆಣಸಿ ಗೆಲ್ಲಬೇಕಿದೆ.

Story first published: Saturday, June 29, 2019, 13:19 [IST]
Other articles published on Jun 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X