ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ ವಿರುದ್ಧ ಹೀನಾಯವಾಗಿ ಸೋತ ನಂತರ ವಿಲಿಯಮ್ಸನ್‌ ಹೇಳಿದ್ದಿದು

England outplayed us, deserved to win: Williamson

ಚೆಸ್ಟರ್‌ ಲೇ ಸ್ಟ್ರೀಟ್‌, ಜುಲೈ 04: ವಿಶ್ವಕಪ್‌ ಲೀಗ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧದ ಹೀನಾಯ ಸೋಲಿಗೆ ತಮ್ಮ ತಂಡದ ಕಳಪೆ ಆಟವೇ ಕಾರಣ ಎಂದು ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಒಪ್ಪಿಕೊಂಡಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಬುಧವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡುವ ಮೂಲಕ 305 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತ್ತು. ಬಳಿಕ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ 186 ರನ್‌ಗಳಿಗೆ ಆಲ್‌ಔಟ್‌ ಆಗುವ ಮೂಲಕ 119 ರನ್‌ಗಳ ಹೀನಾಯ ಸೋಲುಂಡಿತು. ಈ ಪಂದ್ಯದಲ್ಲಿ ಇಂಗ್ಲೆಂಡ್‌ ಸೋತಿದ್ದರೆ ಸ್ಪರ್ಧೆಯಿಂದ ಹೊರಬೀಳುತ್ತಿತ್ತು.

ಧೋನಿ ಒಬ್ಬ ಸೈನಿಕ, ಕೈಬೆರಳಿನ ಗಾಯ ಸಮಸ್ಯೆಯೇ ಅಲ್ಲವಂತೆ!ಧೋನಿ ಒಬ್ಬ ಸೈನಿಕ, ಕೈಬೆರಳಿನ ಗಾಯ ಸಮಸ್ಯೆಯೇ ಅಲ್ಲವಂತೆ!

"ಇಂಥದ್ದೊಂದು ಕಠಿಣ ಪಿಚ್‌ನಲ್ಲಿ ಯಾವ ರೀತಿ ಆಡಬೇಕೆಂಬ ಪಾಠ ಕಲಿತುಕೊಂಡಿದ್ದೇವೆ. ನಮ್ಮ ತಂಡದ ಅನುಭವಿ ಅಟಗಾರರು ತಮ್ಮಲ್ಲಿನ ಅನುಭವವನ್ನು ಉತ್ತಮವಾಗಿ ಬಳಸಿಕೊಳ್ಳಬೇಕಿದೆ. ಇಂತಹ ಪಿಚ್‌ಗಳಲ್ಲಿ ಯಶಸ್ಸು ಲಭ್ಯವಾದರೆ ಆತ್ಮವಿಶ್ವಾಸ ಹೆಚ್ಚಲಿದೆ. ಇಂಗ್ಲೆಂಡ್‌ ತಂಡ ನಮ್ಮೆದುರು ಎಲ್ಲಾ ವಿಭಾಗಗಳಲ್ಲಿ ಪೂರ್ಣ ಪ್ರಾಬಲ್ಯ ಮೆರೆಯಿತು. ಹೀಗಾಗಿ ಗೆಲುವಿಗೆ ಅರ್ಹ ತಂಡವಾಗಿದೆ,'' ಎಂದು ಪಂದ್ಯದ ಬಳಿಕ ಮಾತನಾಡಿದ ವಿಲಿಯಮ್ಸನ್‌ ಹೀನಾಯ ಸೋಲಿನ ಬಗ್ಗೆ ಮಾತನಾಡಿದ್ದಾರೆ.

"ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಡೆಗೆ ನಮ್ಮ ತಂಡ ಪ್ರಯತ್ನಿಸಬೇಕಿದೆ. ಪ್ರಮುಖವಾಗಿ ದೊಡ್ಡ ಜೊತೆಯಾಟಗಳನ್ನು ಆಡುವ ಮೂಲಕ ಪಂದ್ಯವನ್ನು ಅಂತ್ಯದ ವರೆಗೂ ಕೊಂಡೊಯ್ಯುವ ಅಗತ್ಯವಿದೆ,'' ಎಂದು ವಿಲಿಯಮ್ಸನ್‌ ವಿವರಿಸಿದ್ದಾರೆ.

ಶೊಯೇಬ್‌ ಅಖ್ತರ್‌ಗೆ ವಿಶ್ವಕಪ್‌ನಲ್ಲಿ ಗುಣಮಟ್ಟದ ಕ್ರಿಕೆಟ್‌ ಕಾಣ್ತಿಲ್ಲವಂತೆ!ಶೊಯೇಬ್‌ ಅಖ್ತರ್‌ಗೆ ವಿಶ್ವಕಪ್‌ನಲ್ಲಿ ಗುಣಮಟ್ಟದ ಕ್ರಿಕೆಟ್‌ ಕಾಣ್ತಿಲ್ಲವಂತೆ!

ನ್ಯೂಜಿಲೆಂಡ್‌ ತಂಡ ಸದ್ಯ ಆಡಿದ 9 ಪಂದ್ಯಗಳಿಂದ 11 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದು, ಸೆಮಿಫೈನಲ್ಸ್‌ ಸ್ಥಾನವನ್ನು ಬಹುತೇಕ ಖಾತ್ರಿ ಪಡಿಸಿಕೊಂಡಿದೆ. ಆದರೆ, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಮೊದಲು ಬ್ಯಾಟ್‌ ಮಾಡಿ 310+ ರನ್‌ಗಳಿಗೂ ಅಧಿಕ ಅಂತರದಲ್ಲಿ ಗೆದ್ದರೆ ಮಾತ್ರವೇ ಕಿವೀಸ್‌ ಪಡೆ ಸ್ಪರ್ಧೆಯಿಂದ ಹೊರ ಬೀಳಲಿದೆ.

Story first published: Thursday, July 4, 2019, 20:09 [IST]
Other articles published on Jul 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X