ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿವೃತ್ತಿ ಸುದ್ದಿಗೆ ಸ್ಪಷ್ಟ ಉತ್ತರ ಕೊಟ್ಟ ಇಂಗ್ಲೆಂಡ್‌ ವೇಗಿ ಜೇಮ್ಸ್ ಆ್ಯಂಡರ್ಸನ್

England Pacer James Anderson Dismissed His Retirement Rumours

ಇಂಗ್ಲೆಂಡ್‌ನ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ನಿವೃತ್ತಿಯನ್ನು ಘೋಷಿಸಲಿದ್ದಾರೆ ಎಂಬ ಸುದ್ದಿ ಇವತ್ತು ಅಂತಾರಾಷ್ಟ್ರೀಯ ಕ್ರೀಡಾ ಮಾಧ್ಯಮಗಳಲ್ಲಿ ಭಾರೀ ದೊಡ್ಡ ಸದ್ದು ಮಾಡಿತ್ತು. ಈ ಬೆಳವಣಿಗೆಯ ಬಗ್ಗೆ ಮಾತನಾಡಿದ ಸ್ವತಃ ಜೇಮ್ಸ್ ಆಂಡರ್ಸನ್ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ತನ್ನ ನಿವೃತ್ತಿಯ ಸುದ್ದಿಯನ್ನು ನೇರವಾಗಿ ತಳ್ಳಿಹಾಕಿದ್ದಾರೆ.

ಹೌದು, ಜೇಮ್ಸ್ ಆ್ಯಂಡರ್ಸನ್ ನಿವೃತ್ತಿಯ ಬಗ್ಗೆ ತಾನು ಚಿಂತನೆಯನ್ನೇ ನಡೆಸಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮಾತ್ರವಲ್ಲ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2021-22ರ ಆ್ಯಶಸ್ ಸರಣಿಯಲ್ಲಿ ಪಾಲ್ಗೊಳ್ಳುವುದಾಗಿಯೂ ಹೇಳಿಕೊಂಡಿದ್ದಾರೆ. ಈ ಮೂಲಕ ತನ್ನ ತನ್ನ ನಿವೃತ್ತಿಯ ಬಗ್ಗೆ ಹರಡಿರುವ ಗಾಳಿಸುದ್ದಿಗೆ ಸ್ಪಷ್ಟನೆಯನ್ನು ನೀಡಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ವೇಗಿಗಳ ಪೈಕಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿಯನ್ನು ಜೇಮ್ಸ್ ಆ್ಯಂಡರ್ಸನ್ ಹೊಂದಿದ್ದಾರೆ. ಆದರೆ ಕೊರೊನಾ ವೈರಸ್‌ನ ಕಾರಮದಿಂದಾಗಿ ಸ್ಥಬ್ಧವಾಗಿ ಮರು ಆರಮಭವಾದ ನಂತರ ಆಂಡರ್ಸನ್ ಬೌಲಿಂಗ್ ದಾಳಿ ಕೊಂಚ ಮಂಕಾದಂತೆ ಕಂಡುಬಂದಿದೆ. ಹೀಗಾಗಿ ಈ ಸುದ್ಧ ಹರಿದಾಡಲು ಕಾರಣವಾಗಿದೆ.

ಕ್ರಿಕೆಟ್ ಪುನಾರಂಭದ ಬಳಿಕ ಆಡಿದ ಮೂರು ಟೆಸ್ಟ್ ಪಂದ್ಯಗಳ ಆರು ಇನ್ನಿಂಗ್ಸ್‌ನಲ್ಲಿ ಕೇವಲ 6 ವಿಕೆಟ್ ಪಡೆಯಲು ಮಾತ್ರ ಯಶಸ್ವಿಯಾಗಿದ್ದಾರೆ ಆ್ಯಂಡರ್ಸನ್. ಈ ಬಗ್ಗೆಯೂ ಆ್ಯಂಡರ್ಸನ್ ಮಾತನಾಡಿದ್ದು, ಈ ವಾರ ಕನ್ನ ಪಾಲಿಗೆ ಅತ್ಯಂತ ಹತಾಸೆಯ ವಾರ. ನಾನು ಉತ್ತಮವಾಗಿ ಬೌಲಿಂಗ್ ಮಾಡಲು ಸಾಧ್ಯವಾಗಿಲ್ಲ. ನನ್ನ ಬೌಲಿಂಗ್ ಲಯವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಹತಾಶೆ ಕೋಪಕ್ಕೆ ಕಾರಣವಾಗುತ್ತದೆ ಎಂದು ಆ್ಯಂಡರ್ಸನ್ ಹೇಳಿಕೆಯನ್ನು ಕ್ರಿಕ್ ಇನ್ಫೋ ವರದಿ ಮಾಡಿದೆ.

ನಾನಿನ್ನೂ ಕೂಡ ಕ್ರಿಕೆಟ್ ಆಡುವ ಹಸಿವಿನಲ್ಲಿದ್ದೇನೆ. ಖಂಡಿತಾ ನಾನು ಮುಂದಿನ ಆ್ಯಶಸ್‌ನಲ್ಲಿ ಆಡುತ್ತೇನೆ. ನನ್ನಿಂದ ಸಾಧ್ಯವಾಗುವಷ್ಟು ಸುದೀರ್ಘ ಕಾಲ ಆಡಲು ನಾನು ಬಯಸುತ್ತೇನೆ. ಆದರೆ ಈ ವಾರದ ರೀತಿಯಲ್ಲಿ ಬೌಲಿಂಗ್ ಮಾಡಿ ತಂಡಕ್ಕೆ ಆಯ್ಕೆಯಾಗಲು ಸಾಧ್ಯವಾಗದೆ ನಿವೃತ್ತಿ ಪಡೆಯುವ ಸಂದರ್ಭ ಬಂದರೆ ಅದು ಆಯ್ಕೆಯ ಸಮಸ್ಯೆಯಾಗಲಿದೆ ಎಂದೂ ಆ್ಯಂಡರ್ಸನ್ ಹೇಳಿಕೊಂಡಿದ್ದಾರೆ.

Story first published: Monday, August 10, 2020, 17:00 [IST]
Other articles published on Aug 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X