ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ದ. ಆಫ್ರಿಕಾ ಟೆಸ್ಟ್: ವಿಶ್ವದಾಖಲೆ ಬರೆದ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್

England pacer James Anderson sets new world record as completing 100 Tests match at home

ಇಂಗ್ಲೆಂಡ್ ತಂಡದ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಹೊಸ ವಿಶ್ವದಾಖಲೆಯೊಂದನ್ನು ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಈವರೆಗೆ ಯಾರಿಂದಲೂ ಸಾಧ್ಯವಾಗದ ವಿಶೇಷ ಸಾಧನೆಯನ್ನು ಮಾಡಿದ್ದಾರೆ ಆಂಡರ್ಸನ್. ತವರಿನಲ್ಲಿಯೇ 100 ಟೆಸ್ಟ್ ಪಂದ್ಯಗಳನ್ನಾಡಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನು ಆಂಡರ್ಸನ್ ತಮ್ಮದಾಗಿಸಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಆಂಡರ್ಸನ್ ಈ ಸಾಧನೆ ಮಾಡಿದ್ದಾರೆ. ಮಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಈ ಪಂದ್ಯ ಆರಂಭವಾಗಿದ್ದು ಟಾಸ್ ಗೆದ್ದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಮೊದಲಿಗೆ ಬ್ಯಾಟಿಂಗ್ ನಡೆಸುತ್ತಿದೆ. ಆದರೆ ದಕ್ಷಿನ ಆಫ್ರಿಕಾ ತಂಡ ಆಘಾತವನ್ನು ಅನುಭವಿಸಿದ್ದು ಅಗ್ರ ಕ್ರಮಾಂಕದ ಆಟಗಾರರು ಕಳಪೆ ಪ್ರದರ್ಶನ ನೀಡಿದ್ದಾರೆ.

ಏಷ್ಯಾಕಪ್‌ಗೆ ಆರನೇ ತಂಡವಾಗಿ ಹಾಂಗ್‌ಕಾಂಗ್ ಆಯ್ಕೆಯಾದ ನಂತರ ಟೂರ್ನಿಯ ವೇಳಾಪಟ್ಟಿ ಹೇಗಿದೆ?ಏಷ್ಯಾಕಪ್‌ಗೆ ಆರನೇ ತಂಡವಾಗಿ ಹಾಂಗ್‌ಕಾಂಗ್ ಆಯ್ಕೆಯಾದ ನಂತರ ಟೂರ್ನಿಯ ವೇಳಾಪಟ್ಟಿ ಹೇಗಿದೆ?

2003ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಆಂಡರ್ಸನ್

2003ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಆಂಡರ್ಸನ್

ಜೇಮ್ಸ್ ಆಂಡರ್ಸನ್ 2003ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ವೇಗದ ಬೌಲರ್ ಆಗಿ ಸುದೀರ್ಘ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರಿಯುವ ಮೂಲಕ ಎಲ್ಲರನ್ನು ದಿಗ್ಭ್ರಮೆಗೊಳಿಸಿದ್ದಾರೆ. ತಮ್ಮ 174ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಆಂಡರ್ಸನ್ 150ಕ್ಕೂ ಅಧಿಕ ಟೆಸ್ಟ್ ಪಂದ್ಯಗಳನ್ನು ಆಡಿರುವ ವಿಶ್ವದ ಕೇವಲ ಮೂವರು ವೇಗಿಗಳಲ್ಲಿ ಒಬ್ಬರೆನಿಸಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಕ್ ಕ್ಯಾಲೀಸ್ ಹಾಗೂ ಇಂಗ್ಲೆಂಡ್‌ನವರೇ ಆದ ಸ್ಟುವರ್ಟ್ ಬ್ರಾಡ್ ಉಳಿದ ಇಬ್ಬರು ವೇಗಿಗಳು.

ಆರಂಭದಲ್ಲಿಯೇ ಯಶಸ್ಸು ತಂದುಕೊಟ್ಟ ಆಂಡರ್ಸನ್

ಆರಂಭದಲ್ಲಿಯೇ ಯಶಸ್ಸು ತಂದುಕೊಟ್ಟ ಆಂಡರ್ಸನ್

ಇನ್ನು ತವರಿನಲ್ಲಿ ಆಡುತ್ತಿರುವ 100ನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಬೌಲರ್ ಆಗಿ ದಾಳಿ ನಡೆಸಿದ ಜೇಮ್ಸ್ ಆಂಡರ್ಸನ್ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭದಲ್ಲಿಯೇ ಆಘಾತ ನೀಡಿದ್ದಾರೆ. ಆರಂಭಿಕ ಆಟಗಾರ ಸರೆಲ್ ಇರ್ವೀ ಅವರನ್ನು ಕೇವಲ ಮೂರು ರನ್‌ಗಳಿಸಿದ್ದಾಗ ಔಟ್ ಮಾಡುವ ಮೂಲಕ ಇಂಗ್ಲೆಂಡ್‌ಗೆ ಮುನ್ನಡೆ ಒದಗಿಸಿದರು. ಈ ಆರಂಭಿಕ ಯಶಸ್ಸನ್ನು ಬಳಸಿಕೊಂಡ ಇಂಗ್ಲೆಂಡ್ ದಕ್ಷಿಣ ಆಪ್ರಿಕಾ ತಂಡಕ್ಕೆ ಒಂದಾದ ಮೇಲೊಂದರಂತೆ ಆಘಾತ ನೀಡುತ್ತಾ ಸಾಗಿದೆ.

ತವರಿನಲ್ಲಿ ಹೆಚ್ಚು ಟೆಸ್ಟ್ ಆಡಿರುವ ಕ್ರಿಕೆಟಿಗರು

ತವರಿನಲ್ಲಿ ಹೆಚ್ಚು ಟೆಸ್ಟ್ ಆಡಿರುವ ಕ್ರಿಕೆಟಿಗರು

ಜೇಮ್ಸ್ ಆಂಡರ್ಸನ್ - ತವರಿನಲ್ಲಿ 100 ಟೆಸ್ಟ್ (ಒಟ್ಟು ಟೆಸ್ಟ್ 174)
ಸಚಿನ್ ತೆಂಡೂಲ್ಕರ್ - ತವರಿನಲ್ಲಿ 94 ಟೆಸ್ಟ್ (ಒಟ್ಟು ಟೆಸ್ಟ್200)
ರಿಕಿ ಪಾಂಟಿಂಗ್ - ತವರಿನಲ್ಲಿ 92 ಟೆಸ್ಟ್ (ಒಟ್ಟು ಟೆಸ್ಟ್168)
ಸ್ಟುವರ್ಟ್ ಬ್ರಾಡ್ - ತವರಿನಲ್ಲಿ 91 ಟೆಸ್ಟ್ (ಒಟ್ಟು ಟೆಸ್ಟ್158)
ಅಲೆಸ್ಟರ್ ಕುಕ್ - ತವರಿನಲ್ಲಿ 89 ಟೆಸ್ಟ್ (ಒಟ್ಟು ಟೆಸ್ಟ್161)

ಇತ್ತಂಡಗಳ ಸ್ಕ್ವಾಡ್ ಹೀಗಿದೆ

ಇತ್ತಂಡಗಳ ಸ್ಕ್ವಾಡ್ ಹೀಗಿದೆ

ಇಂಗ್ಲೆಂಡ್ ಆಡುವ ಬಳಗ: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಒಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಸ್ಟುವರ್ಟ್ ಬ್ರಾಡ್, ಆಲಿ ರಾಬಿನ್ಸನ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್
ಬೆಂಚ್: ಕ್ರೇಗ್ ಓವರ್ಟನ್, ಹ್ಯಾರಿ ಬ್ರೂಕ್, ಮ್ಯಾಟಿ ಪಾಟ್ಸ್ ದಕ್ಷಿಣ ಆಫ್ರಿಕಾ ಸ್ಕ್ವಾಡ್

ದಕ್ಷಿಣ ಆಫ್ರಿಕಾ ಆಡುವ ಬಳಗ: ಡೀನ್ ಎಲ್ಗರ್ (ನಾಯಕ), ಸರೆಲ್ ಎರ್ವೀ, ಕೀಗನ್ ಪೀಟರ್ಸನ್, ಐಡೆನ್ ಮಾರ್ಕ್ರಾಮ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್), ಸೈಮನ್ ಹಾರ್ಮರ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ, ಲುಂಗಿ ಎನ್‌ಗಿಡಿ
ಬೆಂಚ್: ಮಾರ್ಕೊ ಜಾನ್ಸೆನ್, ಖಯಾ ಝೊಂಡೋ, ಲುಥೋ ಸಿಪಾಮ್ಲಾ, ರಯಾನ್ ರಿಕೆಲ್ಟನ್, ಗ್ಲೆಂಟನ್ ಸ್ಟೌರ್ಮನ್

Story first published: Friday, August 26, 2022, 9:53 [IST]
Other articles published on Aug 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X