ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: 2ನೇ ಟೆಸ್ಟ್‌ಗೆ ಜೇಮ್ಸ್ ಆಂಡರ್ಸನ್ ಕಣಕ್ಕಿಳಿಯುವುದು ಅನುಮಾನ

England pacer James Anderson unlikely to play second Test of 4 match seriesagainst India

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ನ ಅನುಭವಿ ಜೇಮ್ಸ್ ಆಂಡರ್ಸನ್ ನೀಡಿದ ಅದ್ಭುತ ಪ್ರದರ್ಶನ ಇಂಗ್ಲೆಂಡ್‌ನ ಗೆಲುವಿಗೆ ಕಾರಣಗಳಲ್ಲಿ ಒಂದು. ಉತ್ತಮವಾಗಿ ಬೌಲಿಂಗ್ ದಾಳಿ ಸಂಘಟಿಸಿದ ಆಂಡರ್ಸನ್ ಎರಡನೇ ಪಂದ್ಯದಲ್ಲಿ ಆಡುವ ಸಾಧ್ಯತೆಯಿಲ್ಲ. ಇದಕ್ಕೆ ಕಾರಣ ಇಂಗ್ಲೆಂಡ್ ತಂಡ ಪಾಲಿಸಿಕೊಂಡು ಬರುತ್ತಿರುವ ರೊಟೇಶನ್ ಪದ್ದತಿ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನ ಎರಡನೇ ಪಂದ್ಯವೂ ಮೊದಲನೇ ಪಂದ್ಯ ನಡೆದ ಚೆನ್ನೈನ ಕ್ರೀಡಾಂಗಣದಲ್ಲಿಯೇ ನಡೆಯಲಿದೆ. ಇದೇ ಅಂಗಳದಲ್ಲಿ ನಡೆದ ಮೊದಲ ಪಂದ್ಯದ ಐದನೇ ದಿನದಾಟದಲ್ಲಿ ಜೇಮ್ಸ್ ಆಂಡರ್ಸನ್ ಮ್ಯಾಚ್ ವಿನ್ನಿಂಗ್ಸ್ ಪ್ರದರ್ಶನ ನೀಡಿದರು. ಆದರೆ ಅವರಿಗೆ ಎರಡನೇ ಪಂದ್ಯಕ್ಕೆ ವಿಶ್ರಾಂತಿ ನಿಡುವ ಸಾಧ್ಯತೆಯೇ ಹೆಚ್ಚಿದೆ.

2ನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾಗೆ ಆತಂಕ ಮೂಡಿಸಿದ ನಾಲ್ಕು ಸಂಗತಿಗಳು2ನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾಗೆ ಆತಂಕ ಮೂಡಿಸಿದ ನಾಲ್ಕು ಸಂಗತಿಗಳು

ಇಂಗ್ಲೆಂಡ್‌ನ ಈ 38ರ ಹರೆಯದ ದಿಗ್ಗಜ ಬೌಲರ್‌ಗೆ ವಿಶ್ರಾಂತಿಯನ್ನು ನೀಡಿ ಇಂಗ್ಲೆಂಡ್ ತಂಡದ ಇನ್ನೋರ್ವ ಶ್ರೇಷ್ಠ ವೇಗಿ ಸ್ಟುವರ್ಟ್ ಬ್ರಾಡ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಫಲಿತಾಂಶವನ್ನು ಹಣನೆಗೆ ತೆಗೆದುಕೊಳ್ಳದೆಯೇ ರೊಟೇಶನ್ ಪದ್ಧತಿಯ ಪ್ರಕಾರ ಇಂಗ್ಲೆಂಡ್ ತಂಡದ ಮ್ಯಾನೇಜ್‌ಮೆಂಟ್ ಇಂತಾ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯೇ ಹೆಚ್ಚಿದೆ.

ಜೇಮ್ಸ್ ಆಂಡರ್ಸನ್‌ಗೆ ವಿಶ್ರಾಂತಿ ನೀಡುವ ಬಗ್ಗೆ ಇಂಗ್ಲೆಂಡ್ ತಂಡದ ಕೋಚ್ ಪ್ರತಿಕ್ರಿಯೆ ನೀಡಿದ್ದು " ಅದು ನಿಜಕ್ಕೂ ಕಠಿಣ(ಜೇಮ್ಸ್ ಆಂಡರ್ಸನ್‌ಗೆ ವಿಶ್ರಾಂತಿ) ಆತನೋರ್ವ ಅದ್ಭುತವಾದ ಆಟಗಾರ. ಆದರೆ ಈ ನಿರ್ಧಾರದ ಬಗ್ಗೆ ನೀವು ಕಾದು ನೋಡಬೇಕಿದೆ. ಆದರೆ ವಿಜೇತ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ನಾನು ಹಿಂಜರಿಯಲಾರೆ" ಎಂದಿದ್ದಾರೆ ಕ್ರಿಸ್ ಸಿಲ್ವರ್‌ವುಡ್.

ಕಿಂಗ್ಸ್ XI ಪಂಜಾಬ್ ತಂಡದ ಹೆಸರು ಹಾಗೂ ಲೋಗೋ ಬದಲಾವಣೆ ಸಾಧ್ಯತೆಕಿಂಗ್ಸ್ XI ಪಂಜಾಬ್ ತಂಡದ ಹೆಸರು ಹಾಗೂ ಲೋಗೋ ಬದಲಾವಣೆ ಸಾಧ್ಯತೆ

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಕಣಕ್ಕಿಳಿದಿದ್ದರೆ ಎರಡನೇ ಪಂದ್ಯದಲ್ಲಿ ಆಂಡರ್ಸನ್ ತಂಡದಲ್ಲಿ ಸ್ಥಾನ ಪಡೆದು ಬ್ರಾಡ್‌ಗೆ ವಿಶ್ರಾಂತಿಯನ್ನು ನೀಡಲಾಗಿತ್ತು. ಲಂಕಾ ವಿರುದ್ಧದ ಈ ಸರಣಿಯನ್ನು 2-0 ಅಂತರದಿಂದ ಇಂಗ್ಲೆಂಡ್ ಗೆದ್ದುಕೊಂಡಿತ್ತು.

Story first published: Thursday, February 11, 2021, 23:05 [IST]
Other articles published on Feb 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X