ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾರ್ಬಡೋಸ್‌ನಲ್ಲಿ ಸಜ್ಜಾಗುತ್ತಿದೆ ಇಂಗ್ಲೆಂಡ್ ಮಷಿನ್ ಗನ್!: 2023ರ ಆರಂಭಲ್ಲಿ ಕಣಕ್ಕೆ ಸಿದ್ಧತೆ!

England Pacer Jofra Archer eye on early 2023 return as the England bowler starts bowling in the nets

ಇಂಗ್ಲೆಂಡ್ ತಂಡದ ಪ್ರತಿಭಾನ್ವಿತ ವೇಗದ ಬೌಲರ್ ಜೋಫ್ರಾ ಆರ್ಚರ್ ಗಾಯದ ಕಾರಣದಿಂದಾಗಿ ಸುದೀರ್ಘ ಕಾಲದಿಮದ ಕ್ರಿಕೆಟ್‌ನಿಂದ ದೂರವುಳಿದಿದ್ದಾರೆ. ಬಹುತೇಕ ಒಂದೂವರೆ ವರ್ಷದಿಂದ ಆರ್ಚರ್ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಕಳೆದ ವರ್ಷದ ಟಿ20 ವಿಶ್ವಕಪ್‌ನಿಂದಲೂ ಹೊರಗುಳಿದಿದ್ದ ಆರ್ಚರ್ ಈ ವರ್ಷವೂ ಆಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಲು ಜೋಫ್ರಾ ಆರ್ಚರ್ ಕಸರತ್ತು ಆರಂಭಿಸಿದ್ದಾರೆ.

ಮುಂದಿನ ವರ್ಷಾರಂಭದಲ್ಲಿ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾಗೆ ಪ್ರವಾಸ ಕೈಗೊಂಡು ಸರಣಿಯನ್ನಾಡಲಿದೆ. ಈ ಸರಣಿಯನ್ನು ಜೋಫ್ರಾ ಆರ್ಚರ್ ಗುರಿಯಾಗಿಸಿಕೊಂಡಿದ್ದು ಆ ವೇಲೆಗೆ ಸಂಪೂರ್ಣ ಸಜ್ಜಾಗಲು ಸಿದ್ಧವಾಗುತ್ತಿದ್ದಾರೆ ಎಂದು ಮಾಹಿತಿ ಹೊರಬಿದ್ದಿದೆ. ಮೂರು ಪಂದ್ಯಗಳ ಏಕದಿನ ಸರಣಿ ಇದಾಗಿದ್ದು 2020ರಲ್ಲಿ ಈ ಸರಣಿ ಆಯೋಜನೆಯಾಗಬೇಕಾಗಿತ್ತು. ಆದರೆ ಕೊರೊನಾವೈರಸ್‌ನ ಕಾರಣದಿಂದಾಗಿ ಈ ಸರಣಿ ಮುಂದೂಡಲ್ಪಟ್ಟಿತ್ತು.

T20 World Cup: ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ಸಮಸ್ಯೆಯಲ್ಲ ಎಂದ ಮಾಜಿ ಆಟಗಾರT20 World Cup: ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ಸಮಸ್ಯೆಯಲ್ಲ ಎಂದ ಮಾಜಿ ಆಟಗಾರ

ಭಾರತದ ವಿರುದ್ಧ ಕೊನೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದ ಆರ್ಚರ್

ಭಾರತದ ವಿರುದ್ಧ ಕೊನೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದ ಆರ್ಚರ್

27 ವರ್ಷ ವಯಸ್ಸಿನ ಬಲಗೈ ವೇಗಿಯಾಗಿರುವ ಜೋಫ್ರಾ ಆರ್ಚರ್ ಕೊನೆಯ ಬಾರಿಗೆ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಭಾಗವಹಿಸಿದ್ದು 2021ರ ಜುಲೈನಲ್ಲಿ ಆಕ್ಸ್‌ಫರ್ಡ್‌ಶೈರ್ ವಿರುದ್ಧ ಸಸೆಕ್ಸ್ ತಂಡದ ಪರವಾಗಿ ರಾಯಲ್ ಒನ್-ಡೇ ಕಪ್ ಅಭ್ಯಾಸ ಪಂದ್ಯದಲ್ಲಿ. 2021ರ ಮಾರ್ಚ್‌ನಲ್ಲಿ ಭಾರತದ ವಿರುದ್ಧದ ನಡೆದ T20 ಸರಣಿಯಲ್ಲಿ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿದ್ದರು. 2020ರಲ್ಲಿ ದಕ್ಷಿಣ ಆಫ್ರಿಕಾಗೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಆರ್ಚರ್ ಮೊಣಕೈಗೆ ಗಾಯ ಮಾಡಿಕೊಂಡಿದ್ದರು. ಮೊಣಕೈಗೆ ಎರಡು ಶಸ್ತ್ರಚಿಕಿತ್ಸೆ ಅಗತ್ಯವಿದ್ದ ಕಾರಣ ಕಮ್‌ಬ್ಯಾಕ್ ನಿಧಾನವಾಗಿದೆ.

ಬೌಲಿಂಗ್ ಅಭ್ಯಾಸ ಪ್ರಾರಂಭಿಸಿರುವ ವೇಗಿ

ಬೌಲಿಂಗ್ ಅಭ್ಯಾಸ ಪ್ರಾರಂಭಿಸಿರುವ ವೇಗಿ

ಅವರ ಮೊಣಕೈ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ ಆರ್ಚರ್ 2022 ಮೇ ತಿಂಗಳಿನಲ್ಲಿ ಬೆನ್ನುನೋವಿಗೂ ತುತ್ತಾದರು. ಹೀಗಾಗಿ ಕಮ್‌ಬ್ಯಾಕ್ ಮತ್ತಷ್ಟು ತಡವಾಯಿತು. ವರದಿಗಳ ಪ್ರಕಾರ 2023ರ ಫೆಬ್ರವರಿ-ಮಾರ್ಚ್‌ನಲ್ಲಿ ಇಂಗ್ಲೆಂಡ್‌ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು ಈ ಸಮಯದಲ್ಲಿ ಸಮಯದಲ್ಲಿ ಜೋಫ್ರಾ ಕ್ರಿಕೆಟ್‌ಗೆ ಮರಳುವ ಗುರಿಯನ್ನು ಹೊಂದಿದ್ದಾರೆ. ಸದ್ಯ ಬಾರ್ಬಡೋಸ್‌ನಲ್ಲಿರುವ ಆರ್ಚರ್ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ.

ಎರಡು ಟಿ20 ವಿಶ್ವಕಪ್ ಕಳೆದುಕೊಂಡಿರುವ ಆರ್ಚರ್

ಎರಡು ಟಿ20 ವಿಶ್ವಕಪ್ ಕಳೆದುಕೊಂಡಿರುವ ಆರ್ಚರ್

ಇನ್ನು ಇಂಗ್ಲೆಂಡ್ ತಂಡದ ಪ್ರತಿಭಾವಂತ ವೇಗದ ಬೌಲರ್ ಆಗಿರುವ ಜೋಫ್ರಾ ಆರ್ಚರ್ ಕಳೆದ ವರ್ಷದ ಟಿ20 ವಿಶ್ವಕಪ್‌ನ ಬಳಿಕ ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್ ತಂಡನಲ್ಲಿಯೂ ಆಡುವ ಅವಕಾಶವನ್ನು ಕಳೆದುಕೊಂಡಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಜೋಫ್ರಾ ಆರ್ಚರ್‌ನಂತಾ ಪ್ರಮುಖ ವೇಗಿ ಆಸ್ಟ್ರೇಲಿಯಾದ ವೇಗದ ಪಿಚ್‌ನಲ್ಲಿ ಅತ್ಯಂತ ನಿರ್ಣಾಯಕ ಪಾತ್ರವಹಿಸುವ ಸಾಧ್ಯತೆಯಿತ್ತು ಎಂಬುದು ಮರೆಯುವಂತಿಲ್ಲ.

ಜಾನಿ ಬೈರ್‌ಸ್ಟೋವ್ ಕೂಡ ಅಲಭ್ಯ

ಜಾನಿ ಬೈರ್‌ಸ್ಟೋವ್ ಕೂಡ ಅಲಭ್ಯ

ಇನ್ನು ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ಜೋಫ್ರಾ ಆರ್ಚರ್ ಬಳಿಕ ಮತ್ತೋರ್ವ ಪ್ರಮುಖ ಬ್ಯಾಟರ್‌ನ ಸೇವೆಯಿಂದ ಕೂಡ ವಂಚಿತವಾಗಲಿದೆ. ಸ್ಪೋಟಕ ಬ್ಯಾಟರ್ ಜಾನಿ ಬೈರ್‌ಸ್ಟೋವ್ ಕೂಡ ಗಾಯಗೊಂಡಿದ್ದು ದೀರ್ಘ ವಿಶ್ರಾಂತಿಯನ್ನು ಪಡೆಯುವ ಅನಿವಾರ್ಯತೆಯಲ್ಲಿದ್ದಾರೆ. ಹೀಗಾಗಿ ಜಾನಿಬೈರ್‌ಸ್ಟೋವ್ ಕೂಡ ಈ ಬಾರಿಯ ಟಿ20 ವಿಶ್ವಕಪ್‌ನ ತಂಡಕ್ಕೆ ಅಲಭ್ಯವಾಗಿದ್ದಾರೆ. ಇದು ಇಂಗ್ಲೆಂಡ್ ತಂಡಕ್ಕೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ.

Story first published: Thursday, October 6, 2022, 21:20 [IST]
Other articles published on Oct 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X