ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್ಚರ್‌ಗೆ ಮೊಣಕೈ ಶಸ್ತ್ರಚಿಕಿತ್ಸೆ, ಭಾರತ ವಿರುದ್ಧದ ಟೆಸ್ಟ್‌ಗೆ ಅನುಮಾನ

England pacer Jofra Archer to undergo elbow surgery, doubtful for India Test series

ಲಂಡನ್: ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಆಂಗ್ಲ ತಂಡದ ಪ್ರಮುಖ ವೇಗಿ ಜೋಫ್ರಾ ಆರ್ಚರ್ ಮೊಣಕೈ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದು, ಮುಂಬರಲಿರುವ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್‌ ಸರಣಿಯಲ್ಲಿ ಆಡೋದು ಅನುಮಾನ.

ಗಂಗೂಲಿ ಕಷ್ಟಪಟ್ಟು ಆಡುತ್ತಿರಲಿಲ್ಲ, ನಾಯಕತ್ವದ ಹುಚ್ಚಿತ್ತು; ಆಗಿನ ಟೀಮ್ ಇಂಡಿಯಾ ಕೋಚ್ ಹೇಳಿಕೆಗಂಗೂಲಿ ಕಷ್ಟಪಟ್ಟು ಆಡುತ್ತಿರಲಿಲ್ಲ, ನಾಯಕತ್ವದ ಹುಚ್ಚಿತ್ತು; ಆಗಿನ ಟೀಮ್ ಇಂಡಿಯಾ ಕೋಚ್ ಹೇಳಿಕೆ

ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಅಂದರೆ ಆಗಸ್ಟ್ 4ರಿಂದ ಭಾರತ-ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಮಧ್ಯೆ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಮತ್ತು ನ್ಯೂಜಿಲೆಂಡ್-ಭಾರತ ಮಧ್ಯೆ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ನಡೆಯಲಿದೆ.

ಮೇ 21ರ ಗುರುವಾರ ಆರ್ಚರ್ ಮೊಣಕೈ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಇಂಗ್ಲೆಂಡ್ ಆ್ಯಂಡ್ ವೇಲ್ ಕ್ರಿಕೆಟ್ ಬೋರ್ಡ್ (ಇಸಿಬಿ) ಖಾತರಿಪಡಿಸಿದೆ. ತಜ್ಞರೊಂದಿಗಿನ ಮಾತುಕತೆಯ ಬಳಿಕ ಆರ್ಚರ್‌ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಆದರೆ ಆರ್ಚರ್ ಮತ್ತೆ ತಂಡಕ್ಕೆ ಯಾವಾಗ ವಾಪಸ್ಸಾಗಲಿದ್ದಾರೆ ಅನ್ನೋದನ್ನು ಇಸಿಬಿ ತಿಳಿಸಿಲ್ಲ.

'ಪೃಥ್ವಿ ಶಾ ಸೆಹ್ವಾಗ್ ಇದ್ದಂತೆ ಆತನನ್ನು ತಂಡದಿಂದ ಹೊರಹಾಕಿದ್ದು ತಪ್ಪು''ಪೃಥ್ವಿ ಶಾ ಸೆಹ್ವಾಗ್ ಇದ್ದಂತೆ ಆತನನ್ನು ತಂಡದಿಂದ ಹೊರಹಾಕಿದ್ದು ತಪ್ಪು'

ತನ್ನ ಮನೆಯಲ್ಲಿ ಫಿಶ್ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ಆರ್ಚರ್ ಕೈಗೆ ಗಾಯವಾಗಿತ್ತು. ಅವರ ಕೈಯೊಳಗೆ ಗಾಜಿನ ಚೂರು ಸೇರಿಸಿಕೊಂಡಿತ್ತು. ಒಮ್ಮೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದ ಆರ್ಚರ್ ಐಪಿಎಲ್‌ನಲ್ಲಿ ಆಡಿರಲಿಲ್ಲ. ಆದರೆ ಇತ್ತೀಚೆಗೆ ಸಸೆಕ್ಸ್ ಪರ ಕೌಂಟಿ ಕ್ರಿಕೆಟ್‌ನಲ್ಲಿ ಆಡಿದ್ದರು. ಈ ವೇಳೆ ಆರ್ಚರ್‌ಗೆ ಮತ್ತೆ ನೋವಿನ ಅನುಭವ ಆಗಿದ್ದರಿಂದ ಶಸ್ತ್ರ ಚಿಕಿತ್ಸೆಯ ಮೊರೆ ಹೋಗಿದ್ದಾರೆ.

Story first published: Friday, May 21, 2021, 10:22 [IST]
Other articles published on May 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X