ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ್ಯಶಸ್ ಸೋತಿದ್ದಕ್ಕೆ ಇಂಗ್ಲೆಂಡ್ ಆಟಗಾರರಿಗೆ ಟೀಕಿಸುವುದಲ್ಲ, ಮೆಡಲ್‌ ನೀಡಬೇಕು: ಪಾಲ್ ಕಾಲಿಂಗ್‌ವುಡ್‌

Ashes Test

ಇಂಗ್ಲೆಂಡ್ ಆಟಗಾರರು ಕಳೆದ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಆ್ಯಶಸ್ ಗೆಲ್ಲಬೇಕಿತ್ತು ಎಂಬುದು ಹಾಸ್ಯಾಸ್ಪದವಾಗಿದೆ ಎಂದು ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಪಾಲ್ ಕಾಲಿಂಗ್‌ವುಡ್‌ ಹೇಳಿದ್ದಾರೆ.

ಇತ್ತೀಚೆಗಷ್ಟೇ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡ ಇಂಗ್ಲೆಂಡ್ ತಂಡ ಭಾರೀ ಟೀಕೆ ಎದುರಿಸುತ್ತಿದ್ದು, ವೈಟ್‌ವಾಶ್ ಆಗೋದ್ರಲ್ಲಿ ಸ್ವಲ್ಪದರಲ್ಲೇ ಮಿಸ್‌ ಆಗಿತ್ತು. ಹೀಗಾಗಿ 0-4 ಪಂದ್ಯಗಳ ಅಂತರದಲ್ಲಿ ಆತಿಥೇಯ ಕಾಂಗರೂಗಳಿಗೆ ಟ್ರೋಫಿ ಬಿಟ್ಟುಕೊಟ್ಟ ಇಂಗ್ಲೆಂಡ್ ತಂಡದಲ್ಲಿ ಭಾರೀ ಬದಲಾವಣೆಗೆ ಒತ್ತಾಯ ಕೇಳಿಬಂದಿತು.

ಅನೇಕ ಇಂಗ್ಲೆಂಡ್ ಕ್ರಿಕೆಟ್ ತಜ್ಞರು ತಮ್ಮ ಎದುರಾಳಿಗಳ ವಿರುದ್ಧ ಹೋರಾಡುವ ದೃಢತೆಯನ್ನು ತೋರಿಸದ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿಧಾನವನ್ನು ಟೀಕಿಸಿದರು. ಆದ್ರೆ ಮಾಜಿ ನಾಯಕ ಪಾಲ್ ಕಾಲಿಂಗ್‌ವುಡ್‌ ಇಂಗ್ಲೆಂಡ್ ತಂಡವನ್ನ ಬೆಂಬಲಿಸಿದ್ದಾರೆ.

ಕೋವಿಡ್-19 ಬಬಲ್‌ನಲ್ಲಿ ಆಡುವುದು ಸುಲಭದ ಮಾತಲ್ಲ: ಪಾಲ್‌ ಕಾಲಿಂಗ್‌ವುಡ್

ಕೋವಿಡ್-19 ಬಬಲ್‌ನಲ್ಲಿ ಆಡುವುದು ಸುಲಭದ ಮಾತಲ್ಲ: ಪಾಲ್‌ ಕಾಲಿಂಗ್‌ವುಡ್

ಕೋವಿಡ್-19 ಸಾಂಕ್ರಾಮಿಕದ ನಡುವೆ ನಿರಂತರ ಕ್ರಿಕೆಟ್ ಆಡುತ್ತಿರುವ ಇಂಗ್ಲೆಂಡ್ ತಂಡ ಕೋವಿಡ್ ಬಯೋ ಬಬಲ್‌ನಲ್ಲಿ ಸಮಯ ಕಳೆಯಬೇಕಾಗುತ್ತದೆ. ವಿವಿಧ ಕೋವಿಡ್-19 ಬಬಲ್‌ಗಳ ನಡುವೆ ನಿರಂತರವಾಗಿ ಕ್ರಿಕೆಟ್ ಆಡುತ್ತಿರುವ ಮತ್ತು ಬದಲಾಗುತ್ತಿರುವ ಏಕೈಕ ತಂಡ ಇಂಗ್ಲೆಂಡ್. ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ ಮುಗಿದ ಬಳಿಕ ಇಂಗ್ಲೆಂಡ್‌ನ ಕೆಲವು ಆಟಗಾರರು ಆಸ್ಟ್ರೇಲಿಯಾಕ್ಕೆ ಬಂದಿದ್ದರು.

ಹೀಗಾಗಿಯೇ ಆಲ್‌ರೌಂಡರ್‌ಗಳಾದ ಕ್ರಿಸ್ ವೋಕ್ಸ್ ಮತ್ತು ಬೆನ್ ಸ್ಟೋಕ್ಸ್ ಅವರು ಬಬಲ್ಸ್‌ನಲ್ಲಿ ಉಳಿದುಕೊಂಡಿರುವಾಗ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಿರುವ ಉದಾಹರಣೆಗಳನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ ಎಂದು ಕಾಲಿಂಗ್‌ವುಡ್ ಉಲ್ಲೇಖಿಸಿದ್ದಾರೆ.

'' ಕೋವಿಡ್-19 ಬಯೋ ಬಬಲ್ ಪರಿಣಾಮಗಳನ್ನ ಜನರು ಅರ್ಥಮಾಡಿಕೊಂಡಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ದುಬೈನಲ್ಲಿ ಕಠಿಣವಾದ ಬಬಲ್‌ ಮುಗಿಸಿ ಆ್ಯಶಸ್‌ಗೆ ಹೋಗುವುದು, ಅಕ್ಷರಶಃ ಒಂದು ಹೆಜ್ಜೆ ದೂರವಿದೆ ಎಂದು ನಾನು ಭಾವಿಸುತ್ತೇನೆ. ಅದನ್ನು ಅನುಭವಿಸುವವರಿಗೆ ಅದು ಹೇಗಿರುತ್ತದೆ ಎಂದು ವಿವರಿಸಲು ಸಹ ಸಾಧ್ಯವಿಲ್ಲ'' ಕಾಲಿಂಗ್‌ವುಡ್ ಹೇಳಿದ್ದಾರೆ.

100 ವರ್ಷದ ಅತ್ಯುತ್ತಮ ಆಟಗಾರರನ್ನ ಕರೆತಂದಿದ್ರು ಇದೇ ಪ್ರದರ್ಶನ

100 ವರ್ಷದ ಅತ್ಯುತ್ತಮ ಆಟಗಾರರನ್ನ ಕರೆತಂದಿದ್ರು ಇದೇ ಪ್ರದರ್ಶನ

ಮಾನಸಿಕವಾಗಿ ದಣಿದಿರುವ ಇಂಗ್ಲೆಂಡ್ ತಂಡವನ್ನು ಸೋಲಿಸಲು ಆಸ್ಟ್ರೇಲಿಯಾವು ಚಿಂತಿಸಲಿಲ್ಲ, ಅವರು ಕೇವಲ ಆ್ಯಶಸ್ ಬಯಸಿದ್ದರು. ಅದಕ್ಕೆ ತಕ್ಕ ಹಾಗೆ ತವರಿನಲ್ಲಿ ಪ್ರದರ್ಶನ ನೀಡಿದರು. ಆ್ಯಶಸ್ ಸರಣಿಗೆ ಹೋಗುವ ಮುನ್ನವೇ ಇಂಗ್ಲೆಂಡ್ ಆಟಗಾರರು ಮಾನಸಿಕವಾಗಿ ದಣಿದಿದ್ದರು ಎಂದು ಪಾಲ್‌ ಹೇಳಿದ್ದಾರೆ.

ಮಾನಸಿಕವಾಗಿ ದಣಿದಿದ್ದ ಇಂಗ್ಲೆಂಡ್ ತಂಡ

ಮಾನಸಿಕವಾಗಿ ದಣಿದಿದ್ದ ಇಂಗ್ಲೆಂಡ್ ತಂಡ

ಮಾನಸಿಕವಾಗಿ ದಣಿದಿರುವ ಇಂಗ್ಲೆಂಡ್ ತಂಡವನ್ನು ಸೋಲಿಸಲು ಆಸ್ಟ್ರೇಲಿಯಾವು ಚಿಂತಿಸಲಿಲ್ಲ, ಅವರು ಕೇವಲ ಆ್ಯಶಸ್ ಬಯಸಿದ್ದರು. ಅದಕ್ಕೆ ತಕ್ಕ ಹಾಗೆ ತವರಿನಲ್ಲಿ ಪ್ರದರ್ಶನ ನೀಡಿದರು. ಆ್ಯಶಸ್ ಸರಣಿಗೆ ಹೋಗುವ ಮುನ್ನವೇ ಇಂಗ್ಲೆಂಡ್ ಆಟಗಾರರು ಮಾನಸಿಕವಾಗಿ ದಣಿದಿದ್ದರು ಎಂದು ಪಾಲ್‌ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಆರ್‌. ಅಶ್ವಿನ್ ಆಯ್ಕೆಯಿಲ್ಲ: ಏಕದಿನ, ಟಿ20 ಕ್ರಿಕೆಟ್ ಬಾಗಿಲು ಮುಚ್ಚಿತೇ?

Virat Kohli ಈಗಲೂ ಎಷ್ಟು ವರ್ಷ ಕ್ರಿಕೆಟ್ ಆಡಬಹುದು | Oneindia Kannada
ಈ ಆಟಗಾರರಿಗೆ ಟೀಕೆಯ ಬದಲು ಪದಕಗಳನ್ನ ನೀಡಬೇಕು

ಈ ಆಟಗಾರರಿಗೆ ಟೀಕೆಯ ಬದಲು ಪದಕಗಳನ್ನ ನೀಡಬೇಕು

ಸವಾಲಿನ ಸಂದರ್ಭದಲ್ಲೂ ಆಸ್ಟ್ರೇಲಿಯಾ ವಿರುದ್ಧ ಪ್ರದರ್ಶನ ನೀಡಿದ ಇಂಗ್ಲೆಂಡ್ ಆಟಗಾರರಿಗೆ ಎಲ್ಲರೂ ಟೀಕೆ ಮಾಡುವ ಬದಲು ಅವರ ಮಾನಸಿಕ ಸ್ಥಿರತೆಗೆ ಮೆಡಲ್ ನೀಡಬೇಕಾಗಿದೆ ಎಂದು ಕಾಲಿಂಗ್‌ವುಡ್ ಅಭಿಪ್ರಾಯ ಪಟ್ಟಿದ್ದಾರೆ.

"ಈ ಆಟಗಾರರು ಪದಕಗಳಿಗೆ ಅರ್ಹರೇ ಹೊರತು ಟೀಕೆಗಲ್ಲ. ಇದು ಇಂಗ್ಲೆಂಡ್ ಫುಟ್ಬಾಲ್ ತಂಡವನ್ನು ವಿಶ್ವಕಪ್‌ಗೆ ಹೋಗಲು ಕೇಳುವುದಕ್ಕೆ ಸಮನಾಗಿರುತ್ತದೆ. ಬಯೋ ಬಬಲ್‌ನಂತಹ ಸನ್ನಿವೇಶದಲ್ಲಿ ನೀವು ಪ್ರದರ್ಶನವನ್ನು ನಿರೀಕ್ಷಿಸುತ್ತೀರಾ? ಇದು ಹಾಸ್ಯಾಸ್ಪದವಾಗಿದೆ, "ಎಂದು ಅವರು ಹೇಳಿದರು.

ಪ್ರಸ್ತುತ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಡುತ್ತಿರುವ ಇಂಗ್ಲೆಂಡ್ ಟಿ20 ತಂಡದ ಮುಖ್ಯ ಕೋಚ್ ಆಗಿ ಕಾಲಿಂಗ್‌ವುಡ್‌ ನೇಮಕಗೊಂಡಿದ್ದಾರೆ.

Story first published: Friday, January 28, 2022, 10:25 [IST]
Other articles published on Jan 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X