ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ಗೆ ಇಂಗ್ಲೆಂಡ್ ಆಟಗಾರರ ಲಭ್ಯತೆಯ ಬಗ್ಗೆ ಪ್ರಮುಖ ಮಾಹಿತಿ ನೀಡಿದ ಇಂಗ್ಲೆಂಡ್ ಕೋಚ್

England players will be available for full IPL 14 says Coach Chris Silverwood

ಇಂಗ್ಲೆಂಡ್ ಹಾಗೂ ಭಾರತ ನಡುವಿನ ಟೆಸ್ಟ್ ಸರಣಿ ಅಂತ್ಯವಾಗಿದ್ದು ಈಗ ಸೀಮಿತ ಓವರ್‌ಗಳ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿದೆ. ಮೊದಲಿಗೆ ಐದು ಪಂದ್ಯಗಳ ಟಿ20 ಸರಣಿ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಅದಾದ ಬಳಿಕ ಮೂರು ಏಕದಿನ ಪಂದ್ಯಗಳು ನಡೆಯಲಿದೆ. ಈ ಮಧ್ಯೆ ಪ್ರವಾಸಿ ತಂಡದ ಕೋಚ್ ಕ್ರಿಸ್ ಸಿಲ್ವರ್‌ವುಡ್ ಇಂಗ್ಲೆಂಡ್ ತಂಡದ ಆಟಗಾರರು ಐಪಿಎಲ್‌ಗೆ ಲಭ್ಯರಾಗುವ ಬಗ್ಗೆ ಪ್ರಮುಖ ಹೇಳಿಕೆಯನ್ನು ನೀಡಿದ್ದಾರೆ.

ಐಪಿಎಲ್ ಆಡಳಿತ ಮಂಡಳಿ ಭಾನುವಾರ 14ನೇ ಆವೃತ್ತಿಯ ಐಪಿಎಲ್‌ನ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಏಪ್ರಿಲ್ 9 ರಿಂದ ಐಪಿಎಲ್ ಆರಂಭವಾಗುವುದು ಸ್ಪಷ್ಟವಾಗಿದೆ. ಈ ಪ್ರಮುಖ ಲೀಗ್ ಟೂರ್ನಿ ಮೇ 30ರಂದು ಅಂತ್ಯವಾಗಲಿದೆ. ಆದರೆ ಜೂನ್ 2ನೇ ತಾರೀಕಿನಿಂದ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ.

ಐಪಿಎಲ್ 2021: ಅಧಿಕೃತ ವೇಳಾಪಟ್ಟಿ ಬಿಡುಗಡೆ, ಮೊದಲ ಪಂದ್ಯದಲ್ಲಿ ಆರ್‌ಸಿಬಿಗೆ ಮುಂಬೈ ಎದುರಾಳಿಐಪಿಎಲ್ 2021: ಅಧಿಕೃತ ವೇಳಾಪಟ್ಟಿ ಬಿಡುಗಡೆ, ಮೊದಲ ಪಂದ್ಯದಲ್ಲಿ ಆರ್‌ಸಿಬಿಗೆ ಮುಂಬೈ ಎದುರಾಳಿ

ಈ ಬಗ್ಗೆ ಮಾತನಾಡಿದ ಇಂಗ್ಲೆಂಡ್ ತಂಡದ ಕೋಚ್ ಕ್ರಿಸ್ ಸಿಲ್ವರ್‌ವುಡ್ "ನಾವು ಈಗ ಇಂಗ್ಲೆಂಡ್ ತಂಡದ ಆಯ್ಕೆಯ ಬಗ್ಗೆ ಚಿತ್ತ ಹರಿಸುತ್ತಿಲ್ಲ. ದೇಶಕ್ಕಾಗಿ ಆಡುವುದು ನನ್ನ ಪ್ರಕಾರ ದೊಡ್ಡ ಸಂಗತಿ. ಇದರಲ್ಲಿ ಯಾವುದೇ ಬದಲಾವಣೆಯನ್ನು ಮಾಡುವುದು ಕಠಿಣ. ಈಗಿರುವ ಪ್ರಕಾರ ಅವರೆಲ್ಲರೂ ಐಪಿಎಲ್ ಟೂರ್ನಿಯಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳಲಿದ್ದಾರೆ" ಎಂದು ವರ್ಚುವಲ್ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಸಿಲ್ವರ್‌ವುಡ್ ಪ್ರತಿಕ್ರಿಯಿಸಿದರು.

ಎರಡು ವರ್ಷಗಳ ನಂತರ ಐಪಿಎಲ್ ಭಾರತದಲ್ಲಿ ನಡೆಯಲಿದೆ. ಕಳೆದ ಬಾರಿಯ ಆವೃತ್ತಿ ಕೊರೊನಾ ವೈರಸ್‌ನ ಕಾರಣದಿಂದಾಗಿ ಅನಿವಾರ್ಯವಾಗಿ ವಿದೇಶದಲ್ಲಿ ನಡೆಸಲಾಗಿತ್ತು. ಈ ಬಾರಿ ಟೂರ್ನಿ ಮತ್ತೆ ಭಾರತದಲ್ಲಿ ನಡೆಯಲಿದೆ. ಒಟ್ಟು ಆರು ತಾಣಗಳಲ್ಲಿ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ.

14ನೇ ಆವೃತ್ತಿಯ ಫೈನಲ್ ಪಂದ್ಯ ಮೇ 30ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದೇ ತಾಣದಲ್ಲಿ ಪ್ಲೇ ಆಫ್ ಹಂತದ ಪಂದ್ಯಗಳೂ ಕೂಡ ಇದೇ ಮೈದಾನದಲ್ಲಿ ನಡೆಯಲಿದೆ.

Story first published: Monday, March 8, 2021, 13:10 [IST]
Other articles published on Mar 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X