ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿನ್ನೆ ಕೊಹ್ಲಿ ಟ್ರೋಲ್, ಇಂದು ಧೊನಿ ಹುಟ್ಟುಹಬ್ಬಕ್ಕೆ ಇಂಗ್ಲೆಂಡ್ ಮಾಡಿದ ಟ್ವೀಟ್ ನೋಡಿದ್ರೆ ಕೋಪ ಬರದೇ ಇರದು!

Englands Barmy Army trolled MS Dhoni on his birthday and fans trolled them back with epic replies

ಎಂಎಸ್ ಧೋನಿಗೆ ಇಂದು 41ನೇ ಹುಟ್ಟುಹಬ್ಬದ ಸಂಭ್ರಮ. ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಎಂದೇ ಖ್ಯಾತಿಯನ್ನು ಪಡೆದಿರುವ ಎಂ ಎಸ್ ಧೋನಿ ಅವರಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಸಹ ಸಾಮಾಜಿಕ ಜಾಲತಾಣದ ತುಂಬಾ ಶುಭಾಶಯಗಳ ಸುರಿಮಳೆಯೇ ಸುರಿದಿದೆ.

ಹುಟ್ಟುಹಬ್ಬಕ್ಕಾಗಿ ಎಂಎಸ್ ಧೋನಿ ಕಟ್ಔಟ್; ಅತಿ ಎತ್ತರದ ಕಟ್ಔಟ್ ದಾಖಲೆ ಬರೆದ ಅಭಿಮಾನಿಗಳುಹುಟ್ಟುಹಬ್ಬಕ್ಕಾಗಿ ಎಂಎಸ್ ಧೋನಿ ಕಟ್ಔಟ್; ಅತಿ ಎತ್ತರದ ಕಟ್ಔಟ್ ದಾಖಲೆ ಬರೆದ ಅಭಿಮಾನಿಗಳು

ಸಾಮಾನ್ಯ ಜನರಿಂದ ಹಿಡಿದು ಸ್ಟಾರ್ ಕ್ರಿಕೆಟಿಗರು ಹಾಗೂ ಭಾರತ ಕ್ರಿಕೆಟ್‍ಗೆ ತಮ್ಮದೇ ಆದ ಹಲವಾರು ಸೇವೆಗಳನ್ನು ಸಲ್ಲಿಸಿರುವ ಹಿರಿಯ ಕ್ರಿಕೆಟಿಗರವರೆಗೂ ಎಂ ಎಸ್ ಧೋನಿ ಹುಟ್ಟುಹಬ್ಬದ ಶುಭಾಶಯಗಳು ಹರಿದು ಬಂದಿವೆ. ಕೇವಲ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿರುವ ಆಟಗಾರರು ಮಾತ್ರವಲ್ಲದೇ ವಿಶ್ವದ ಬೇರೆ ಬೇರೆ ದೇಶಗಳನ್ನು ಪ್ರತಿನಿಧಿಸಿರುವ ಹಲವಾರು ದಿಗ್ಗಜ ಕ್ರಿಕೆಟಿಗರು ಎಂ ಎಸ್ ಧೋನಿ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಅಧಿಕೃತ ಖಾತೆಗಳ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ.

ಭಾರತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‌ ಪ್ರವೇಶಿಸಲು ಈ 2 ತಂಡಗಳು ಇಷ್ಟು ಪಂದ್ಯ ಸೋಲಲೇಬೇಕು!ಭಾರತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‌ ಪ್ರವೇಶಿಸಲು ಈ 2 ತಂಡಗಳು ಇಷ್ಟು ಪಂದ್ಯ ಸೋಲಲೇಬೇಕು!

ಹೀಗೆ ಎಂಎಸ್ ಧೋನಿ ಹುಟ್ಟುಹಬ್ಬಕ್ಕೆ ಎಲ್ಲರೂ ಸಂತಸದಿಂದ ಶುಭಕೋರಿ ತಮ್ಮ ನೆಚ್ಚಿನ ಕ್ರಿಕೆಟಿಗನ ಗುಣಗಾನ ಮಾಡುತ್ತಿದ್ದರೆ, ಇಂಗ್ಲೆಂಡ್ ಕ್ರಿಕೆಟ್ ತಂಡದ ಫ್ಯಾನ್ಸ್ ಕ್ಲಬ್ ಟ್ವಿಟ್ಟರ್ ಖಾತೆಯಾದ ಬಾರ್ಮಿ ಆರ್ಮಿ ಮಾತ್ರ ಎಂ ಎಸ್ ಧೋನಿ ಹುಟ್ಟುಹಬ್ಬದ ದಿನದಂದೇ ವ್ಯಂಗ್ಯಾತ್ಮಕವಾಗಿ ಶುಭಕೋರುವ ಮೂಲಕ ಅವಮಾನಿಸಿದೆ. ಬಾರ್ಮಿ ಆರ್ಮಿ ಎಂ ಎಸ್ ಧೋನಿ ಕುರಿತು ಮಾಡಿರುವ ಟ್ವೀಟ್ ಮುಂದೆ ಇದೆ ಓದಿ.

ಧೋನಿ ಔಟ್ ಆಗಿದ್ದ ಫೋಟೋ ಬಳಸಿದ ಬಾರ್ಮಿ ಆರ್ಮಿ

ಎಂಎಸ್ ಧೋನಿಯಂತಹ ದಿಗ್ಗಜ ಕ್ರಿಕೆಟಿಗನ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಕೋರುವಾಗ ಪ್ರತಿಯೊಬ್ಬರೂ ಸಹ ಚೆಂದದ ಫೋಟೋಗಳನ್ನು ಹಾಕುತ್ತಾರೆ, ಕ್ರೀಡೆಗೆ ಸಂಬಂಧಿಸಿದ ಆನ್ ಲೈನ್ ಪೇಜ್‍ಗಳು ಒಂದಕ್ಕಿಂತ ಒಂದು ಅತ್ಯುತ್ತಮ ಎನ್ನುವಂತಹ ರೀತಿಯ ಎಡಿಟ್ಸ್ ಮಾಡಿ ಪೋಸ್ಟ್ ಮಾಡುತ್ತಾರೆ. ಹೀಗಿರುವ ಒಂದು ಅಂತರರಾಷ್ಟ್ರೀಯ ಕ್ರಿಕೆಟ್ ತಂಡದ ಅಭಿಮಾನಿ ಬಳಗದ ಅಧಿಕೃತ ಖಾತೆ ಎಂ ಎಸ್ ಧೋನಿಗೆ ಶುಭಾಶಯದ ಟ್ವೀಟ್ ಮಾಡುವಾಗ ಅವರು ಔಟ್ ಆಗಿ ತಲೆ ಬಗ್ಗಿಸಿ ಪೆವಿಲಿಯನ್ ಕಡೆ ಹೆಜ್ಜೆ ಹಾಕುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದೆ. ಹೌದು, ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯವೊಂದರಲ್ಲಿ ಎಂಎಸ್ ಧೋನಿ ಔಟ್ ಆಗಿ ಪೆವಿಲಿಯನ್ ಕಡೆ ಸಪ್ಪೆ ಮುಖ ಹಾಕಿಕೊಂಡು ಹೆಜ್ಜೆ ಹಾಕುತ್ತಿದ್ದ ಫೋಟೊವನ್ನು ಹಂಚಿಕೊಂಡಿರುವ ಬಾರ್ಮಿ ಆರ್ಮಿ 'ಹುಟ್ಟುಹಬ್ಬದ ಶುಭಾಶಯಗಳು ದೋನಿ, ಹಲವಾರು ವರ್ಷಗಳಿಂದ ಅದ್ಭುತ ಕಾಳಗಗಳನ್ನು ನಡೆಸುತ್ತಿದ್ದೀರಿ' ಎಂದು ಬರೆದುಕೊಳ್ಳುವುದರ ಮೂಲಕ ಕಾಲೆಳೆದಿದೆ. ಬಾರ್ಮಿ ಆರ್ಮಿ ಧೋನಿ ಔಟ್ ಆಗಿ ನಡೆಯುತ್ತಿರುವ ಫೋಟೋ ಹಂಚಿಕೊಂಡಿದ್ದು ಇದೀಗ ಧೋನಿ ಮತ್ತು ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳ ಕೋಪವನ್ನು ಕೆರಳಿಸಿದೆ.

ಬಾರ್ಮಿ ಆರ್ಮಿಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ ಅಭಿಮಾನಿಗಳು

ಬಾರ್ಮಿ ಆರ್ಮಿಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ ಅಭಿಮಾನಿಗಳು

ಕೆಟ್ಟ ಮನಸ್ಥಿತಿಯ ಬಾರ್ಮಿ ಆರ್ಮಿ ಎಂ ಎಸ್ ಧೋನಿ ಹುಟ್ಟುಹಬ್ಬದ ಅಂಗವಾಗಿ ಮಾಡಿರುವ ಟ್ವೀಟ್ ಕುರಿತು ಪ್ರತಿಕ್ರಿಯಿಸಿರುವ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಎಂಎಸ್ ಧೋನಿ ಇಂಗ್ಲೆಂಡ್ ತಂಡದ ಬೌಲರ್‌ಗಳಿಗೆ ಮನಸೋ ಇಚ್ಛೆ ಸಿಕ್ಸರ್ ಚಚ್ಚುತ್ತಿರುವ ಚಿತ್ರಗಳು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವುದರ ಮೂಲಕ ಪ್ರತ್ಯುತ್ತರವನ್ನು ನೀಡಿದ್ದಾರೆ. ಧೋನಿ ಅತ್ಯುತ್ತಮ ಇನ್ನಿಂಗ್ಸ್ ಬಾರಿಸಿದಾಗ ಇಂಗ್ಲೆಂಡ್ ಆಟಗಾರರು ಸಪ್ಪೆ ಮುಖ ಹಾಕಿಕೊಂಡು ಧೋನಿಯತ್ತ ನೋಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿರುವ ಕೆಲ ಆಟಗಾರರು ಬಾರ್ಮಿ ಆರ್ಮಿಗೆ ತಿರುಗೇಟು ಕೊಟ್ಟಿದ್ದಾರೆ. ಕಳೆದೆರಡು ವರ್ಷಗಳ ಹಿಂದೆ ವಿಶ್ವಕಪ್ ಟ್ರೋಫಿಯನ್ನು ಗೆಲ್ಲಲಾಗದೇ ವರ್ಷಾನುಗಟ್ಟಲೆ ಮುಖಭಂಗವನ್ನು ಅನುಭವಿಸಿದ್ದ ಇಂಗ್ಲೆಂಡ್ ತಂಡಕ್ಕೆ ಭಾರತ ಕ್ರಿಕೆಟ್ ತಂಡದ ಅಭಿಮಾನಿಯೋರ್ವ ಎಂಎಸ್ ಧೋನಿ 3 ಐಸಿಸಿ ಟ್ರೋಫಿಗಳನ್ನು ಗೆದ್ದಿದ್ದು, ಕ್ರಿಕೆಟ್ ಇತಿಹಾಸದಲ್ಲಿ ನೀವು ಗೆದ್ದಿರುವ ಒಟ್ಟಾರೆ ಐಸಿಸಿ ಟ್ರೋಫಿಗಳಿಗಿಂತ ಎಂಎಸ್ ಧೋನಿಯೇ ಹೆಚ್ಚು ಐಸಿಸಿ ಟ್ರೋಫಿಗಳನ್ನು ಹೊಂದಿದ್ದಾರೆ ಎಂದು ಟ್ವೀಟ್ ಮಾಡಿ ತಿರುಗೇಟು ಕೊಟ್ಟಿದ್ದಾರೆ.

Hardik Pandya ಪಂದ್ಯ ಮುಗಿದ ನಂತರ ಹೀಗೆ ಹೇಳಿದ್ದೇಕೆ | *Cricket | Onendia Kannada
ಕೊಹ್ಲಿಗೂ ಟ್ರೋಲ್ ಮಾಡಿದ್ದ ಬಾರ್ಮಿ ಆರ್ಮಿ

ಕೊಹ್ಲಿಗೂ ಟ್ರೋಲ್ ಮಾಡಿದ್ದ ಬಾರ್ಮಿ ಆರ್ಮಿ

ಇನ್ನು ಬಾರ್ಮಿ ಆರ್ಮಿಯ ಕುಚೇಷ್ಟೆ ವಿರಾಟ್ ಕೊಹ್ಲಿ ವಿರುದ್ಧವೂ ಕೂಡ ನಡೆದಿತ್ತು. ವಿರಾಟ್ ಕೊಹ್ಲಿ ಜಾನಿ ಬೈರ್ ಸ್ಟೋವ್ ಕುರಿತು ಸ್ಲೆಡ್ಜಿಂಗ್ ನಡೆಸಿದ್ದನ್ನು ಪಂದ್ಯ ಮುಗಿದ ನಂತರ ಟ್ರೋಲ್ ಮಾಡಿದ್ದ ಬಾರ್ಮಿ ಆರ್ಮಿ ವಿರಾಟ್ ಕೊಹ್ಲಿ ಸ್ಲೆಡ್ಜ್ ಮಾಡಿದ್ದ ಚಿತ್ರ ಹಾಗೂ ಪಂದ್ಯ ಮುಗಿದ ನಂತರ ಜಾನಿ ಬೈರ್ ಸ್ಟೋ ಬೆನ್ನುತಟ್ಟುತ್ತಿದ್ದ ಚಿತ್ರವನ್ನು ಹಂಚಿಕೊಳ್ಳುವುದರ ಮೂಲಕ ಕೊಹ್ಲಿಯನ್ನು ಟ್ರೋಲ್ ಮಾಡಿತ್ತು. ಆಗಲೂ ಸಹ ಬಾರ್ಮಿ ಆರ್ಮಿಗೆ ಸಿಕ್ಕಿದ್ದು ಇಂಗ್ಲೆಂಡ್ ತಂಡದ ಎಲ್ಲಾ 11 ಆಟಗಾರರ ಶತಕಗಳಿಗಿಂತ ವಿರಾಟ್ ಕೊಹ್ಲಿ ಶತಕಗಳ ಸಂಖ್ಯೆ ಹೆಚ್ಚಿದೆ ಎಂಬ ಕಪಾಳಮೋಕ್ಷದಂತಹ ಉತ್ತರವೇ.

Story first published: Thursday, July 7, 2022, 17:42 [IST]
Other articles published on Jul 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X