ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ, ದ.ಆಫ್ರಿಕಾ ವಿರುದ್ಧ ಪಂದ್ಯ: ಮೈದಾನಕ್ಕಿಳಿಯಲಿದೆ ಆಂಗ್ಲ ಮಹಿಳಾ ತಂಡ

Englands women cricketers to return to training on june 22

ಲಂಡನ್, ಜೂನ್ 19: ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ತ್ರಿಕೋನ ಸರಣಿಯತ್ತ ಕಣ್ಣಿಟ್ಟಿರುವ ಇಂಗ್ಲೆಂಡ್ ಮಹಿಳಾ ಕ್ರಿಕೆಟ್‌ ತಂಡ ಸೋಮವಾರದಿಂದ (ಜೂನ್ 22) ಅಭ್ಯಾಸ ಪುನರಾರಂಭಿಸಲಿದೆ. ಒಟ್ಟು 24 ಆಟಗಾರ್ತಿಯರು ವೈಯಕ್ತಿಕ ಅಭ್ಯಾಸ ಆರಂಭಿಸಲಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಘೋಷಿಸಿದೆ.

ಚೈನೀಸ್ ಪ್ರಾಯೋಜಕತ್ವ ಕೊನೆಗೊಳಿಸುತ್ತಿಲ್ಲ: ಬಿಸಿಸಿಐ ಖಜಾಂಚಿ ಅರುಣ್ಚೈನೀಸ್ ಪ್ರಾಯೋಜಕತ್ವ ಕೊನೆಗೊಳಿಸುತ್ತಿಲ್ಲ: ಬಿಸಿಸಿಐ ಖಜಾಂಚಿ ಅರುಣ್

ಭಾರತದ ಮಹಿಳಾ ತಂಡ ದ್ವಿಪಕ್ಷೀಯ ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರವಾಸ ಹೋಗಬೇಕಿತ್ತು. ಅಲ್ಲಿ 3 ಏಕದಿನ ಪಂದ್ಯ ಮತ್ತು 3 ಟಿ20ಐ ಪಂದ್ಯಗಳನ್ನು ಆಡಬೇಕಿತ್ತು. ಆದರೆ ಕೊರೊನಾ ವೈರಸ್ ಕಾರಣದಿಂದಾಗಿ ಈ ಪ್ರವಾಸ ಸರಣಿ ಸದ್ಯಕ್ಕೆ ರದ್ದಾಗಿದೆ.

1 ಪಂದ್ಯ, 3 ತಂಡ ಮತ್ತು 36 ಓವರ್: ಕ್ರಿಕೆಟ್‌ ಲೋಕಕ್ಕೆ ಹೊಸ ಮಾದರಿ ಪರಿಚಯಿಸುತ್ತಿದೆ ದ.ಆಫ್ರಿಕಾ1 ಪಂದ್ಯ, 3 ತಂಡ ಮತ್ತು 36 ಓವರ್: ಕ್ರಿಕೆಟ್‌ ಲೋಕಕ್ಕೆ ಹೊಸ ಮಾದರಿ ಪರಿಚಯಿಸುತ್ತಿದೆ ದ.ಆಫ್ರಿಕಾ

ಈ ವರ್ಷದ ಕೊನೆಯಲ್ಲಿ ನಡೆಸಲು ಉದ್ದೇಶಿಸಲಾಗಿರುವ ತ್ರಿಕೋನ ಸರಣಿಗಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮತ್ತು ಕ್ರಿಕೆಟ್ ಸೌತ್ ಆಫ್ರಿಕಾವನ್ನು ಇಸಿಬಿ ಮನವೊಲಿಸಲು ಯತ್ನಿಸುತ್ತಿದೆ. ಆದರೆ ಈವರೆಗೂ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟಗೊಂಡಿಲ್ಲ.

'ನನಗೆ ರೋಹಿತ್ ಆದರ್ಶ, ಆತ ಮ್ಯಾಚ್ ವಿನ್ನರ್' ಎಂದ ಪಾಕ್ ಕ್ರಿಕೆಟಿಗ!'ನನಗೆ ರೋಹಿತ್ ಆದರ್ಶ, ಆತ ಮ್ಯಾಚ್ ವಿನ್ನರ್' ಎಂದ ಪಾಕ್ ಕ್ರಿಕೆಟಿಗ!

'ಆಟಗಾರ್ತಿಯರು ಆರು ವಿವಿಧ ತಾಣಗಳಲ್ಲಿ ಅಭ್ಯಾಸಕ್ಕಾಗಿ ಮರಳಲಿದ್ದಾರೆ. ಸಣ್ಣ ಗುಂಪಾಗಿ ಅಭ್ಯಾಸ ಆರಂಭಿಸುವ ಮುನ್ನ ಅವರು ಆರಂಭಿಕವಾಗಿ ಸ್ವಂತ ಅಭ್ಯಾಸ ನಡೆಸಲಿದ್ದಾರೆ. ನಿರ್ದಿಷ್ಟ ಮಾದರಿಗಳಿಗೆ ತಕ್ಕ ತಂಡಗಳನ್ನು ಸರಣಿಯ ಪ್ರಸ್ತಾಪ ಖಾತರಿಗೊಂಡ ಬಳಿಕ ಸರಿಯಾದ ಸಮಯದಲ್ಲಿ ಪ್ರಕಟಿಸಲಾಗಿವುದು,' ಎಂದು ಇಸಿಬಿ ತನ್ನ ಹೇಳಿಕೆಯ ಮೂಲಕ ತಿಳಿಸಿದೆ.

Story first published: Friday, June 19, 2020, 14:23 [IST]
Other articles published on Jun 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X