ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ನಾಯಕ ಜೋ ರೂಟ್ ತಂತ್ರವನ್ನು ಟೀಕಿಸಿದ ಆಸಿಸ್ ದಿಗ್ಗಜ ಶೇನ್ ವಾರ್ನ್

England showing no urgency at all: Shane Warne questions Joe Roots tactics in Chennai Test

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಕದನ ರೋಚಕ ಹಂತವನ್ನು ತಲುಪಿದೆ. ನಾಲ್ಕನೇ ದಿನದಾಟದಲ್ಲಿ ಭಾರತವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 337 ರನ್‌ಗಳಿಗೆ ಆಲೌಟ್ ಮಾಡಿದ ಇಂಗ್ಲೆಂಡ್ ಬಳಿಕ ಬ್ಯಾಟಿಂಗ್ ನಡೆಸಿ 178 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ 420 ರನ್‌ಗಳ ಗುರಿಯನ್ನು ನೀಡಿದೆ. ಇದನ್ನು ಬೆನ್ನಟ್ಟಿರುವ ಟೀಮ್ ಇಂಡಿಯಾ 39 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡು ಅಂತಿಮ ದಿನಕ್ಕೆ ಆಟವನ್ನು ಕಾಯ್ದಿರಿಸಿದೆ.

ಆದರೆ ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡ ನಿಧಾನಕ್ಕೆ ಆಡಿದ ಕಾರಣಕ್ಕೆ ಶೇನ್ ವಾರ್ನ್ ಇಂಗ್ಲೆಂಡ್ ನಾಯಕನ ತಂತ್ರದ ಬಗ್ಗೆ ಟೀಕಿಸಿದ್ದಾರೆ ಇಂಗ್ಲೆಂಡ್ ತಂಡ ವೇಗವಾಗಿ ರನ್ ಗುರಿಯನ್ನು ನಿಗದಿಪಡಿಸುವ ಯಾವ ಪ್ರಯತ್ನವನ್ನೂ ನಡೆಸಲಿಲ್ಲ ಎಂದು ಶೇನ್ ವಾರ್ನ್ ಹೇಳಿದ್ದಾರೆ.

ಡೊಮಿನಿಕ್ ಬೆಸ್ ಮೇಲೆರಗಿದ ಜಾಹೀರಾತು ಬೋರ್ಡ್: ವಿಡಿಯೋಡೊಮಿನಿಕ್ ಬೆಸ್ ಮೇಲೆರಗಿದ ಜಾಹೀರಾತು ಬೋರ್ಡ್: ವಿಡಿಯೋ

"ಇಂಗ್ಲೆಂಡ್ ತಂಡ 400 ರನ್‌ಗಳ ಬೇಗನೆ ನೀಡಲು ಯಾಕೆ ಪ್ರಯತ್ನಿಸಲಿಲ್ಲ? ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿಯೂ ಬಹಳ ದೀರ್ಘ ಕಾಲ ಬ್ಯಾಟಿಂಗ್ ಮಾಡಿತು. ಈಗ ಎರಡನೇ ಇನ್ನಿಂಗ್ಸ್‌ನಲ್ಲಿಯೂ ರನ್ ಗಳಿಸುವ ಆತುರವನ್ನು ಹೊಂದಿಲ್ಲ. ರನ್‌ಗಳಿಸದೆ ಓವರ್‌ಗಳನ್ನು ವ್ಯರ್ಥ ಮಾಡುವುದಕ್ಕಿಂತ ಇಂಗ್ಲೆಂಡ್ ಬೌಲಿಂಗ್ ಮಾಡಲು ಆರಂಭಿಸುವುದು ಸೂಕ್ತ" ಎಂದು ಶೇನ್ ವಾರ್ನ್ ಪ್ರತಿಕ್ರಿಯಿಸಿದರು.

"ಟೆಸ್ಟ್ ಪಂದ್ಯವನ್ನು ಗೆಲ್ಲಲು ಇರುವ ಉತ್ತಮ ದಾರಿ ಯಾವುದು ಹಾಗೂ ಎಷ್ಟು ಓವರ್‌ಗಳ ಆಟವನ್ನು ಆಡಬೇಕು ಎಂಬುದಕ್ಕಿಂತ ಈ ಪಂದ್ಯವನ್ನು ಸೋಲಬಾರದು ಎಂಬ ಮನಸ್ಥಿತಿಯಲ್ಲಿ ಆಡುತ್ತಿದೆ. ಈ ಬ್ಯಾಟಿಂಗ್‌ನ ನಿರ್ಧಾರ ಇಂಗ್ಲೆಂಡ್ ಬೌಲರ್‌ಗಳ ಮೇಲೆ ವಿಶೇಷವಾಗಿ ಸ್ಪಿನ್ನರ್‌ಗಳ ಮೇಲೆ ಸಾಕಷ್ಟು ಒತ್ತಡವನ್ನು ಹೇರುತ್ತದೆ" ಎಂದು ವಾರ್ನ್ ಹೇಳಿದ್ದಾರೆ.

ಮೊಹಮ್ಮದ್ ಸಿರಾಜ್ ಕುಲದೀಪ್ ಯಾದವ್ ಕುತ್ತಿಗೆ ಹಿಡಿದಿದ್ದೇಕೆ?: ವಿಡಿಯೋಮೊಹಮ್ಮದ್ ಸಿರಾಜ್ ಕುಲದೀಪ್ ಯಾದವ್ ಕುತ್ತಿಗೆ ಹಿಡಿದಿದ್ದೇಕೆ?: ವಿಡಿಯೋ

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 190.1 ಓವರ್‌ಗಳ ಕಾಲ ಬ್ಯಾಟಿಂಗ್ ನಡೆಸಿತು. 2004ರ ಬಳಿಕ ಇದೇ ಮೊದಲ ಬಾರಿಗೆ ಬಾರತದ ವಿರುದ್ಧ ತಂಡವೊಂದು ಇಷ್ಟು ಸುದೀರ್ಘ ಕಾಲ ಬ್ಯಾಟಿಂಗ್ ನಡೆಸಿ 578 ರನ್ ಗಳಸಿತು. ಇದಕ್ಕಾಗಿ ಇಂಗ್ಲೆಂಡ್ 7 ಸೆಶನ್‌ಗಳನ್ನು ಬಳಸಿತ್ತು. ಅದಾದ ಬಳಿಕ ಬೌಲಿಂಗ್‌ನಲ್ಲಿ 337 ರನ್‌ಗಳಿಗೆ ಭಾರತವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಆದರೆ ಫಾಲೋವಾನ್ ಹೇರದೆ 420 ರನ್‌ಗಳ ಬೃಹತ್ ಗುರಿಯನ್ನು ಭಾರತಕ್ಕೆ ನೀಡಿದೆ.

Story first published: Monday, February 8, 2021, 18:08 [IST]
Other articles published on Feb 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X