ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಆಡುವುದು ಅದ್ಭುತ ಅನುಭವ, ಆದರೆ..: ಮೊದಲ ಆದ್ಯತೆ ವಿವರಿಸಿದ ಬೆನ್ ಸ್ಟೋಕ್ಸ್

England skipper Ben Stokes said my top priority is International cricket

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ತನ್ನ ಸಂಪೂರ್ಣ ಕೊಡುಗೆಯನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣವನ್ನು ನೀಡಿ ಏಕದಿನ ಕ್ರಿಕೆಟ್ ಮಾದರಿಗೆ ಇತ್ತೀಚೆಗಷ್ಟೇ ನಿವೃತ್ತಿ ಘೋಷಣೆ ಮಾಡಿರುವ ಬೆನ್ ಸ್ಟೋಕ್ಸ್ ಟಿ20 ಮಾದರಿಯಲ್ಲಿ ಸಕ್ರಿಯವಾಗಿದ್ದಾರೆ.

ಈ ಸಂದರ್ಭದಲ್ಲಿ ಬೆನ್ ಸ್ಟೋಕ್ಸ್ ಐಪಿಎಲ್ ಸೇರಿದಂತೆ ಇತರ ಲೀಗ್‌ ಕ್ರಿಕೆಟ್‌ಗಳ ಮೇಲೆ ತಮ್ಮ ಆದ್ಯತೆಯ ಬಗ್ಗೆ ಮಾತನಾಡಿದ್ದಾರೆ. ರಾಷ್ಟ್ರೀಯ ತಂಡದ ವೇಳಾಪಟ್ಟಿಯನ್ನು ನೋಡಿಕೊಂಡು ಅದಾದ ನಂತರವೇ ತಾನು ಐಪಿಎಲ್‌ನಂತಾ ಲೀಗ್ ಕ್ರಿಕೆಟ್‌ನಲ್ಲಿ ಭಾಗಿಯಾಗುವುದಾಗಿ ಸ್ಪಷ್ಟಪಡಿಸಿದ್ದಾರೆ ಬೆನ್ ಸ್ಟೋಕ್ಸ್.

ಏಷ್ಯಾಕಪ್ 2022: ಕೊಹ್ಲಿ, ಅನುಷ್ಕಾ ಜತೆ ದುಬೈಗೆ ಹಾರಿದ ರೋಹಿತ್ ಶರ್ಮಾ; ಇಲ್ಲ ದ್ರಾವಿಡ್!ಏಷ್ಯಾಕಪ್ 2022: ಕೊಹ್ಲಿ, ಅನುಷ್ಕಾ ಜತೆ ದುಬೈಗೆ ಹಾರಿದ ರೋಹಿತ್ ಶರ್ಮಾ; ಇಲ್ಲ ದ್ರಾವಿಡ್!

ಇಂಗ್ಲೆಂಡ್ ಕ್ರಿಕೆಟಿಗನಾಗಿ ಸಾಕಷ್ಟು ಒತ್ತಡವಿದೆ

ಇಂಗ್ಲೆಂಡ್ ಕ್ರಿಕೆಟಿಗನಾಗಿ ಸಾಕಷ್ಟು ಒತ್ತಡವಿದೆ

"ಇಂಗ್ಲೆಂಡ್ ಕ್ರಿಕೆಟಿಗರಾಗಿ ನಮ್ಮ ವೇಳಾಪಟ್ಟಿ ತುಂಬಿರುತ್ತದೆ. ವರ್ಷದ ಎಲ್ಲಾ ಸಮಯದಲ್ಲಿಯೂ ನಾವು ಕ್ರಿಕೆಟ್ ಆಡುತ್ತಿರುತ್ತೇವೆ. ನಮ್ಮ ಬೇಸಿಗೆ ಉಳಿದವರಿಗೆ ಚಳಿಗಾಲ ಎನಿಸುತ್ತದೆ. ಉಳಿದವರಿಗೆ ಬೇಸಿಗೆ ಆರಂಭವಾದಾಗ ನಮಗೆ ಚಳಿಗಾಲವಾಗಿರುತ್ತದೆ. ಹಾಗಾಗಿ ಒಂದೇ ನಮ್ಮಲ್ಲಿಗೆ ಇತರರು ಆಡಲು ಬಂದಿರುತ್ತಾರೆ, ಇಲ್ಲವೇ ಬೇರೆ ದೇಶಗಳಿಗೆ ನಾವು ಆಡಲು ತೆರಳಿರುತ್ತೇವೆ"

ಅಂತಾರಾಷ್ಟ್ರೀಯ ವೇಳಾಪಟ್ಟಿಯನ್ನು ಅವಲಂಭಿಸಿ ನಿರ್ಧಾರ

ಅಂತಾರಾಷ್ಟ್ರೀಯ ವೇಳಾಪಟ್ಟಿಯನ್ನು ಅವಲಂಭಿಸಿ ನಿರ್ಧಾರ

ನಾವು ವೇಳಾಪಟ್ಟಿಯನ್ನು ನೋಡುತ್ತಿದ್ದೇವೆ ಎಂದಾದರೆ ಮುಂದೆ ಯಾವ ಸರಣಿ ಬರಲದೆ ಎಂಬುದನ್ನು ನೋಡುತ್ತಿದ್ದೇವೆ ಎಂದರ್ಥ. ಆದರೆ ಒಂದನ್ನು ನಾನು ಸ್ಪಷ್ಟಪಡಿಸುತ್ತಿದ್ದೇನೆ. ಟೆಸ್ಟ್ ಕ್ರಿಕೆಟ್ ನನ್ನ ಪ್ರಥಮ ಆದ್ಯತೆ. ನನ್ನ ಎಲ್ಲಾ ನಿರ್ಧಾರಗಳು ಕೂಡ ಟೆಸ್ಟ್ ಪಂದ್ಯಗಳನ್ನು ಅವಲಂಬಿಸಿರುತ್ತದೆ ಈಗ ನಾಯಕನಾಗಿ ಅದು ನನ್ನ ಜವಾಬ್ಧಾರಿ " ಎಂದಿದ್ದಾರೆ ಬೆನ್ ಸ್ಟೋಕ್ಸ್.

ಐಪಿಎಲ್‌ನಲ್ಲಿ ಭಾಗಿಯಾಗುವುದು ಅದ್ಭುತ ಅನುಭವ, ಆದರೆ..

ಐಪಿಎಲ್‌ನಲ್ಲಿ ಭಾಗಿಯಾಗುವುದು ಅದ್ಭುತ ಅನುಭವ, ಆದರೆ..

ಪ್ರೈಮ್ ವಿಡಿಯೋ ಆಯೋಜನೆ ಮಾಡಿದ್ದ ಆಯ್ದ ಮಾಧ್ಯಮ ಪ್ರತಿನಿಧಿಗಳೊಂದಿಗಿನ ಸಂವಾದದಲ್ಲಿ ಬೆನ್ ಸ್ಟೋಕ್ಸ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್‌ನ ವೇಳಾಪಟ್ಟಿಯನ್ನು ನೋಡಿಕೊಂಡು ಇತರ ಟೂರ್ನಿಗಳ ಬಗ್ಗೆ ನಿರ್ಧಾರವನ್ನು ಮಾಡಿತ್ತೇನೆ. ಕಳೆದ ನಾಲ್ಕು ವರ್ಷಗಳಿಂದ ನಾನು ಐಪಿಎಲ್‌ನಲ್ಲಿ ಭಾಗವಹಿಸುತ್ತಿದ್ದು ಅಲ್ಲಿ ನಾನು ಸಾಕಷ್ಟು ಆನಂದಿಸಿದ್ದೇನೆ. ಅಲ್ಲಿನ ಪ್ರತಿ ಕ್ಷಣವನ್ನು ಕುಡ ಅನುಭವಿಸಿದ್ದೇನೆ. ವಿಶ್ವದ ಅತ್ಯುತ್ತಮ ಆಟಗಾರರ ಜೊತೆಗೆ ಆಡುವ ಅವಕಾಶ ಇದರಿಂದ ದೊರೆಯುತ್ತದೆ. ಕೆಲ ಅತ್ಯುತ್ತಮ ಕೋಚ್‌ಗಳು ಕೂಡ ನಮಗೆ ದೊರೆಯುತ್ತಾರೆ. ಅಂಥಾ ಟೂರ್ನಿಯಲ್ಲಿ ಭಾಗಿಯಾಗುವುದು ಅದ್ಭುತ ಅನುಭವ. ಆದರೆ ಐಪಿಎಲ್‌ನ ಸುತ್ತಲಿನ ವೇಳಾಪಟ್ಟಿಯನ್ನು ಗಮನಿಸಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕು" ಎಂದಿದ್ದಾರೆ.

ದಿ ಹಂಡ್ರೆಡ್‌ನಿಂದಲೂ ಹಿಂದೆ ಸರಿದಿದ್ದ ಬೆನ್ ಸ್ಟೋಕ್ಸ್

ದಿ ಹಂಡ್ರೆಡ್‌ನಿಂದಲೂ ಹಿಂದೆ ಸರಿದಿದ್ದ ಬೆನ್ ಸ್ಟೋಕ್ಸ್

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿರುವ ಕಾರಣದಿಂದಾಗಿ ಇಂಗ್ಲೆಂಡ್‌ನ ಲೀಗ್ ಕ್ರಿಕೆಟ್ ದಿ ಹಂಡ್ರೆಡ್‌ನಿಂದಲೂ ಹೊರಗುಳಿದ್ದರು ಬೆನ್ ಸ್ಟೋಕ್ಸ್. ಇನ್ನು ಐಪಿಎಲ್‌ನಲ್ಲಿಯೂ ಸ್ಟಾರ್ ಆಟಗಾರ ಎನಿಸಿಕೊಂಡಿರುವ ಸ್ಟೋಕ್ಸ್ 2021ರ ಟೂರ್ನಿಯ ಬಳಿಕ ಕಾಣಿಸಿಕೊಂಡಿಲ್ಲ. 2022ರ ಆವೃತ್ತಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೇಲೆ ಗಮನಹರಿಸುವ ದೃಷ್ಟಿಯಿಂದ ಟೂರ್ನಿಯಿಂದ ಹಿಂದಕ್ಕೆ ಸರಿದಿದ್ದರು ಬೆನ್ ಸ್ಟೋಕ್ಸ್.

Story first published: Tuesday, August 23, 2022, 16:11 [IST]
Other articles published on Aug 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X