ನಿವೃತ್ತಿಯ ಚಿಂತನೆಯಲ್ಲಿ ಇಂಗ್ಲೆಂಡ್‌ ಕಂಡ ಶ್ರೇಷ್ಠ ನಾಯಕ!: ವಾರದೊಳಗೆ ನಿವೃತ್ತಿ ಘೋಷಿಸಲಿರುವ ಕ್ರಿಕೆಟಿಗ ಯಾರು?

ಕ್ರಿಕೆಟ್ ಜನಕ ಎನಿಸಿಕೊಂಡರೂ ಇಂಗ್ಲೆಂಡ್ ಕ್ರಿಕೆಟ್ ತಂಡ ಸುದೀರ್ಘ ಕಾಲದ ವರೆಗೆ ಏಕದಿನ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. 2019ರ ಏಕದಿನ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ಈ ಸಾಧನೆ ಮಾಡಿ ಬೀಗಿತ್ತು. ಇಂಗ್ಲೆಂಡ್ ಕ್ರಿಕೆಟ್ ತಂಡ ಈ ಸಾಧನೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದು ನಾಯಕ ಇಯಾನ್ ಮಾರ್ಗನ್. ತಾನೊರ್ವ ಅದ್ಭುತ ನಾಯಕ ಎಂದು ಅದಾಗಲೇ ಸಾಬೀತು ಮಾಡಿದ್ದ ಮಾರ್ಗನ್ ಈ ವಿಶ್ವಕಪ್ ಟ್ರೋಫಿ ಗೆಲ್ಲುವ ಮೂಲಕ ತನ್ನ ಸಾಧನೆಯ ಕಿರೀಟಕ್ಕೆ ಚಿನ್ನದ ಗರಿ ತೊಡಿಸಿದರು.

ಆದರೆ ಅದಾದ ಬಳಿಕ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ವೈಯಕ್ತಿಕ ಫಾರ್ಮ್ ಕಳಪೆಯಾಗುತ್ತಲೇ ಸಾಗಿದೆ. ಅದರಲ್ಲೂ ಇತ್ತೀಚೆಗೆ ಇಯಾನ್ ಮಾರ್ಗನ್ ರನ್ ಗಳಿಸಲು ಅಕ್ಷರಶಃ ಪರದಾಡುತ್ತಿರುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತಿದೆ. ಇದೀಗ ತನ್ನ ಫಾರ್ಮ್‌ನ ಸಮಸ್ಯೆಗೆ ಸ್ವತಃ ಇಯಾನ್ ಮಾರ್ಗನ್ ಬೇಸತ್ತಿದ್ದು ನಿವೃತ್ತಿಯ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಅದರಲ್ಲೂ ಈ ವಾರದಲ್ಲಿ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ನಿವೃತ್ತಿ ಘೋಷಿಸಲಿದ್ದಾರೆ ಎಂದು 'ದಿ ಗಾರ್ಡಿಯನ್' ವರದಿ ಮಾಡಿದೆ.

ಐರ್ಲೆಂಡ್ vs ಭಾರತ: ನಾಯಕತ್ವದ ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಹಾರ್ದಿಕ್ ಪಾಂಡ್ಯಐರ್ಲೆಂಡ್ vs ಭಾರತ: ನಾಯಕತ್ವದ ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ

ವೈಟ್‌ಬಾಲ್ ಸ್ಪೆಶಲಿಸ್ಟ್ ಇಯಾನ್ ಮಾರ್ಗನ್

ವೈಟ್‌ಬಾಲ್ ಸ್ಪೆಶಲಿಸ್ಟ್ ಇಯಾನ್ ಮಾರ್ಗನ್

ಇಯಾನ್ ಮಾರ್ಗನ್ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಆಟಗಾರ. 248 ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಆಡಿರುವ ಇಯಾನ್ ಮಾರ್ಗನ್ 7701 ರನ್‌ಗಳಿಸಿದ್ದಾರೆ. 39.3ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ಮಾರ್ಗನ್ 91.2 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಇನ್ನು 115 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ಇಯಾನ್ ಮಾರ್ಗನ್ 2458 ರನ್‌ಗಳಿಸಿದ್ದಾರೆ. ಚುಟುಕು ಮಾದರಿಯಲ್ಲಿ 28.6ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದು 136.2 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೇವಲ 16 ಟೆಸ್ಟ್‌ಗಳನ್ನು ಮಾತ್ರವೇ ಇಯಾನ್ ಮಾರ್ಗನ್ ಆಡಿದ್ದು 30ರ ಸರಾಸರಿಯಲ್ಲಿ 700 ರನ್‌ಗಳಿಸಿದ್ದಾರೆ.

ಫಾರ್ಮ್ ಹಾಗೂ ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಮಾರ್ಗನ್

ಫಾರ್ಮ್ ಹಾಗೂ ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಮಾರ್ಗನ್

ಇತ್ತೀಚಿನ ದಿನಗಳಲ್ಲಿ ಇಯಾನ್ ಮಾರ್ಗನ್ ಫಾರ್ಮ್ ಜೊತೆಗೆ ಫಿಟ್‌ನೆಸ್ ಸಮಸ್ಯೆಯಿಂದಲೂ ಬಳಲುತ್ತಿದ್ದಾರೆ. ಅದರಲ್ಲೂ ಕಳೆದ 28 ಸೀಮಿತ ಓವರ್‌ಗಳ ಇನ್ನಿಂಗ್ಸ್‌ನಲ್ಲಿ ಇಯಾನ್ ಮಾರ್ಗನ್ ಕೇವಲ 2 ಅರ್ಧ ಶತಕವನ್ನು ಗಳಿಸಲು ಮಾತ್ರವೇ ಯಶಸ್ವಿಯಾಗಿದ್ದಾರೆ. ಇತ್ತೀಚೆಗಷ್ಟೇ ಅಂತ್ಯವಾಗಿರುವ ಐರ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಮಾರ್ಗನ್ ಎರಡು ಪಂದ್ಯಗಳಲ್ಲಿ ಶೂನ್ಯ ಸುತ್ತಿದ್ದರು. ಅಂತಿಮ ಪಂದ್ಯಕ್ಕೆ ಮುನ್ನ ಗಾಯಕ್ಕೆ ತುತ್ತಾಗಿ ಆಡಲು ಅಸಮರ್ಥರಾಗಿದ್ದರು.

ಐರ್ಲೆಂಡ್ ಪರ ಆಡಿದ್ದ ಮಾರ್ಗನ್

ಐರ್ಲೆಂಡ್ ಪರ ಆಡಿದ್ದ ಮಾರ್ಗನ್

ಇಯಾನ್ ಮಾರ್ಗನ್ ಅವರ ಮೂಲಕ ಐರ್ಲೆಂಡ್‌ನ ಡಬ್ಲಿನ್. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲಿಗೆ ಮಾರ್ಗನ್ ಆಡಿದ್ದು ಐರ್ಲೆಂಡ್ ಪರವಾಗಿಯೇ. 2006ರಲ್ಲಿ ಐರ್ಲೆಂಡ್ ಪರವಾಗಿ ಏಕದಿನ ಮಾದರಿಗೆ ಪದಾರ್ಪಣೆ ಮಾಡಿದ ಮಾರ್ಗನ್ 2009ರಲ್ಲಿ ಇಂಗ್ಲೆಂಡ್ ತಂಡವನ್ನು ಸೇರಿಕೊಂಡರು. ತಂಡದಲ್ಲಿ ಸುದೀರ್ಘ ಕಾಲ ಆಟಗಾರನಾಗಿ ಕಳೆದ ಬಳಿಕ 2015ರಲ್ಲಿ ಇಯಾನ್ ಮಾರ್ಗನ್ ನಾಯಕನಾಗಿ ತಂಡವನ್ನು ಮುನ್ನಡೆಸಿದರು. 2019ರಲ್ಲಿ ನಾಯಕನಾಗಿ ಇಂಗ್ಲೆಂಡ್ ತಂಡವನ್ನು ವಿಶ್ವ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾದರು.

Umran Malik ಮೊದಲನೇ ಪಂದ್ಯದಲ್ಲಿ ಹೀಗಾ ಆಡೋದು | *Cricket | OneIndia Kannada
ಇಂಗ್ಲೆಂಡ ತಂಡವನ್ನು ಮುನ್ನಡೆಸುವವರು ಯಾರು?

ಇಂಗ್ಲೆಂಡ ತಂಡವನ್ನು ಮುನ್ನಡೆಸುವವರು ಯಾರು?

ಇಯಾನ್ ಮಾರ್ಗನ್ ನಾಯಕತ್ವ ತೊರೆಯುವ ಸುದ್ದಿ ನಿಜವಾದಲ್ಲಿ ಸೀಮಿತ ಓವರ್‌ಗಳಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವ ಯಾರಿಗೆ ದೊರೆಯಲಿದೆ ಎಂಬುದು ಕುತೂಹಲಕಾರಿ ಸಂಗತಿ. ಸದ್ಯಕ್ಕೆ ಈ ಸ್ಥಾನಕ್ಕೆ ಜಫಸ್ ಬಟ್ಲರ್ ಹೆಸರು ಕೇಳಿಬರುತ್ತಿದೆ. ಅದ್ಭುತ ಫಾರ್ಮ್‌ನಲ್ಲಿರುವ ಬಟ್ಲರ್ ನಾಯಕನಾಗಿ ತಂಡವನ್ನು ಮುನ್ನಡೆಸಲು ಸಮರ್ಥ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ. 2015ರಿಂದ ಇಂಗ್ಲೆಂಡ್ ತಂಡದ ಉಪನಾಯಕನಾಗಿ ಬಟ್ಲರ್ ಜವಾಬ್ಧಾರಿ ವಹಿಸುತ್ತಿರುವುದರಿಂದ ನಾಯಕತ್ವಕ್ಕೆ ಬಟ್ಲರ್ ಸಹಜ ಆಯ್ಕೆಯಾಗಿದ್ದಾರೆ. ಇನ್ನು ಮೊಯೀನ್ ಅಲಿ ಹೆಸರು ಕೂಡ ನಾಯಕತ್ವಕ್ಕೆ ಕೇಳಿಬರತೊಡಗಿದೆ.

For Quick Alerts
ALLOW NOTIFICATIONS
For Daily Alerts
Story first published: Monday, June 27, 2022, 13:46 [IST]
Other articles published on Jun 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X