ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ವಾಪಸ್ಸಾತಿಗೆ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಸಿದ್ಧತೆ

England speedster Jofra Archer set to return to competitive cricket

ಲಂಡನ್: ಸ್ಪರ್ಧಾತ್ಮಕ ಕ್ರಿಕೆಟ್‌ ಪಂದ್ಯಗಳಿಗೆ ಮರಳಲು ಇಂಗ್ಲೆಂಡ್ ವೇಗಿ ಜೋಫ್ರಾ ಅರ್ಚರ್ ಸಿದ್ಧರಾಗಿದ್ದಾರೆ. ಗುರುವಾರ (ಮೇ 13) ಕೌಂಟಿ ಚಾಂಪಿಯನ್‌ಶಿಪ್‌ಗಾಗಿ ಸಸೆಕ್ಸ್ ಪ್ರಕಟಿಸಿದ 13 ಜನರ ತಂಡದಲ್ಲಿ ಆರ್ಚರ್ ಕೂಡ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಆರ್ಚರ್ ಶೀಘ್ರ ಮೈದಾನಕ್ಕಿಳಿಯಲಿದ್ದಾರೆ.

ನಂಬರ್ 1 ಟೆಸ್ಟ್ ತಂಡವಾಗಿ ಮುಂದುವರಿದ ಭಾರತ: ಮೂರನೇ ಸ್ಥಾನಕ್ಕೇರಿದ ಇಂಗ್ಲೆಂಡ್ನಂಬರ್ 1 ಟೆಸ್ಟ್ ತಂಡವಾಗಿ ಮುಂದುವರಿದ ಭಾರತ: ಮೂರನೇ ಸ್ಥಾನಕ್ಕೇರಿದ ಇಂಗ್ಲೆಂಡ್

ಗಾಯಕ್ಕೀಡಾಗಿದ್ದ ಜೋಫ್ರಾ ಆರ್ಚರ್ ಸುಮಾರು ಒಂದೂವರೆ ತಿಂಗಳ ಕಾಲ ಮೈದಾನದಿಂದ ಹೊರಗಿದ್ದರು. ಭಾರತ-ಇಂಗ್ಲೆಂಡ್‌ ನಡುವಿನ ಐದನೇ ಟಿ20ಐ ಪಂದ್ಯದಲ್ಲಿ ಆರ್ಚರ್ ಕಡೇಯ ಸಾರಿ ಸ್ಪರ್ಧಾತ್ಮಕ ಪಂದ್ಯದಲ್ಲಿ ಆಡಿದ್ದರು. ಕಳೆದ ಜನವರಿಯಲ್ಲಿ ಆರ್ಚರ್‌ ಕೈಗೆ ಗಾಯವಾಗಿತ್ತು.

ತನ್ನ ಮನೆಯಲ್ಲಿ ಫಿಶ್ ಟ್ಯಾಂಕ್ ಸ್ವಚ್ಛ ಮಾಡುವಾಗ ಆರ್ಚರ್ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಅವರ ಬಲಗೈಯೊಳಗೆ ಗ್ಲಾಸಿನ ತುಣುಕು ನುಗ್ಗಿದ್ದು ಸ್ಕ್ಯಾನ್ ವೇಳೆ ಕಂಡು ಬಂದಿತ್ತು ಹೀಗಾಗಿ ಆರ್ಚರ್ ಶಸ್ತ್ರ ಚಿಕಿತ್ಸೆಗಾಗಿ ತೆರಳಿದ್ದರು.

ಕೊರೊನಾ ಪರಿಹಾರಕ್ಕೆ 11 ಕೋ.ರೂ. ಸಂಗ್ರಹಿಸಿದ ಅನುಷ್ಕಾ-ವಿರಾಟ್ಕೊರೊನಾ ಪರಿಹಾರಕ್ಕೆ 11 ಕೋ.ರೂ. ಸಂಗ್ರಹಿಸಿದ ಅನುಷ್ಕಾ-ವಿರಾಟ್

ಗಾಯಕ್ಕೀಡಾಗಿದ್ದರಿಂದ ಈ ಬಾರಿ ಐಪಿಎಲ್‌ನಲ್ಲಿ ಆರ್ಚರ್ ರಾಜಸ್ಥಾನ್ ರಾಯಲ್ಸ್ ಪರ ಆಡಿರಲಿಲ್ಲ. ಆ ಬಳಿಕ ಐಪಿಎಲ್ ಕೋವಿಡ್-19 ಕಾರಣ ಮುಂದೂಡಲ್ಪಟ್ಟಿತು. 'ವಿಶ್ವದಲ್ಲಿರುವ ಯಾವುದೇ ತಂಡಕ್ಕೆ ಆರ್ಚರ್ ಅವರಂತ ಆಟಗಾರರನ್ನು ಹೊಂದಲು ಖುಷಿಯಾಗುತ್ತದೆ. ಯಾಕೆಂದರೆ ಅವರ ಪ್ರತಿಭೆ ಅಂಥದ್ದು,' ಎಂದು ಸಸೆಕ್ಸ್ ಹೇಳಿದೆ.

Story first published: Thursday, May 13, 2021, 15:51 [IST]
Other articles published on May 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X