ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ; ಹಿಂದಿರುಗಿದ ಸ್ಟಾರ್ ವೇಗಿಗಳು

England Squad Announced For The Test Series Against New Zealand; Veteran Seamers Returned

ಅನುಭವಿ ವೇಗದ ಬೌಲರ್‌ಗಳಾದ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಅವರು ಇಂಗ್ಲೆಂಡ್‌ನ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಬುಧವಾರದಂದು 13 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಿಗೆ ತಂಡವನ್ನು ಆಯ್ಕೆ ಮಾಡಲಾಗಿದೆ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಇಂಗ್ಲೆಂಡ್ ತಂಡದಿಂದ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಹೊರಗುಳಿದಿದ್ದರು. ಇಂಗ್ಲೆಂಡ್ 0-1 ರಿಂದ ಸೋತರು. ನ್ಯೂಜಿಲೆಂಡ್ ವಿರುದ್ಧದ ಸರಣಿಯು ಹೊಸ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಮತ್ತು ಕೋಚ್ ಬ್ರೆಂಡನ್ ಮೆಕಲಂ ಅವರ ನೇತೃತ್ವದಲ್ಲಿ ಇಂಗ್ಲೆಂಡ್‌ನ ಮೊದಲ ದ್ವಿಪಕ್ಷೀಯ ಟೆಸ್ಟ್ ಸರಣಿಯಾಗಿದೆ.

SRHನ ಈ ಆಟಗಾರನಿಗೆ ಟೀಂ ಇಂಡಿಯಾದಿಂದ ಕರೆ ಬರುವ ದಿನ ದೂರವಿಲ್ಲವೆಂದ ರವಿಶಾಸ್ತ್ರಿSRHನ ಈ ಆಟಗಾರನಿಗೆ ಟೀಂ ಇಂಡಿಯಾದಿಂದ ಕರೆ ಬರುವ ದಿನ ದೂರವಿಲ್ಲವೆಂದ ರವಿಶಾಸ್ತ್ರಿ

ಯಾರ್ಕ್‌ಷೈರ್ ಬ್ಯಾಟರ್ ಹ್ಯಾರಿ ಬ್ರೂಕ್ ಮತ್ತು ಡರ್ಹಾಮ್ ಸೀಮರ್ ಮ್ಯಾಥ್ಯೂ ಪಾಟ್ಸ್ ಇಂಗ್ಲೆಂಡ್‌ ತಂಡದಿಂದ ಮೊದಲ ಕರೆ ಬಂದಿದ್ದು, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಈ ಇಬ್ಬರು ಹೊಸ ಮುಖಗಳು ಅವಕಾಶ ಪಡೆದಿದ್ದಾರೆ.

ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ:
ಬೆನ್ ಸ್ಟೋಕ್ಸ್ (ನಾಯಕ), ಜೋ ರೂಟ್, ಜೇಮ್ಸ್ ಆಂಡರ್ಸನ್, ಜಾನಿ ಬೈರ್‌ಸ್ಟೋ, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಫೋಕ್ಸ್, ಜ್ಯಾಕ್ ಲೀಚ್, ಅಲೆಕ್ಸ್ ಲೀಸ್, ಕ್ರೇಗ್ ಓವರ್‌ಟನ್, ಓಲಿ ಪೋಪ್, ಮ್ಯಾಥ್ಯೂ ಪಾಟ್ಸ್

England Squad Announced For The Test Series Against New Zealand; Veteran Seamers Returned

"ಬೆನ್ ಸ್ಟೋಕ್ಸ್ ಮತ್ತು ಬ್ರೆಂಡನ್ ಮೆಕಲಂ ಅವರ ಸಾರಥ್ಯದಲ್ಲಿ ನಮ್ಮ ಟೆಸ್ಟ್ ತಂಡಕ್ಕೆ ಇದು ಹೊಸ ಯುಗದ ಆರಂಭವಾಗಿದೆ. ಯುವಕರು ಮತ್ತು ಅನುಭವದ ಮಿಶ್ರಣದೊಂದಿಗೆ ಮುಂದಿನ ತಿಂಗಳು ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಅತ್ಯಾಕರ್ಷಕ ತಂಡವನ್ನು ನಾವು ಆಯ್ಕೆ ಮಾಡಿದ್ದೇವೆ," ಎಂದು ಇಂಗ್ಲೆಂಡ್ ಪುರುಷರ ತಂಡದ ವ್ಯವಸ್ಥಾಪಕ ನಿರ್ದೇಶಕ ರಾಬ್ ಕೀ ಹೇಳಿದ್ದಾರೆ.

"ಕೌಂಟಿ ಋತುವಿನಲ್ಲಿ ಅತ್ಯುತ್ತಮ ಆರಂಭವನ್ನು ಹೊಂದಿರುವ ಹ್ಯಾರಿ ಬ್ರೂಕ್ ಮತ್ತು ಮ್ಯಾಟಿ ಪಾಟ್ಸ್‌ಗೆ ನಾವು ಮೊದಲ ಕರೆ ಕೊಟ್ಟಿದ್ದೇವೆ ಮತ್ತು ಅವರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಅರ್ಹರಾಗಿದ್ದಾರೆ," ಎಂದು ಪುರುಷರ ತಂಡದ ವ್ಯವಸ್ಥಾಪಕ ನಿರ್ದೇಶಕ ರಾಬ್ ಕೀ ತಿಳಿಸಿದರು.

IND vs SA: ತಮ್ಮನ್ನು ಎದುರಿಸಲಿರುವ ಟೀಮ್ ಇಂಡಿಯಾದಲ್ಲಿ ಪಾಂಡ್ಯ ಅಲ್ಲ ಈ ಇಬ್ಬರು ಇರಬೇಕು ಎಂದ ಮಿಲ್ಲರ್!IND vs SA: ತಮ್ಮನ್ನು ಎದುರಿಸಲಿರುವ ಟೀಮ್ ಇಂಡಿಯಾದಲ್ಲಿ ಪಾಂಡ್ಯ ಅಲ್ಲ ಈ ಇಬ್ಬರು ಇರಬೇಕು ಎಂದ ಮಿಲ್ಲರ್!

"ಇದು ಅತ್ಯಂತ ಕುತೂಹಲ ಹೆಚ್ಚಿಸಿರುವ ಸರಣಿಯಾಗಲಿದೆ ಎಂದು ಭರವಸೆ ನೀಡಿದೆ ಮತ್ತು ಉತ್ತಮ ನ್ಯೂಜಿಲೆಂಡ್ ವಿರುದ್ಧದ ಸರಣಿ ಪ್ರಾರಂಭಿಸಲು ನಾನು ಕಾಯಲು ಆಗುತ್ತಿಲ್ಲ. ಈ ದೇಶದಲ್ಲಿ ಕ್ರೀಡೆಯೊಂದಿಗೆ ಸಂಪರ್ಕ ಹೊಂದಿರುವ ಪ್ರತಿಯೊಬ್ಬರಿಗೂ ಇದು ಆಕರ್ಷಕ ನಿರೀಕ್ಷೆಯಾಗಿದೆ," ಎಂದು ರಾಬ್ ಕೀ ಹೇಳಿದರು.

ಜೂನ್ 2 ರಂದು ನಡೆಯಲಿರುವ ಮೊದಲ ಟೆಸ್ಟ್‌ಗೆ ಮುಂಚಿತವಾಗಿ ಮೇ 29ರಂದು ಲಂಡನ್‌ಗೆ ವರದಿ ಮಾಡುವ ಮೊದಲು ನ್ಯೂಜಿಲೆಂಡ್ ತಂಡವು ಮುಂದಿನ ವಾರ ಶಿಬಿರದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಸೇರಲಿದೆ.

Story first published: Wednesday, May 18, 2022, 16:29 [IST]
Other articles published on May 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X