ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ ಗೆಲ್ಲಬಲ್ಲ ಎರಡು ತಂಡಗಳನ್ನು ಊಹಿಸಿದ ಇಂಗ್ಲೆಂಡ್ ಸ್ಟಾರ್: ಭಾರತವೂ ಇದೆಯಾ?

England star cricketer Moeen Ali said India and Australia are the favorite to win t20 world cup

ಟಿ20 ವಿಶ್ವಕಪ್‌ನ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಅರ್ಹತಾ ಸುತ್ತಿನ ಪಂದ್ಯಗಳ ಆರಂಭಕ್ಕೆ ಇನ್ನಿರುವುದು ಕೇವಲ ಎರಡು ವಾರಗಳು ಮಾತ್ರ. ಈ ಸಂದರ್ಭದಲ್ಲಿ ಎಲ್ಲಾ ತಂಡಗಳು ಕುಡ ಭರ್ಜರಿ ಸಿದ್ಧತೆಯನ್ನು ಮಾಡಿಕೊಂಡಿದೆ. ಇಂಗ್ಲೆಂಡ್ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡು 7 ಪಂದ್ಯಗಳ ಟಿ20 ಸರಣಿಯಲ್ಲಿ ಭಾಗವಹಿಸುವ ಮೂಲಕ ಉತ್ತಮ ಸಿದ್ಧತೆ ನಡೆಸಿದೆ. ಈ ಸರಣಿಯಲ್ಲಿ ಮೊಯೀನ್ ಅಲಿ ನೇತೃತ್ವದ ಪಾಕಿಸ್ತಾನ ತಂಡ 4-3 ಅಂತರದಿಂದ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ಈ ಸಂದರ್ಭದಲ್ಲಿ ಪಾಕ್ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದ ಅನುಭವಿ ಆಲ್‌ರೌಂಡರ್ ಮೊಯೀನ್ ಅಲಿ ಟಿ20 ವಿಶ್ವಕಪ್ ವಿಚಾರವಾಗಿ ಭವಿಷ್ಯ ನುಡಿದಿದ್ದಾರೆ. ಚುಟುಕು ವಿಶ್ವಕಪ್‌ನಲ್ಲಿ ಗೆಲ್ಲಬಲ್ಲ ಎರಡು ತಂಡಗಳನ್ನು ಮೊಯೀನ್ ಅಲಿ ಹೆಸರಿಸಿದ್ದಾರೆ. ಇದರಲ್ಲಿ ಒಂದು ಭಾರತವೂ ಸೇರಿದೆ. ಹಾಗಾದರೆ ಮೊಯೀನ್ ಅಲಿ ಹೇಳಿದ್ದೇನು? ಮುಂದೆ ಓದಿ..

360 ಡಿಗ್ರಿ ಹೋಗ್ಲಿ, 180 ಡಿಗ್ರಿ ಶಾಟ್ಸ್ ಆದ್ರೂ ಹೊಡೀರಿ: ಪಾಕ್ ತಂಡದ ವಿರುದ್ಧ ವಾಸಿಂ ಅಕ್ರಂ ಗರಂ360 ಡಿಗ್ರಿ ಹೋಗ್ಲಿ, 180 ಡಿಗ್ರಿ ಶಾಟ್ಸ್ ಆದ್ರೂ ಹೊಡೀರಿ: ಪಾಕ್ ತಂಡದ ವಿರುದ್ಧ ವಾಸಿಂ ಅಕ್ರಂ ಗರಂ

ಭಾರತ ಮತ್ತು ಆಸ್ಟ್ರೇಲಿಯಾಗೆ ವಿಶ್ವಕಪ್ ಗೆಲ್ಲುವ ಅವಕಾಶ

ಭಾರತ ಮತ್ತು ಆಸ್ಟ್ರೇಲಿಯಾಗೆ ವಿಶ್ವಕಪ್ ಗೆಲ್ಲುವ ಅವಕಾಶ

ಇಂಗ್ಲೆಂಡ್ ತಂಡವನ್ನು ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಮುನ್ನಡೆಸಿದ್ದ ಅನುಭವಿ ಆಟಗಾರ ಮೊಯೀನ್ ಅಲಿ ಈ ಬಾರಿಯ ವಿಶ್ವಕಪ್ ಟೂರ್ನಿ ಗೆಲ್ಲುವ ಸಾಧ್ಯತೆಯಿರುವ ಎರಡು ತಂಡಗಳನ್ನು ಹೆಸರಿಸಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಈ ಬಾರಿಯ ವಿಶ್ವಕಪ್ ಗೆಲ್ಲುವ ನೆಚ್ಚಿನ ಎರಡು ತಂಡಗಳು ಎಂದು ಮೊಯೀನ್ ಅಲಿ ಉಲ್ಲೇಖಿಸಿದ್ದಾರೆ. ಆದರೆ ಪಾಕಿಸ್ತಾನದ ವಿರುದ್ಧ ಸರಣಿ ಗೆದ್ದರೂ ಇಂಗ್ಲೆಂಡ್ ತಂಡ ವಿಶ್ವಕಪ್‌ನ ನೆಚ್ಚಿನ ತಂಡ ಎನಿಸುತ್ತಿಲ್ಲ ಎಂದು ನೇರವಾಗಿಯೇ ಉಲ್ಲೇಖಿಸಿದ್ದಾರೆ ಮೊಯೀನ್ ಅಲಿ.

ಪಾಕ್ ವಿರುದ್ಧ ಸರಣಿ ಗೆದ್ದಿರುವುದು ಖುಷಿ

ಪಾಕ್ ವಿರುದ್ಧ ಸರಣಿ ಗೆದ್ದಿರುವುದು ಖುಷಿ

ಪಾಕಿಸ್ತಾನ್ ವಿರುದ್ಧದ ಏಳು ಪಂದ್ಯಗಳ ಟಿ20 ಸರಣಿಯಲ್ಲಿ 4-3 ಅಂತರದ ಗೆಲುವು ಸಾಧಿಸಿದ ಬಳಿಕ ಮೊಯೀನ್ ಅಲಿ ಮಾತನಾಡಿದ್ದಾರೆ. "ನಾನು ಸರಣಿಯನ್ನು ಗೆದ್ದಿರುವುದಕ್ಕೆ ನಿಜಕ್ಕೂ ಬಹಳ ಸಂತದಿಂದ ಇದ್ದೇವೆ. ಈಗ ನಾನು ಆಸ್ಟ್ರೇಲಿಯಾಗೆ ಉತ್ತಮ ಸ್ಥಾನದಲ್ಲಿದ್ದುಕೊಂಡು ತೆರಳಬಹುದಾಗಿದೆ. ಆದರೆ ವಿಶ್ವಕಪ್‌ನಲ್ಲಿ ನಾವು ಫೇವರೀಟ್ ತಂಡ ಎಂದು ನನಗೆ ಅನಿಸುತ್ತಿಲ್ಲ. ಪ್ರಾಮಾಣಿಕವಾಗಿ ಹೇಲಬೇಕೆಂದರೆ ನನಗೆ ಆ ಭಾವನೆ ಬರುತ್ತಿಲ್ಲ. ನಾವು ಅತ್ಯಂತ ಅಪಾಯಕಾರಿ ತಂಡ ಹಾಗೂ ನಮ್ಮ ವಿರುದ್ಧ ಆಡಲು ತಂಡಗಳು ಭಯಪಡುತ್ತವೆ ಎಂಬುದು ನನಗೆ ಗೊತ್ತಿದೆ. ಹಾಗಿದ್ದರೂ ಕೂಡ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳು"ಎಂದಿದ್ದಾರೆ ಮೊಯೀನ್ ಅಲಿ.

ಪಾಕಿಸ್ತಾನದ ವಿರುದ್ಧ ಟಿ20 ಸರಣಿ ಗೆದ್ದ ಇಂಗ್ಲೆಂಡ್

ಪಾಕಿಸ್ತಾನದ ವಿರುದ್ಧ ಟಿ20 ಸರಣಿ ಗೆದ್ದ ಇಂಗ್ಲೆಂಡ್

ಇನ್ನು ಇಂಗ್ಲೆಂಡ್ ತಂಡ ಬರೊಬ್ಬರಿ 17 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡು ಟಿ20 ಸರಣಿಯಲ್ಲಿ ಭಾಗಿಯಾಗಿತ್ತು. 7 ಪಂದ್ಯಗಳ ಈ ಸರಣಿಯಲ್ಲಿ ಇಂಗ್ಲೆಂಡ್ ನಾಲ್ಕರಲ್ಲಿ ಗೆಲುವು ಸಾಧಿಸಿ 4-3 ಅಂತರದಿಂದ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ. ಲಾಹೋರ್‌ನಲ್ಲಿ ನಡೆದ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೊದಲಿಗೆ ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 209 ರನ್‌ಗಳನ್ನು ಗಳಿಸಿತ್ತು. ನಂತರ ಇದನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡವನ್ನು ಕೇವಲ 142-9 ರನ್‌ಗಳಿಗೆ ಕಟ್ಟಿಹಾಕುವ ಮೂಲಕ ಭರ್ಜರಿ ಗೆಲುವು ಸಾಧಿಸಿತು.

ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಆಡಲಿದೆ ಇಂಗ್ಲೆಂಡ್

ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಆಡಲಿದೆ ಇಂಗ್ಲೆಂಡ್

ಇನ್ನು ಪಾಕಿಸ್ತಾನದ ವಿರುದ್ಧದ ಸರಣಿಯಲ್ಲಿ ಭಾಗಿಯಾದ ಬಳಿಕ ಇಂಗ್ಲೆಂಡ್ ತಂಡ ಮುಂದೆ ನೇರವಾಗಿ ಆಸ್ಟ್ರೇಲಿಯಾಗೆ ಪ್ರಯಾಣಿಸಲಿದೆ. ಟಿ20 ವಿಶ್ವಕಪ್ ಹಾಗೂ ಅಭ್ಯಾಸ ಪಂದ್ಯಗಳಿಗೂ ಮುನ್ನ ಈ ಎರಡು ತಂಡಗಳ ಮಧ್ಯೆ ಮೂರು ಪಂದ್ಯಗಳ ದ್ವಿಪಕ್ಷೀಯ ಟಿ20 ಸರಣಿ ಆಯೋಜನೆಯಾಗಲಿದೆ. ಈ ಮೂಲಕ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಚುಟುಕು ವಿಶ್ವಕಪ್‌ಗೆ ಅಂತಿಮ ಹಂತದ ಸಿದ್ಧತೆಯನ್ನು ಮಾಡಿಕೊಳ್ಳದೆ. ಇತ್ತ ಪಾಕಿಸ್ತಾನ ನ್ಯೂಜಿಲೆಂಡ್‌ಗೆ ಪ್ರವಾಸಕೈಗೊಳ್ಳಲಿದ್ದು ತ್ರಿಕೋನ ಸರಣಿಯಲ್ಲಿ ಭಾಗಿಯಾದ ಬಳಿಕ ಆಸ್ಟ್ರೇಲಿಯಾಗೆ ಪ್ರಯಾಣಿಸಲಿದೆ.

Story first published: Monday, October 3, 2022, 17:03 [IST]
Other articles published on Oct 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X