ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ ಪರೀಕ್ಷೆಗೆ ಒಳಪಟ್ಟ ಇಂಗ್ಲೆಂಡ್ ತಂಡ ಲಂಕಾಗೆ ಹಾರಲು ಸಜ್ಜು

England team clears coronavirus test, ready to travel to Sri Lanka

ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಳ್ಗೊಳ್ಳಲು ಇಂಗ್ಲೆಂಡ್ ಶ್ರೀಲಂಕಾ ಪ್ರವಾಸವನ್ನು ಕೈಗೊಳ್ಳಲಿದೆ. ಜನವರಿ 14ರಿಂದ ಆರಂಭವಾಗಲಿರುವ ಈ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ನ ಎಲ್ಲಾ ಆಟಗಾರರ ಕೊರೊನಾ ಪರೀಕ್ಷೆಯನ್ನು ನಡೆಸಲಾಗಿದ್ದು ಎಲ್ಲರ ವರದಿಯೂ ನೆಗೆಟಿವ್ ಬಂದಿದೆ. ಹೀಗಾಗಿ ಶನಿವಾರ ದ್ವೀಪರಾಷ್ಟ್ರಕ್ಕೆ ಇಂಗ್ಲೆಂಡ್ ಆಟಗಾರರ ತಂಡ ಪ್ರಯಾಣವನ್ನು ಬೆಳೆಸಲಿದೆ.

ಡಿಸೆಂಬರ್ 30ರಂದು ಇಂಗ್ಲೆಂಡ್ ಟೆಸ್ಟ್ ತಂಡದ ಎಲ್ಲಾ ಸದಸ್ಯರಿಗೆ ಹಾಗೂ ಸಿಬ್ಬಂಧಿಗಳಿಗೆ ಕೊರೊನಾ ಪರೀಕ್ಷೆಯನ್ನು ನಡೆಲಾಗಿತ್ತು. ಎಲ್ಲ ವರದಿಯೂ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಪೂರ್ವನಿಗದಿಯಂತೆಯೇ ಶನಿವಾರದಂದು ಇಂಗ್ಲೆಂಡ್ ಆಟಗಾರರು ಶ್ರೀಲಂಕಾಗೆ ಪ್ರಯಾಣವನ್ನು ಕೈಗೊಳ್ಳಲಿದ್ದಾರೆ.

ಮೆಲ್ಬರ್ನ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಿಸಿದ ಟೀಮ್ ಇಂಡಿಯಾಮೆಲ್ಬರ್ನ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಿಸಿದ ಟೀಮ್ ಇಂಡಿಯಾ

ಶ್ರೀಲಂಕಾಗೆ ಬಂದಿಳಿದ ಬಳಿಕ ಪ್ರವಾಸಿ ಇಂಗ್ಲೆಂಡ್ ತಂಡದ ಸದಸ್ಯರು 10 ದಿನಗಳ ಕಾಲ ಹಂಬಂತೋಟದ ಬಯೋಸೆಕ್ಯೂರ್‌ ಬಬಲ್‌ನಲ್ಲಿ 10 ದಿನಗಳ ಅವಧಿಯನ್ನು ಕಳೆಯಲಿದೆ ಎಂದು ಸ್ಕೈಸ್ಪೋರ್ಟ್ಸ್‌ನ ವರದಿ ತಿಳಿಸಿದೆ. ಅದಾದ ಬಳಿಕ ಜನವರಿ 14ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.

ಎರಡು ಪಂದ್ಯಗಳ ಟೆಸ್ಟ್ ಸರಣಿ ಇದಾಗಿದ್ದು ಎರಡು ಪಂದ್ಯಗಳಿಗೂ ಗಾಲ್ಲೆ ಕ್ರೀಡಾಂಗಣ ಆತಿಥ್ಯವನ್ನು ವಹಿಸಿದೆ. ಮೊದಲ ಪಂದ್ಯ ಜನವರಿ 14-18ರವರೆಗೆ ನಡೆಯಲಿದೆ. 2ನೇ ಪಂದ್ಯ ಜನವರಿ 22ರಿಂದ ಜನವರಿ 26ರ ವರೆಗೆ ನಡೆಯಲಿದೆ. ಈ ಸರಣಿ ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಆರಂಭವಾಗಬೇಕಿತ್ತು. ಆದರೆ ಕೊರೊನಾ ವೈರಸ್‌ನ ಕಾರಂದಿಂದಾಗಿ ಮುಂದೂಡಲ್ಪಟ್ಟಿತ್ತು.

ಟೀಮ್ ಇಂಡಿಯಾ ವೇಗಿ ಉಮೇಶ್ ಯಾದವ್‌ಗೆ ಹೆಣ್ಣುಮಗು ಜನನಟೀಮ್ ಇಂಡಿಯಾ ವೇಗಿ ಉಮೇಶ್ ಯಾದವ್‌ಗೆ ಹೆಣ್ಣುಮಗು ಜನನ

ಇಂಗ್ಲೆಂಡ್ ಹಾಗೂ ಶ್ರೀಲಂಕಾ ನಡುವಿನ ಈ ಸರಣಿ ಪ್ರಸಕ್ತ ನಡೆಯುತ್ತಿರುವ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್‌ನ ಭಾಗವಾಗಿದೆ. ಕೊರೊನಾ ವೈರಸ್‌ನ ಬಳಿಕ ಇಂಗ್ಲೆಂಡ್ ತಂಡದ ಎರಡನೇ ಪ್ರವಾಸ ಇದಾಗಿದೆ. ನವಂಬರ್‌ನಲ್ಲಿ ದಕ್ಷಿಣ ಆಫ್ರಿಕಾಗೆ ಪ್ರಯಾಣಿಸಿದ್ದ ಇಂಗ್ಲೆಂಡ್ ಕೊರೊನಾ ವೈರಸ್‌ ಹಾವಳಿಯಿಟ್ಟಿದ್ದ ಕಾರಣ ಸರಣಿಯನ್ನು ಮೊಟಕುಗೊಳಿಸಿ ತವರಿಗೆ ವಾಪಾಸಾಗಿತ್ತು.

Story first published: Saturday, January 2, 2021, 9:28 [IST]
Other articles published on Jan 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X