ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್‌ಗಾಗಿ ಈ ದೊಡ್ಡ ತ್ಯಾಗಕ್ಕೆ ತಾನು ಸಿದ್ಧ ಎಂದ ನಾಯಕ ಜೋ ರೂಟ್

England test skipper Joe Root said I care so much about Test cricket sacrificed IPL contract for Tests

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಆಶಸ್ ಸರಣಿ ಅಂತ್ಯವಾಗಿದೆ. ಈ ಸರಣಿಯಲ್ಲಿ ಇಂಗ್ಲೆಂಡ್ 4-0 ಅಂತರದ ಭಾರೀ ಸೋಲು ಅನುಭವಿಸಿ ಮುಖಭಂಗಕ್ಕೀಡಾಗಿದೆ. ಇಂಗ್ಲೆಂಡ್ ತಂಡದ ಸಾಮರ್ಥ್ಯದ ಬಗ್ಗೆ ಸ್ವತಃ ಇಂಗ್ಲೆಂಡ್ ತಂಡದ ಮಾಜಿ ಆಟಗಾರರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಕೂಡ ಇಂಗ್ಲೆಂಡ್ ತಂಡದ ಪ್ರದರ್ಶನಕ್ಕೆ ಕಿಡಿಕಾರುತ್ತಿದ್ದಾರೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಜೋ ರೂಟ್ ತಾನು ಟೆಸ್ಟ್ ಕ್ರಿಕೆಟ್‌ಗಾಗಿ ಎಷ್ಟ ಬದ್ಧನಾಗಿದ್ದೇನೆ ಎಂಬ ಮಾತನ್ನು ಆಡಿದ್ದಾರೆ.

ಇಂಗ್ಲೆಂಡ್ ತಂಡ ಕಳೆದ ಒಂದು ವರ್ಷದಿಂದೀಚೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಹೇಳಿಕೊಳ್ಳುವಂತಾ ಉತ್ತಮ ಸಾಧನೆ ಮಾಡಿಲ್ಲ. ಭಾರತ, ನ್ಯೂಜಿಲೆಂಡ್‌ ವಿರುದ್ಧ ಇಂಗ್ಲೆಂಡ್ ತವರಿನಲ್ಲಿಯೇ ಹಿನ್ನಡೆಯನ್ನು ಅನುಭವಿಸಿತ್ತು. ಬಳಿಕ ಆಸ್ಟ್ರೇಲಿಯಾದಲ್ಲಿ ನಡೆದ ಆಶಸ್ ಸರಣಿಯಲ್ಲಿಯೂ ಭಾರೀ ಮುಖಭಂಗಕ್ಕೆ ಒಳಗಾಗಿದೆ. ಇಂತಾ ಸಂದರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗಾಗಿ ತಾನು ಮತ್ತಷ್ಟು ಹೆಚ್ಚು ಕಾಲ ವ್ಯಯಿಸಬೇಕಿದೆ ಎಂದು ಜೋ ರೂಟ್ ಹೇಳಿದ್ದಾರೆ.

ಕೊಹ್ಲಿಯದ್ದು ವೈಯಕ್ತಿಕ ನಿರ್ಧಾರ: ನಾಯಕತ್ವ ತೊರೆದ ವಿರಾಟ್ ಬಗ್ಗೆ ಗಂಗೂಲಿ ಮೊದಲ ಪ್ರತಿಕ್ರಿಯೆಕೊಹ್ಲಿಯದ್ದು ವೈಯಕ್ತಿಕ ನಿರ್ಧಾರ: ನಾಯಕತ್ವ ತೊರೆದ ವಿರಾಟ್ ಬಗ್ಗೆ ಗಂಗೂಲಿ ಮೊದಲ ಪ್ರತಿಕ್ರಿಯೆ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಸೋತ ಬಳಿಕ ಜೋ ರೂಟ್ ಮಾಧ್ಯಮಗಳ ಜೊತೆಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಜೋ ರೂಟ್ ಮುಂದೆ 2022ರ ಐಪಿಎಲ್ ಹರಾಜಿಗೆ ತಮ್ಮ ಹೆಸರನ್ನು ನೊಂದಾಯಿಸುತ್ತೀರಾ ಎಂಬ ಪ್ರಶ್ನೆ ಕೇಳಿ ಬಂದಿತ್ತು. ಇದಕ್ಕೆ ಉತ್ತರಿಸುತ್ತಾ ಜೋ ರೂಟ್ ತನ್ನ ಮೊದಲ ಆದ್ಯತೆ ಟೆಸ್ಟ್ ಕ್ರಿಕೆಟ್. ಈ ಮಾದರಿಗಾಗಿ ತಾನು ಎಷ್ಟು ಸಾಧ್ಯವೋ ಅಷ್ಟು ತ್ಯಾಗಕ್ಕೆ ಸಿದ್ಧನಿದ್ದೇನೆ ಎಂಬ ಮಾತನ್ನು ಹೇಳಿದ್ದಾರೆ. "ನಾನು ನನ್ನಿಂದ ಸಾಧ್ಯವಾದಷ್ಟು ಟೆಸ್ಟ್ ಕ್ರಿಕೆಟ್‌ಗಾಗಿ ತ್ಯಾಗ ಮಾಡಲು ಸಿದ್ಧನಿದ್ದೇನೆ. ನಾನು ನಮ್ಮ ದೇಶದ ಟೆಸ್ಟ್ ಕ್ರಿಕೆಟ್ ಬಗ್ಗೆ ಸಾಕಷ್ಟು ಕಾಳಜಿಯನ್ನು ಹೊಂದಿದ್ದೇನೆ. ನಾವು ಎಲ್ಲಿರವೇಕೆಂದು ನಾವು ಬಯಸುತ್ತೀವೋ ಅದಕ್ಕಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಲಕೂಡ ನಾನು ನಡೆಸುತ್ತೇನೆ" ಎಂದು ಜೋ ರೂಟ್ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಆಡಿಯೇ ಇಲ್ಲ ಜೋ ರೂಟ್: ಕುತೂಹಲಕಾರಿ ಸಂಗತಿಯೆಂದರೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಈವರೆಗೆ ಐಪಿಎಲ್‌ಗೆ ಪದಾರ್ಪಣೆಯನ್ನೇ ಮಾಡಿಲ್ಲ. ಚುಟುಕು ಕ್ರಿಕೆಟ್‌ನಲ್ಲಿ ಆಲ್‌ರೌಂಡರ್ ಆಗಿಯೂ ಜೋ ರೂಟ್ ಉತ್ತಮ ಅನುಭವ ಹೊಂದಿದ್ದಾರೆ. ಅಲ್ಲದೆ ನಾಯಕನಾಗಿಯೂ ಸಾಕಷ್ಟು ಉತ್ತಮ ಅನುಭವ ಹೊಂದಿರುವ ಜೋ ರೂಟ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಹಲವು ತಂಡಗಳು ಉತ್ಸುಕವಾಗಿದೆ ಎಂಬುದು ಕೂಡ ನಿಜ.

ಟೆಸ್ಟ್ ನಾಯಕತ್ವವನ್ನೂ ತೊರೆದ ಕೊಹ್ಲಿ: ವಿರಾಟ್ ನಿರ್ಧಾರಕ್ಕೆ ಕ್ರಿಕೆಟ್ ತಾರೆಯರ ಅಚ್ಚರಿ, ಬಿಸಿಸಿಐ ಪ್ರತಿಕ್ರಿಯೆಟೆಸ್ಟ್ ನಾಯಕತ್ವವನ್ನೂ ತೊರೆದ ಕೊಹ್ಲಿ: ವಿರಾಟ್ ನಿರ್ಧಾರಕ್ಕೆ ಕ್ರಿಕೆಟ್ ತಾರೆಯರ ಅಚ್ಚರಿ, ಬಿಸಿಸಿಐ ಪ್ರತಿಕ್ರಿಯೆ

ಆದರೆ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನ ಮೇಲೆ ಸಾಕಷ್ಟು ಆದ್ಯತೆಯನ್ನು ನೀಡುತ್ತಲೇ ಬಂದಿದ್ದಾರೆ. ಈ ಬಾರಿ ತಂಡದ ಒಟ್ಟಾರೆ ಪ್ರದರ್ಶನ ನಿರಾಶಾದಾಯಕವಾಗಿರುವ ಸಂದರ್ಭದಲ್ಲಿ ಜೋ ರೂಟ್ ಈ ರೀರಿಯ ನಿರ್ಧಾರಕ್ಕೆ ಬಂದಿರುವುದು ಅವರ ಆಟದಲ್ಲಿನ ಯಾವ ರೀತಿಯ ಸಕಾರಾತ್ಮಕ ಬದಲಾವಣೆಗೆ ಕಾರಣವಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಹೊಸ ನಾಯಕನ ಮುಂದೆ Kohli ಹೇಗಿರಬೇಕು ಎಂದ Kapil Dev | Oneindia Kannada

ಕಳೆದ ಬೇಸಿಗೆ ಆವೃತ್ತಿಯಿಂದ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ನೀರಸ ಪ್ರದರ್ಶನ ನೀಡುತ್ತಿದೆ. ಮೊದಲಿಗೆ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ಪ್ರವಾಸ ತೆರಳಿ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಮದ ಮಣಿಸುವಲ್ಲಿ ಯಶಸ್ವಿಯಾಗಿತ್ತು. ಅದಾದ ಬಳಿಕ ಭಾರತ ಪ್ರವಾಸಕ್ಕೆ ತೆರಳಿ 2-1 ಅಂತರದ ಮುನ್ನಡೆ ಸಾಧಿಸಿ ವಾಪಾಸಾಗಿದೆ. ಇದೀಗ ಆಸ್ಟ್ರೇಲಿಯಾ ತಂಡ ಕೂಡ 4-0 ಅಂತರದಿಂದ ಇಂಗ್ಲೆಂಡ್ ತಂಡಕ್ಕೆ ಹೀನಾಯ ಸೋಲಿನ ರುಚಿ ತೋರಿಸಿದೆ.

Story first published: Friday, February 4, 2022, 18:40 [IST]
Other articles published on Feb 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X