ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2005ರ ಬಳಿಕ ಇದೇ ಮೊದಲು: ಮುಂದಿನ ವರ್ಷ ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿಯನ್ನಾಡಲಿದೆ ಇಂಗ್ಲೆಂಡ್

England to tour Pakistan next October; first time since 2005

ಇಂಗ್ಲೆಂಡ್ ಕ್ರಿಕೆಟ್ ತಂಡ ಸುಮಾರು ಒಂದೂವರೆ ದಶಕದ ಬಳಿಕ ಪಾಕಿಸ್ತಾನಕ್ಕೆ ಕ್ರಿಕೆಟ್ ಸರಣಿಯನ್ನಾಡಲು ಮುಂದಿನ ವರ್ಷ ತೆರಳಲಿದೆ. ಮುಂದಿನ ಅಕ್ಟೋಬರ್‌ ತಿಂಗಳಿನಲ್ಲಿ ಕರಾಚಿಯಲ್ಲಿ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು ಎರಡು ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಲಿದೆ. 2005ರ ಬಳಿಕ ಇದು ಇಂಗ್ಲೆಂಡ್‌ಗೆ ಮೊದಲ ಪಾಕಿಸ್ತಾನ ಪ್ರವಾಸವಾಗಿದೆ.

ಈ ಪ್ರವಾಸದ ಬಗ್ಗೆ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಅಧಿಕೃತ ಹೇಳಿಕೆಯನ್ನು ನೀಡಿದೆ. ಅಕ್ಟೋಬರ್ 12ರಂದು ಪಾಕಿಸ್ತಾನಕ್ಕೆ ಇಂಗ್ಲೆಂಡ್ ತಂಡ ಬಂದು ಇಳಿಯಲಿದೆ ಎಂಬುದನ್ನು ಇಸಿಬಿ ಬುಧವಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತ vs ಆಸ್ಟ್ರೇಲಿಯಾ: ರಿಚರ್ಡ್ಸನ್ ಹೊರಕ್ಕೆ, ಆ್ಯಂಡ್ರ್ಯೂ ಟೈ ಒಳಕ್ಕೆಭಾರತ vs ಆಸ್ಟ್ರೇಲಿಯಾ: ರಿಚರ್ಡ್ಸನ್ ಹೊರಕ್ಕೆ, ಆ್ಯಂಡ್ರ್ಯೂ ಟೈ ಒಳಕ್ಕೆ

ಅಕ್ಟೋಬರ್ 14 ಮತ್ತು 15ರಂದು ಸತತ ಎರಡು ದಿನ ಈ ಟಿ20 ಕ್ರಿಕೆಟ್ ಸರಣಿ ನಡೆಯಲಿದೆ. ಅದಾದ ಬಳಿಕ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ಎರಡು ತಂಡಗಳು ಕೂಡ ಅಕ್ಟೋಬರ್ 16ಕ್ಕೆ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಭಾರತಕ್ಕೆ ಹಾರಲಿದೆ.

ಇಂಗ್ಲೆಂಡ್ ಈ ಹಿಂದೆ ಪಾಕಿಸ್ತಾನಕ್ಕೆ ಪ್ರವಾಸ ತೆರಳಿದ್ದ ಸಂದರ್ಭದಲ್ಲಿ ಮೈಕಲ್ ವಾನ್ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕನಾಗಿದ್ದರು. 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳಲ್ಲಿ ಅಂದು ಈ ಎರಡು ತಂಡಗಳು ಪಾಲ್ಗೊಂಡಿದ್ದವು.

 ಪಿಎಸ್‌ಎಲ್‌ 2020: ಬಾಬರ್ ದರ್ಬಾರ್, ಕರಾಚಿ ಕಿಂಗ್ಸ್ ವಿನ್ನರ್ ಪಿಎಸ್‌ಎಲ್‌ 2020: ಬಾಬರ್ ದರ್ಬಾರ್, ಕರಾಚಿ ಕಿಂಗ್ಸ್ ವಿನ್ನರ್

ಕೊರೊನಾ ವೈರಸ್‌ನಿಂದಾಗಿ ವಿಶ್ವಾದ್ಯಂತ ಸಾಕಷ್ಟು ನಿರ್ಬಂಧ ಹಾಗೂ ಭಯದ ವಾತಾವರಣದ ಮಧ್ಯೆಯೂ ಕಳೆದ ಬೇಸಿಗೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಇಂಗ್ಲೆಂಡ್‌ಗೆ ಹಾರಿ 3 ಟೆಸ್ಟ್ ಹಾಗೂ 3 ಟಿ20 ಪಂದ್ಯಗಳ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಂಡಿತ್ತು. ಬಳಿಕ ಈ ಎರಡು ದೇಶಗಳ ಕ್ರಿಕೆಟ್ ಬಾಂಧವ್ಯ ಮತ್ತಷ್ಟು ಹೆಚ್ಚಾಗಿತ್ತು ಪಾಕಿಸ್ತಾನದಲ್ಲಿ ಕ್ರಿಕೆಟ್ ಚಟುವಟಿಕೆ ಗರಿಗೆದರಲು ಕೈಜೋಡಿಸುವುದಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಹೇಳಿಕೊಂಡಿದೆ.

Story first published: Wednesday, November 18, 2020, 16:29 [IST]
Other articles published on Nov 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X