ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ vs ಇಂಗ್ಲೆಂಡ್ 2021: ಸಂಪೂರ್ಣ ವೇಳಾಪಟ್ಟಿ, ಪಂದ್ಯದ ಸ್ಥಳ ಹಾಗೂ ತಂಡ

England tour of India 2021: Fixtures Schedule, Venues, Player Squads and Other Details in Kannada

ಆಸ್ಟ್ರೇಲಿಯಾವನ್ನು ಅದರ ತವರಿನಲ್ಲೇ ಮಣಿಸಿರುವ ಟೀಮ್ ಇಂಡಿಯಾ ಸಾಕಷ್ಟು ಉತ್ಸಾಹದಲ್ಲಿದೆ. ಈ ಮಧ್ಯೆ ಟೀಮ್ ಇಂಡಿಯಾ ಮತ್ತೊಂದು ಹೈವೋಲ್ಟೇಜ್ ಸರಣಿಗೆ ಸಜ್ಜಾಗುತ್ತಿದೆ. ಈ ಬಾರಿ ಟೀಮ್ ಇಂಡಿಯಾಗೆ ಇಂಗ್ಲೆಂಡ್ ಭಾರತದಲ್ಲೇ ಸವಾಲೊಡ್ಡಲು ಆಗಮಿಸಲಿದೆ. ಹೀಗಾಗಿ ಈ ಸರಣಿಯ ಮೇಲೂ ಸಾಕಷ್ಟು ಕುತೂಹಲ ಮೂಡಿದೆ.

ನಾಲ್ಕು ಟೆಸ್ಟ್, ಐದು ಟಿ20 ಹಾಗೂ 3 ಏಕದಿನ ಪಂದ್ಯಗಳ ಸುದೀರ್ಘ ಸರಣಿ ಇದಾಗಿದೆ. ಎರಡು ತಂಡಗಳು ಬಲಿಷ್ಠ ಬಳಗದೊಂದಿಗೆ ಈ ಸರಣಿಯಲ್ಲಿ ಕಣಕ್ಕಿಳಿಯಲಿದ್ದು ಯಾರ ಕೈ ಮೇಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಆಸ್ಟ್ರೇಲಿಯಾವನ್ನು ಅದರ ತವರಿನಲ್ಲೇ ಮಣಿಸಿರುವ ಉತ್ಸಾಹದಲ್ಲಿರುವ ಟೀಮ್ ಇಂಡಿಯಾ ಕ್ರಿಕೆಟ್ ಜನಕರನ್ನು ತನ್ನ ತವರಿನಲ್ಲಿ ಖೆಡ್ಡಾಗೆ ಬೀಳಿಸುವ ಉತ್ಸಾಹದಲ್ಲಿದೆ.

ಭಾರತ vs ಇಂಗ್ಲೆಂಡ್: ಟೆಸ್ಟ್ ಪಂದ್ಯಗಳಿಗೆ ಇಂಗ್ಲೆಂಡ್ ತಂಡ ಪ್ರಕಟಭಾರತ vs ಇಂಗ್ಲೆಂಡ್: ಟೆಸ್ಟ್ ಪಂದ್ಯಗಳಿಗೆ ಇಂಗ್ಲೆಂಡ್ ತಂಡ ಪ್ರಕಟ

ಇಂಗ್ಲೆಂಡ್ ಊಗ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನಾಡುತ್ತಿದ್ದು ಅದ್ಭುತ ಪ್ರದರ್ಶನವನ್ನು ನೀಡುತ್ತಿದೆ. ಆ ಸರಣಿ ಅಂತ್ಯವಾಗುತ್ತಿದ್ದಂತೆಯೇ ಭಾರತಕ್ಕೆ ಇಂಗ್ಲೆಂಡ್ ಪ್ರಯಾಣವನ್ನು ಬೆಳೆಸಲಿದೆ. ಈ ಸರಣಿಯ ಎಲ್ಲಾ ಪಂದ್ಯಗಳು ಮೂರೇ ಅಂಗಳದಲ್ಲಿ ನಡೆಯಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಮ್, ಅಹ್ಮದಾಬಾದ್‌ನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮೊಟೆರಾ ಸ್ಟೇಡಿಯಮ್ ಹಾಗೂ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಮ್‌ನಲ್ಲಿ ನಡೆಯಲಿದೆ.

ಟೆಸ್ಟ್ ಸರಣಿಯ ಪಂದ್ಯ ದಿನಾಂಕ ಹಾಗೂ ಸ್ಥಳ

ಟೆಸ್ಟ್ ಸರಣಿಯ ಪಂದ್ಯ ದಿನಾಂಕ ಹಾಗೂ ಸ್ಥಳ

ಮೊದಲ ಟೆಸ್ಟ್ ಫೆಬ್ರವರಿ 5ರಿಂದ 9, ಸ್ಥಳ: ಚೆನ್ನೈ
ಎರಡನೇ ಟೆಸ್ಟ್ ಫೆಬ್ರವರಿ 13 ರಿಂದ 17 ಸ್ಥಳ: ಚೆನ್ನೈ
ಮೂರನೇ ಟೆಸ್ಟ್ ಫೆಬ್ರವರಿ 3 ನೇ ಟೆಸ್ಟ್ (ಡೇ/ನೈಟ್) ಸ್ಥಳ: ಅಹಮದಾಬಾದ್
ನಾಲ್ಕನೇ ಟೆಸ್ಟ್ ಮಾರ್ಚ್ 4 ರಿಂದ 8, ಸ್ಥಳ: ಅಹಮದಾಬಾದ್

ಟಿ20 ಸರಣಿಯ ಪಂದ್ಯ ದಿನಾಂಕ ಹಾಗೂ ಸ್ಥಳ

ಟಿ20 ಸರಣಿಯ ಪಂದ್ಯ ದಿನಾಂಕ ಹಾಗೂ ಸ್ಥಳ

ಮೊದಲ ಟಿ20 ಪಂದ್ಯ ಮಾರ್ಚ್ 12, ಸ್ಥಳ: ಅಹ್ಮದಾಬಾದ್
ಎರಡನೇ ಟಿ20 ಪಂದ್ಯ ಮಾರ್ಚ್ 14, ಸ್ಥಳ: ಅಹ್ಮದಾಬಾದ್
ಮೂರನೇ ಟಿ20 ಪಂದ್ಯ ಮಾರ್ಚ್ 16, ಸ್ಥಳ: ಅಹ್ಮದಾಬಾದ್
ನಾಲ್ಕನೇ ಟಿ20 ಪಂದ್ಯ ಮಾರ್ಚ್ 18, ಸ್ಥಳ: ಅಹ್ಮದಾಬಾದ್
ಐದನೇ ಟಿ20 ಪಂದ್ಯ ಮಾರ್ಚ್ 20, ಸ್ಥಳ: ಅಹ್ಮದಾಬಾದ್

ಏಕದಿನ ಸರಣಿಯ ಪಂದ್ಯ ದಿನಾಂಕ ಹಾಗೂ ಸ್ಥಳ

ಏಕದಿನ ಸರಣಿಯ ಪಂದ್ಯ ದಿನಾಂಕ ಹಾಗೂ ಸ್ಥಳ

ಮೊದಲ ಏಕದಿನ ಪಂದ್ಯ ಮಾರ್ಚ್ 23, ಸ್ಥಳ: ಪುಣೆ
ಎರಡನೇ ಏಕದಿನ ಪಂದ್ಯ ಮಾರ್ಚ್ 26, ಸ್ಥಳ: ಪುಣೆ
ಮೂರನೇ ಏಕದಿನ ಪಂದ್ಯ ಮಾರ್ಚ್ 28, ಸ್ಥಳ: ಪುಣೆ

ಮೊದಲ 2 ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾಗಿರುವ ತಂಡ

ಮೊದಲ 2 ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾಗಿರುವ ತಂಡ

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಪೃಥ್ವಿ ಶಾ, ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಹನುಮ ವಿಹಾರಿ, ಶುಬ್ಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆ), ರಿಷಭ್ ಪಂತ್ (ವಿಕೆ), ಜಸ್ಪ್ರಿತ್ ಬೂಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ನವದೀಪ್ ಸೈನಿ, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಆರ್.ಅಶ್ವಿನ್, ಮೊಹಮ್ಮದ್ ಸಿರಾಜ್.

ಇಂಗ್ಲೆಂಡ್ ಟೆಸ್ಟ್ ತಂಡ

ಇಂಗ್ಲೆಂಡ್ ಟೆಸ್ಟ್ ತಂಡ

ಜೋ ರೂಟ್ (ನಾಯಕ), ಮೊಯೀನ್ ಅಲಿ, ಜೇಮ್ಸ್ ಆ್ಯಂಡರ್ಸನ್, ಡಾಮ್ ಬೆಸ್, ಸ್ಟುವರ್ಟ್ ಬ್ರಾಡ್, ಜೋ ಬರ್ನ್ಸ್, ಜೋಸ್ ಬಟ್ಲರ್, ಝ್ಯಾಕ್ ಕ್ರಾಲೆ, ಬೆನ್ ಫೋಕ್ಸ್, ಡ್ಯಾನ್ ಲಾರೆನ್ಸ್, ಜ್ಯಾಕ್ ಲೀಚ್, ಡಾಮ್ ಸಿಬ್ಲಿ, ಬೆನ್ ಸ್ಟೋಕ್ಸ್, ಆಲಿ ಸ್ಟೋನ್, ಕ್ರಿಸ್ ವೋಕ್ಸ್.

Story first published: Friday, January 22, 2021, 15:37 [IST]
Other articles published on Jan 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X