ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಲೆಕ್ಸ್ ಕ್ಯಾರಿ-ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಯಾಟಕ್ಕೆ ಶರಣಾದ ಇಂಗ್ಲೆಂಡ್

England vs Australia, 3rd ODI - Live Score

ಮ್ಯಾನ್ಚೆಸ್ಟರ್‌: ಮ್ಯಾನ್ಚೆಸ್ಟರ್‌ನ ಎಮಿರೇಟ್ಸ್‌ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ vs ಆಸ್ಟ್ರೇಲಿಯಾ ನಡುವಿನ ಮೂರನೇ ಮತ್ತು ಕೊನೇಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 3 ವಿಕೆಟ್ ರೋಚಕ ಗೆಲುವನ್ನಾಚರಿಸಿದೆ. ಅಲೆಕ್ಸ್ ಕ್ಯಾರಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಜೊತೆಯಾಟದ ನೆರವಿನಿಂದ ಪ್ರವಾಸಿ ಆಸೀಸ್ ಜಯ ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿ 2-1ರಿಂದ ಕಾಂಗರೂ ಪಡೆಯ ವಶವಾಗಿದೆ.

ಐಪಿಎಲ್: ಕ್ವಾರಂಟೈನ್ ದಿನ ಕಡಿತಕ್ಕೆ ಇಂಗ್ಲೆಂಡ್-ಆಸೀಸ್ ಆಟಗಾರರಿಂದ ಪತ್ರಐಪಿಎಲ್: ಕ್ವಾರಂಟೈನ್ ದಿನ ಕಡಿತಕ್ಕೆ ಇಂಗ್ಲೆಂಡ್-ಆಸೀಸ್ ಆಟಗಾರರಿಂದ ಪತ್ರ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್‌ ಆರಂಭಿಕ ಎರಡು ಎಸೆತಗಳಲ್ಲೇ ಎರಡು ವಿಕೆಟ್‌ಗಳನ್ನು ಕಳೆದು ಆಘಾತ ಅನುಭವಿಸಿತು. ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಅವರ ಮೊದಲ ಎಸೆತಕ್ಕೆ ಜೇಸನ್ ರಾಯ್ ಅವರು ಮ್ಯಾಕ್ಸ್‌ವೆಲ್‌ಗೆ ಕ್ಯಾಚಿತ್ತರೆ, ಎರಡನೇ ಎಸೆತದಲ್ಲಿ ಜೋ ರೂಟ್ ಎಲ್‌ಬಿಡಬ್ಲ್ಯೂ ಆದರು.

ಇಂಗ್ಲೆಂಡ್ vs ಆಸ್ಟ್ರೇಲಿಯಾ, 3ನೇ ಏಕದಿನ, ಸ್ಕೋರ್‌ಕಾರ್ಡ್

1
49136

ಆದರೆ ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಜಾನಿ ಬೇರ್ಸ್ಟೋವ್ ಉತ್ತಮ ಸ್ಟ್ಯಾಂಡ್‌ ಕೊಟ್ಟರು. ಬೇರ್ಸ್ಟೋವ್ 112, ನಾಯಕ ಇಯಾನ್ ಮಾರ್ಗನ್ 23, ಸ್ಯಾಮ್ ಬಿಲ್ಲಿಂಗ್ಸ್ 57, ಕ್ರಿಸ್ ವೋಕ್ಸ್ 53, ಟಾಮ್ ಕರನ್ 19, ಆದಿಲ್ ರಶೀದ್ 11 ರನ್ ಸೇರ್ಪಡೆಯೊಂದಿಗೆ ಇಂಗ್ಲೆಂಡ್ 50 ಓವರ್‌ಗೆ 7 ವಿಕೆಟ್ ಕಳೆದು 302 ರನ್ ಗಳಿಸಿತು.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಪಾಯಕಾರಿ ಆಟಗಾರರು, ವೇಳಾಪಟ್ಟಿ, ಮಾಹಿತಿಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಪಾಯಕಾರಿ ಆಟಗಾರರು, ವೇಳಾಪಟ್ಟಿ, ಮಾಹಿತಿ

ಆದರೆ ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಜಾನಿ ಬೇರ್ಸ್ಟೋವ್ ಉತ್ತಮ ಸ್ಟ್ಯಾಂಡ್‌ ಕೊಟ್ಟರು. ಇಂಗ್ಲೆಂಡ್ ಉತ್ತಮ ಗುರಿ ನೀಡುವಲ್ಲಿ ಸಫಲವಾಗಿತ್ತು.

302 ರನ್ ಕಲೆ ಹಾಕಿದ್ದ ಇಂಗ್ಲೆಂಡ್

302 ರನ್ ಕಲೆ ಹಾಕಿದ್ದ ಇಂಗ್ಲೆಂಡ್

ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಜಾನಿ ಬೇರ್ಸ್ಟೋವ್ 112, ನಾಯಕ ಇಯಾನ್ ಮಾರ್ಗನ್ 23, ಸ್ಯಾಮ್ ಬಿಲ್ಲಿಂಗ್ಸ್ 57, ಕ್ರಿಸ್ ವೋಕ್ಸ್ 53, ಟಾಮ್ ಕರನ್ 19, ಆದಿಲ್ ರಶೀದ್ 11 ರನ್ ಸೇರ್ಪಡೆಯೊಂದಿಗೆ ಇಂಗ್ಲೆಂಡ್ 50 ಓವರ್‌ಗೆ 7 ವಿಕೆಟ್ ಕಳೆದು 302 ರನ್ ಗಳಿಸಿತು.

ಆಸೀಸ್‌ಗೂ ಆರಂಭಿಕ ಆಘಾತ

ಆಸೀಸ್‌ಗೂ ಆರಂಭಿಕ ಆಘಾತ

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕೂಡ ಇನ್ನಿಂಗ್ಸ್ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಭೀತಿ ಅನುಭವಿಸಿತು. ಆದರೆ ಅಲೆಕ್ಸ್ ಕ್ಯಾರಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಚತುರ ಜೊತೆಯಾಟ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ನೆರವು ನೀಡಿತು.

ಕ್ಯಾರಿ-ಮ್ಯಾಕ್ಸ್‌ವೆಲ್ ಶತಕ

ಕ್ಯಾರಿ-ಮ್ಯಾಕ್ಸ್‌ವೆಲ್ ಶತಕ

ಆಸ್ಟ್ರೇಲಿಯಾದಿಂದ ಡೇವಿಡ್ ವಾರ್ನರ್ 24, ನಾಯಕ ಆ್ಯರನ್ ಫಿಂಚ್ 12, ಮಾರ್ನಸ್ ಲ್ಯಬುಶೇನ್ 20, ಅಲೆಕ್ಸ್ ಕ್ಯಾರಿ 106 (114 ಎಸೆತ), ಗ್ಲೆನ್ ಮ್ಯಾಕ್ಸ್‌ವೆಲ್ 108 (90 ಎಸೆತ), ಮಿಚೆಲ್ ಸ್ಟಾರ್ಕ್ 11 ರನ್ ಕೊಡುಗೆಯಿತ್ತರು. ಆಸೀಸ್ 49.4 ಓವರ್‌ಗೆ 7 ವಿಕೆಟ್ ಕಳೆದು 305 ರನ್ ಪೇರಿಸಿತು.

ಗ್ಲೆನ್ ಮ್ಯಾಕ್ಸ್‌ವೆಲ್ ಹೀರೋ

ಗ್ಲೆನ್ ಮ್ಯಾಕ್ಸ್‌ವೆಲ್ ಹೀರೋ

ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 3, ಪ್ಯಾಟ್ ಕಮಿನ್ಸ್ 1, ಆ್ಯಡಂ ಜಂಪಾ 3 ವಿಕೆಟ್ ಪಡೆದರೆ, ಆಸೀಸ್ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್ 2, ಜೋ ರೂಟ್ 2, ಜೋಫ್ರಾ ಆರ್ಚರ್ ಮತ್ತು ಆದಿಲ್ ರಶೀದ್ ತಲಾ 1 ವಿಕೆಟ್‌ ಪಡೆದು ಗಮನ ಸೆಳೆದರು. ಗ್ಲೆನ್ ಮ್ಯಾಕ್ಸ್‌ವೆಲ್ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಂಗ್ಲೆಂಡ್ ತಂಡ: ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್, ಜೋ ರೂಟ್, ಇಯಾನ್ ಮಾರ್ಗನ್ (ಸಿ), ಜೋಸ್ ಬಟ್ಲರ್ (ವಿಕೆ), ಸ್ಯಾಮ್ ಬಿಲ್ಲಿಂಗ್ಸ್, ಕ್ರಿಸ್ ವೋಕ್ಸ್, ಟಾಮ್ ಕರನ್, ಆದಿಲ್ ರಶೀದ್, ಜೋಫ್ರಾ ಆರ್ಚರ್, ಮಾರ್ಕ್ ವುಡ್.

ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಆ್ಯರನ್ ಫಿಂಚ್ (ಸಿ), ಮಾರ್ಕಸ್ ಸ್ಟೊಯಿನಿಸ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆ), ಗ್ಲೆನ್ ಮ್ಯಾಕ್ಸ್‌ವೆಲ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್ವುಡ್, ಆ್ಯಡಮ್ ಜಂಪಾ.

Story first published: Thursday, September 17, 2020, 2:40 [IST]
Other articles published on Sep 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X