ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ಆಸ್ಟ್ರೇಲಿಯಾ: ಅಂತಿಮ ಟಿ20 ಕದನಕ್ಕೆ ಎರಡು ತಂಡಗಳು ಸಜ್ಜು

England Vs Australia 3rd T20i At Southampton

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಅಂತಮ ಪಂದ್ಯ ಮಾತ್ರವೇ ಬಾಕಿಯಿದ್ದು ಇಂದು ನಡೆಯಲಿದೆ. ಮೊದಲೆರಡು ಪಂದ್ಯಗಳನ್ನು ಆತಿಥೇಯ ಇಂಗ್ಲೆಂಡ್ ಗೆದ್ದುಕೊಂಡಿದ್ದು ಟಿ20ಯ ನಂಬರ್ 1 ತಂಡವೆನಿಸಿಕೊಂಡಿರುವ ಆಸ್ಟ್ರೇಲಿಯಾ ಕ್ಲೀನ್ ಸ್ವೀಪ್ ಅವಮಾನಕ್ಕೆ ತುತ್ತಾಗುವ ಆತಂಕದಲ್ಲಿದೆ.

ಇನ್ನು ಇಂಗ್ಲೆಂಡ್ ಸತತ ಸರಣಿ ಗೆಲುವುಗಳ ಮೂಲಕ ಮುನ್ನುಗ್ಗುತ್ತಿದ್ದು ಕೊನೆಯ ಪಂದ್ಯವನ್ನು ಗೆಲ್ಲುವ ಉತ್ಸಾಹದಲ್ಲಿದೆ. ಆದರೆ ಈ ಪಂದ್ಯಕ್ಕೆ ಕಳೆದ ಪಂದ್ಯದ ಹೀರೋ ಜೋಸ್ ಬಟ್ಲರ್ ಅಲಭ್ಯರಾಗುತ್ತಿದ್ದಾರೆ. ಕುಟುಂಬವನ್ನು ಭೇಟಿಯಾಗುವ ಕಾರಣದಿಂದ 3ನೇ ಪಂದ್ಯವನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಇದು ಎದುರಾಳಿಗೆ ಲಾಭವಾಗುವ ಸಾಧ್ಯತೆಯಿದೆ.

ಮತ್ತೆ ಕ್ರಿಕೆಟ್ ಅಂಗಳಕ್ಕೆ ಸಿಕ್ಸರ್ ಕಿಂಗ್ ಯುವಿ! : ಬಿಗ್‌ಬ್ಯಾಷ್ ಲೀಗ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆಮತ್ತೆ ಕ್ರಿಕೆಟ್ ಅಂಗಳಕ್ಕೆ ಸಿಕ್ಸರ್ ಕಿಂಗ್ ಯುವಿ! : ಬಿಗ್‌ಬ್ಯಾಷ್ ಲೀಗ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ

ಭಾನುವಾರ ನಡೆದ 2ನೇ ಪಂದ್ಯದಲ್ಲಿ ಬಟ್ಲರ್ ಸಿಡಿಸಿದ ಅಜೇಯ 77 ರನ್‌ಗಳ ಕೊಡುಗೆಯ ಕಾರಣದಿಂದಾಗಿ ಇಂಗ್ಲೆಂಡ್ ಭರ್ಜರಿ 6 ವಿಕೆಟ್‌ಗಳ ಗೆಲುವನ್ನು ಸಾಧಿಸಲು ಯಶಸ್ವಿಯಾಗಿತ್ತು. 54 ಎಸೆತಗಳನ್ನು ಎದುರಿಸಿದ್ದ ಬಟ್ಲರ್ 8 ಬೌಂಡರ್ ಹಾಗೂ 2 ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಆಸ್ಟ್ರೇಲಿಯಾ ನೀಡಿದ್ದ 158 ರನ್‌ಗಳ ಗುರಿಯನ್ನು ಇಂಗ್ಲೆಂಡ್ ತಲುಪಿ ಸರಣಿ ಗೆಲುವು ಸಾಧಿಸಿತ್ತು.

ಐಪಿಎಲ್: 'ಈ ವಿಚಾರದಲ್ಲಿ ವಿದೇಶಿ ಆಟಗಾರರಿಗೆ ಅನುಭವವಿದೆ, ಆದರೆ ಭಾರತೀಯ ಕ್ರಿಕೆಟಿಗರಿಗೆ ಕಷ್ಟವಾಗಲಿದೆ'ಐಪಿಎಲ್: 'ಈ ವಿಚಾರದಲ್ಲಿ ವಿದೇಶಿ ಆಟಗಾರರಿಗೆ ಅನುಭವವಿದೆ, ಆದರೆ ಭಾರತೀಯ ಕ್ರಿಕೆಟಿಗರಿಗೆ ಕಷ್ಟವಾಗಲಿದೆ'

ಮೊದಲ ಪಂದ್ಯದಲ್ಲೂ ಗಮನಾರ್ಹ ಪ್ರದರ್ಶನವನ್ನು ನೀಡಿದ್ದರು ಜೋಸ್ ಬಟ್ಲರ್. ಆಸಿಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಮೌಲ್ಯಯುತ 44 ರನ್‌ಗಳ ಕಾಣಿಕೆಯನ್ನು ನೀಡಿದ್ದರು. ಆ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲಿಗೆ ಬ್ಯಾಟಿಂಗ್ ನಡೆಸಿ 163 ರನ್ ಗಳಿಸಿತ್ತು. ಆ ಪಂದ್ಯವನ್ನು ರೋಚಕ ರೀತಿಯಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಅಂತಿಮ ಪಂದ್ಯ ಕೂಡ ಸೌಥಾಂಪ್ಟನ್‌ನ ಏಜಸ್‌ಬೌಲ್‌ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 10:30ಕ್ಕೆ ಪಂದ್ಯ ಆರಂಭವಾಗಲಿದೆ. ಸೋನಿ ಸಿಕ್ಸ್, ಸೋನಿ ಸಿಕ್ಸ್ ಹೆಚ್‌ಡಿ, ಸೋನಿ ಟೆನ್ 1, ಸೋನಿ ಟೆನ್ 1 ಹೆಚ್‌ಡಿ ನಲ್ಲಿ ಪಂದ್ಯ ನೇರಪ್ರಸಾರವಾಗಲಿದೆ.

Story first published: Tuesday, September 8, 2020, 20:32 [IST]
Other articles published on Sep 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X