ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ಆಸಿಸ್: ಚೇತರಿಸಿಕೊಂಡ ಸ್ಟೀವ್ ಸ್ಮಿತ್ 2ನೇ ಏಕದಿನಕ್ಕೆ ಲಭ್ಯ

England Vs Australia: Steve Smith Available To Play Second Odi

ಆಸ್ಟ್ರೇಲಿಯಾದ ಬ್ಯಾಟಿಂಗ್ ಮಾಂತ್ರಿಕ ಸ್ಟೀವ್ ಸ್ಮಿತ್ ಅಭ್ಯಾಸದ ವೇಳೆ ತಲೆಗೆ ಚೆಂಡು ಬಡಿದು ಗಾಯಗೊಂಡಿದ್ದರು. ಹೀಗಾಗಿ ಮೊದಲ ಪಂದ್ಯದಲ್ಲಿ ಅವರು ಕಣಕ್ಕಿಳಿದಿರಲಿಲ್ಲ. ಈಗ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದು ವೈದ್ಯಕೀಯ ಪರೀಕ್ಷೆಯಲ್ಲೂ ಸ್ಮಿತ್ ಫಿಟ್ ಇರುವುದು ಸಾಬೀತಾಗಿದೆ. ಹೀಗಾಗಿ 2ನೇ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ಪರವಾಗಿ ಕಣಕ್ಕಿಳಿಯಲಿದ್ದಾರೆ.

ಮೊದಲ ಪಂದ್ಯದಿಂದ ಹೊರಗುಳಿದ ಬಳಿಕ ಸ್ಟೀವ್ ಸ್ಮಿತ್ ಎರಡನೇ ಪಂದ್ಯಕ್ಕು ಲಭ್ಯರಾಗುವುದು ಅನುಮಾನವೆಂದೇ ಹೇಳಲಾಗಿತ್ತು. ಆದರೆ ಶನಿವಾರ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಸ್ಟೀವ್ ಸ್ಮಿತ್ ಆಡಲು ಫಿಟ್ ಆಗಿದ್ದಾರೆಂಬ ವರದಿ ಬಂದಿದೆ. ಹೀಗಾಗಿ ಆಸ್ಟ್ರೇಲಿಯಾಗೆ ದೊಡ್ಡ ಬಲ ದೊರೆತಂತಾಗಿದೆ.

ಆತ ವಿಶ್ವದಲ್ಲೇ ಬೆಸ್ಟ್ ಟಿ20 ಬೌಲರ್: ಐಪಿಎಲ್ ಬೌಲರ್ ಹೆಸರಿಸಿದ ಹಸ್ಸಿಆತ ವಿಶ್ವದಲ್ಲೇ ಬೆಸ್ಟ್ ಟಿ20 ಬೌಲರ್: ಐಪಿಎಲ್ ಬೌಲರ್ ಹೆಸರಿಸಿದ ಹಸ್ಸಿ

ಅಭ್ಯಾಸದಲ್ಲಿ ತಲೆಗೆ ಏಟು

ಅಭ್ಯಾಸದಲ್ಲಿ ತಲೆಗೆ ಏಟು

ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯಕ್ಕೆ ಮುನ್ನದಿನ ನಡೆದ ಅಭ್ಯಾಸದ ವೇಳೆ ಕೋಚಿಂಗ್ ಸಿಬ್ಬಂದಿ ಸದಸ್ಯರ ಎಸೆತ ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿದ್ದ ಸ್ಮಿತ್ ತಲೆಗೆ ಬಡಿದಿತ್ತು. ಹೀಗಾಗಿ ಶುಕ್ರವಾರ ನಡೆದ ಪಂದ್ಯದಿಂದ ಅಂತಿಮ ಹಂತದಲ್ಲಿ ಹಿಂದಕ್ಕೆ ಸರಿದಿದ್ದರು. ಈ ಪಂದ್ಯವನ್ನು ಆಸ್ಟ್ರೇಲಿಯಾ 19 ರನ್‌ಗಳಿಂದ ಗೆದ್ದುಕೊಂಡಿದ್ದು 3 ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಮುನ್ನಡೆಪಡೆದುಕೊಂಡಿದೆ.

ಮುಂಜಾಗ್ರತಾ ಕ್ರಮವಾಗಿ ಹಿಂದಕ್ಕೆ ಸರಿದಿದ್ದ ಸ್ಮಿತ್

ಮುಂಜಾಗ್ರತಾ ಕ್ರಮವಾಗಿ ಹಿಂದಕ್ಕೆ ಸರಿದಿದ್ದ ಸ್ಮಿತ್

31 ವರ್ಷದ ಸ್ಟೀವ್ ಸ್ಮಿತ್ ಮುಂಜಾಗ್ರತಾ ಕ್ರಮವಾಗಿ ಮೊದಲ ಪಂದ್ಯದಿಂದ ಹಿಂದಕ್ಕೆ ಸರಿದಿದ್ದರು. ಈ ಮಧ್ಯೆ ಶುಕ್ರವಾರ ಹಾಗೂ ಶನಿವಾರದಂದು ಸ್ಟೀವ್ ಸ್ಮಿತ್ ಎರಡು ಕನ್ಕ್ಯುಶನ್ ಪರೀಕ್ಷೆಗೆ(ತಲೆಗೆ ಏಟಾದ ಸಂದರ್ಭದಲ್ಲಿ ಮೆದುಳಿನ ಕಾರ್ಯಾಚರಣೆ ತಿಳಿಯುವ ಪರೀಕ್ಷೆ ) ಒಳಪಟ್ಟಿದ್ದರು. ಎರಡರಲ್ಲೂ ಸಕಾರಾತ್ಮಕ ವರದಿ ಬಂದಿದೆ ಎಂದು cricket.com.au ತಿಳಿಸಿದೆ.

ಕಳೆದ ಆ್ಯಶಸ್‌ನಲ್ಲೂ ಸ್ಮಿತ್‌ಗೆ ಏಟು

ಕಳೆದ ಆ್ಯಶಸ್‌ನಲ್ಲೂ ಸ್ಮಿತ್‌ಗೆ ಏಟು

ಸ್ಟೀವ್ ಸ್ಮಿತ್ ಕಳೆದ ಬಾರಿ ಲಾರ್ಡ್ಸ್‌ನಲ್ಲಿ ನಡೆದ ಆ್ಯಶಸ್ ಟೆಸ್ಟ್ ಪಂದ್ಯದಲ್ಲೂ ತಲೆಗೆ ಏಟು ತಿಂದಿದ್ದರು. ಪಂದ್ಯದ ವೇಲೆ ವೇಗಿ ಜೋಫ್ರಾ ಆರ್ಚರ್ ಎಸೆತ ನೇರವಾಗಿ ಸ್ಮಿತ್ ತಲೆಗೆ ಬಡಿದ ಪರಿಣಾಮ ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಮಿತ್ ಕಣಕ್ಕಿಳಿದಿರಲಿಲ್ಲ. ಬಳಿಕ ಮುಂದಿನ ಪಂದ್ಯದಿಂದಲೂ ಸ್ಮಿತ್ ಹೊರಗುಳಿದಿದ್ದರು.

Story first published: Sunday, September 13, 2020, 13:29 [IST]
Other articles published on Sep 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X