ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಸೋತ ಆಂಗ್ಲರಿಗೆ ಬಲ ತುಂಬಲಿದ್ದಾರಾ ಬೆನ್ ಸ್ಟೋಕ್ಸ್?!

England vs India: Ben Stokes likely to return from mental health break

ಲಂಡನ್: ಟೀಮ್ ಇಂಡಿಯಾ ವಿರುದ್ಧ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಆತಿಥೇಯ ಇಂಗ್ಲೆಂಡ್, ಟೆಸ್ಟ್ ಸರಣಿಯನ್ನು ಉಳಿಸಿಕೊಳ್ಳುವ ಒತ್ತಡದಲ್ಲಿದೆ. ಹೀಗಾಗಿ ಮುಂದಿನ ಪಂದ್ಯಗಳಿಗೆ ತಂಡದ ಪ್ರಮುಖ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ವಾಪಸ್ ಕರೆತರುವ ಯೋಚನೆಯಲ್ಲಿದೆ. ಕಳೆದ ಜುಲೈನಲ್ಲಿ ಸ್ಟೋಕ್ಸ್ ಮಾನಸಿಕ ಕಾರಣಕ್ಕಾಗಿ ಅನಿರ್ದಿಷ್ಟಾವಧಿಗೆ ತಂಡದಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ್ದರು.

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಭರ್ಜರಿ ಗೆಲುವಿಗೆ ದಿಗ್ಗಜರ ಪ್ರತಿಕ್ರಿಯೆ ಹೇಗಿದೆ ನೋಡಿ!ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಭರ್ಜರಿ ಗೆಲುವಿಗೆ ದಿಗ್ಗಜರ ಪ್ರತಿಕ್ರಿಯೆ ಹೇಗಿದೆ ನೋಡಿ!

ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ಸೋಮವಾರ (ಆಗಸ್ಟ್ 16) ಮುಕ್ತಾಯಗೊಂಡ ಭಾರತ vs ಇಂಗ್ಲೆಂಡ್ ದ್ವಿತೀಯ ಪಂದ್ಯದಲ್ಲಿ ಭಾರತ 151 ರನ್‌ಗಳ ಭರ್ಜರಿ ಜಯ ಗಳಿಸಿತ್ತು. ಅಸಲಿಗೆ ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲುವುದರಲ್ಲಿತ್ತು. ಆದರೆ ವಿರಾಟ್ ಕೊಹ್ಲಿ ಪಡೆ ಸೋಲುವ ಪಂದ್ಯದಲ್ಲೂ ವೀರೋಚಿತ ಹೋರಾಟದೊಂದಿಗೆ ಪಂದ್ಯವನ್ನು ಗೆದ್ದು ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿತ್ತು.

ಇಂಗ್ಲೆಂಡ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್ ಮಾತನಾಡಿ, ಬೆನ್ ಸ್ಟೋಕ್ಸ್ ಯಾವಾಗ ಆಡಲು ತಯಾರಾಗಿದ್ದಾರೆ ಅನ್ನೋದನ್ನು ಸ್ವಲ್ಪ ಕಾದು ನೋಡಲಿದ್ದೇವೆ. ಆದರೆ ಆಡುವ ಬಗೆಗಿನ ನಿರ್ಧಾರ ಸಂಪೂರ್ಣವಾಗಿ ಸ್ಟೋಕ್ಸ್ ಮತ್ತು ಅವರ ಕುಟುಂಬವನ್ನು ಅವಲಂಬಿಸಿರಲಿದೆ ಎಂದಿದ್ದಾರೆ. ತೃತೀಯ ಪಂದ್ಯ ಆಗಸ್ಟ್ 25ರಂದು ನಡೆಯಲಿದೆ. ಈ ಪಂದ್ಯದಲ್ಲಿ ಸ್ಟೋಕ್ಸ್ ಬರಲೂಬಹುದು.

'ತಾಲಿಬಾನ್‌ಗಳು ಕ್ರಿಕೆಟ್‌ಗೆ ಬೆಂಬಲ ನೀಡುತ್ತಾರೆಂದು ನನಗೆ ಭರವಸೆಯಿದೆ' ಎಂದ ಭಾರತೀಯ!'ತಾಲಿಬಾನ್‌ಗಳು ಕ್ರಿಕೆಟ್‌ಗೆ ಬೆಂಬಲ ನೀಡುತ್ತಾರೆಂದು ನನಗೆ ಭರವಸೆಯಿದೆ' ಎಂದ ಭಾರತೀಯ!

ವಿರಾಟ್ ನಾಯಕತ್ವವನ್ನ ಹಾಡಿ ಹೊಗಳಿದ ರೂಟ್! | Oneindia Kannada

"ಬೆನ್ ಸ್ಟೋಕ್ಸ್ ಉತ್ತಮ ಸ್ಥಿತಿಯಲ್ಲಿರೋದೇ ಮುಖ್ಯ ಅನ್ನೋದನ್ನು ನಾನಿಲ್ಲಿ ಒತ್ತಿ ಹೇಳುತ್ತಿದ್ದೇನೆ. ಅವರ ಕುಟುಂಬವೂ ಉತ್ತಮ ಸ್ಥಿತಿಯಲ್ಲಿರೋದು ಮುಖ್ಯ. ಹಾಗಿದ್ದರೆ ಮಾತ್ರ ಸ್ಟೋಕ್ಸ್ ಆಟಕ್ಕೆ ಬಲಿಷ್ಠವಾಗಿ ವಾಪಸ್ಸಾಗಲಿದ್ದಾರೆ. ಮಾನಸಿಕವಾಗಿ ಅವರು ಆಡಲು ತಯಾರಿದ್ದರೆ ಮಾತ್ರ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ," ಎಂದು ಸಿಲ್ವರ್‌ವುಡ್ ಹೇಳಿದ್ದಾರೆ.

Story first published: Tuesday, August 17, 2021, 21:57 [IST]
Other articles published on Aug 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X