ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊಯೀನ್ ಅಲಿ ಎಸೆತಕ್ಕೆ ಭರ್ಜರಿ ಸಿಕ್ಸ್ ಚಚ್ಚಿದ ಮೊಹಮ್ಮದ್ ಶಮಿ: ವಿಡಿಯೋ

England vs India: Mohammed Shami slams massive six off Moeen Ali to bring up 2nd fifty

ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್‌ ಪಂದ್ಯದ ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತದ ವೇಗಿಗಳಾದ ಜಸ್‌ಪ್ರೀತ್‌ ಬೂಮ್ರಾ ಮತ್ತು ಮೊಹಮ್ಮದ್ ಶಮಿ ಹೀರೋಗಳಾಗಿ ಮುನುಗಿದ್ದಾರೆ. ಬ್ಯಾಟ್ಸ್‌ಮನ್‌ಗಳು ಕೈ ಕೊಟ್ಟಾಗ ತಂಡದ ರನ್ ಹೆಚ್ಚಿಸುವ ಜವಾಬ್ದಾರಿ ಹೊತ್ತ ಶಮಿ, ಬೂಮ್ರಾ ಅದ್ಭುತ ಜೊತೆಯಾಟ ನೀಡಿದ್ದಾರೆ. ಅದರಲ್ಲೂ ಶಮಿ ಭರ್ಜರಿ ಸಿಕ್ಸ್ ಮೂಲಕ ಅರ್ಧ ಶತಕ ಕೂಡ ಪೂರೈಸಿದ್ದಾರೆ.

ಐಪಿಎಲ್ ದ್ವಿತೀಯ ಹಂತಕ್ಕೆ ಅಫ್ಘಾನಿಸ್ತಾನದ ರಶೀದ್ ಖಾನ್, ಮೊಹಮ್ಮದ್ ನಬಿ ಲಭ್ಯಐಪಿಎಲ್ ದ್ವಿತೀಯ ಹಂತಕ್ಕೆ ಅಫ್ಘಾನಿಸ್ತಾನದ ರಶೀದ್ ಖಾನ್, ಮೊಹಮ್ಮದ್ ನಬಿ ಲಭ್ಯ

ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್‌ ದ್ವಿತೀಯ ಟೆಸ್ಟ್‌ನ ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶಮಿ, ಆಂಗ್ಲ ಸ್ಪಿನ್ನರ್ ಮೊಯೀನ್ ಅಲಿಯ ಎಸೆತಕ್ಕೆ ಸಿಕ್ಸ್ ಚಚ್ಚಿ ಗಮನ ಸೆಳೆದಿದ್ದಾರೆ. ಶಮಿ ಸಿಕ್ಸ್ ಬಾರಿಸಿರುವ ಈ ವಿಡಿಯೋ ಸಾಮಾಜಿಕ ಜಾಲಜಾಣದಲ್ಲಿ ವೈರಲ್ ಆಗಿದೆ.

ಕೆಳ ಕ್ರಮಾಂಕದಲ್ಲಿ ಬಂದು ಭರ್ಜರಿ ಬ್ಯಾಟಿಂಗ್‌ ನಡೆಸಿದ ಶಮಿ

ಕೆಳ ಕ್ರಮಾಂಕದಲ್ಲಿ ಬಂದು ಭರ್ಜರಿ ಬ್ಯಾಟಿಂಗ್‌ ನಡೆಸಿದ ಶಮಿ

ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ 5, ರೋಹಿತ್ ಶರ್ಮಾ 21, ಚೇತೇಶ್ವರ್ 45, ನಾಯಕ ವಿರಾಟ್ ಕೊಹ್ಲಿ 20, ಅಜಿಂಕ್ಯ ರಹಾನೆ 61, ರವೀಂದ್ರ ಜಡೇಜಾ 3, ರಿಷಭ್ ಪಂತ್ 22, ಇಶಾಂತ್ ಶರ್ಮಾ 16 ರನ್ ಬಾರಿಸಿದರು. ಆ ಬಳಿಕ 9ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದ ಮೊಹಮ್ಮದ್ ಶಮಿ ಮತ್ತು 10ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದ ಜಸ್‌ಪ್ರೀತ್‌ ಬೂಮ್ರಾ ಭರ್ಜರಿ ಬ್ಯಾಟಿಂಗ್‌ ನಡೆಸಿದರು. ಶಮಿ 70 ಎಸೆತಗಳಲ್ಲಿ 56 ರನ್ ಬಾರಿಸಿದ್ದರೆ, ಬೂಮ್ರಾ 64 ಎಸೆತಗಳಲ್ಲಿ 34 ರನ್ ಬಾರಿಸಿದರು. ಶಮಿ 56 ಎಸೆತಗಳಲ್ಲಿ 6 ಫೋರ್ಸ್, 1 ಸಿಕ್ಸರ್ ಸೇರಿತ್ತು. ಶಮಿ, ಬೂಮ್ರಾ ಬ್ಯಾಟಿಂಗ್‌ನಿಂದಲೇ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ 109.3 ಓವರ್‌ಗೆ 8 ವಿಕೆಟ್‌ ನಷ್ಟದಲ್ಲಿ 298 ರನ್ ಗಳಿಸಿತು. ನಾಯಕ ವಿರಾಟ್ ಕೊಹ್ಲಿ ಡಿಕ್ಲೇರ್ ಘೋಷಿಸಿದ್ದರಿಂದ ಇಂಗ್ಲೆಂಡ್ 272 ರನ್ ಗುರಿ ಬೆನ್ನಟ್ಟುತ್ತಿದೆ.

ಮೊಯೀನ್ ಅಲಿಗೆ ಸಿಕ್ಸ್ ಬಾರಿಸಿರುವ ವಿಡಿಯೋ ವೈರಲ್

106 ಓವರ್‌ ಎಸೆಯಲು ಇಂಗ್ಲೆಂಡ್ ಸ್ಪಿನ್ನರ್ ಮೊಯೀನ್ ಅಲಿ ಬಂದಾಗ ಮೊಹಮ್ಮದ್ ಶಮಿ 42 ರನ್ ಬಾರಿಸಿದ್ದರು. ಅಲಿ ಅವರ ಮೊದಲನೇ ಎಸೆತಕ್ಕೆ ಶಮಿ ಫೋರ್ ಬಾರಿಸಿದರು. ಅದರ ಮುಂದಿನ ಎಸೆತಕ್ಕೆ ಅಂದರೆ 105.2ನೇ ಎಸೆತಕ್ಕೆ ಶಮಿ ಬ್ಯಾಟ್ ಬೀಸಿದಾಗ ಬ್ಯಾಟ್ ನಡುವಿಗೆ ಸಿಕ್ಕ ಚೆಂಡು ಸಿಕ್ಸ್ ಗೆರೆ ದಾಟಿತು. ಆಗ ಶಮಿ ಬರೋಬ್ಬರಿ 92 ಮೀಟರ್ ದೂರದ ಸಿಕ್ಸ ಚಚ್ಚಲಿದ್ದರು. ಇದರೊಂದಿಗೆ ಟೆಸ್ಟ್‌ ಕ್ರಿಕೆಟ್‌ನ ದ್ವಿತೀಯ ಅರ್ಧ ಶತಕವನ್ನು ಶಮಿ ಸಿಕ್ಸ್ ಬಾರಿಸುವ ಮೂಲಕ ಪೂರೈಸಿದ್ದಾರೆ. ಇದೇ ಪಂದ್ಯದಲ್ಲಿ ಜಸ್‌ಪ್ರೀತ್‌ ಬೂಮ್ರಾ ಮತ್ತು ಶಮಿ ಅದ್ಭುತ ಜೊತೆಯಾಟಕ್ಕಾಗಿಯೂ ದಾಖಲೆ ನಿರ್ಮಿಸಿದ್ದಾರೆ. ಇಬ್ಬರೂ 90 ರನ್‌ಗಳ ಜೊತೆಯಾಟ ನೀಡಿದ ಬಳಿಕ ಕೊಹ್ಲಿ ಡಿಕ್ಲೇರ್ ಘೋಷಿಸಿದರು. ಅಂದ್ಹಾಗೆ ಇದಕ್ಕೂ ಮುನ್ನ ಶಮಿ 2014ರಲ್ಲಿ ನ್ಯಾಟಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯದಲ್ಲಿ ಇದೇ ಇಂಗ್ಲೆಂಡ್ ವಿರುದ್ಧ 51 ರನ್ ಬಾರಿಸಿದ್ದರು. ಇದು ಟೆಸ್ಟ್‌ನಲ್ಲಿ ಶಮಿ ಬಾರಿಸಿದ್ದ ಮೊದಲನೇ ಶತಕ.

ಬ್ಯಾಟಿಂಗ್‌ನಲ್ಲಿ ವಿಶೇಷ ದಾಖಲೆ ಬರೆದ ಶಮಿ

ಬ್ಯಾಟಿಂಗ್‌ನಲ್ಲಿ ವಿಶೇಷ ದಾಖಲೆ ಬರೆದ ಶಮಿ

ಲಾರ್ಡ್ಸ್ ಸ್ಟೇಡಿಯಂನಲ್ಲಿ ಮೊಹಮ್ಮದ್ ಶಮಿ ವಿಶಿಷ್ಠ ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿಗಿಂತಲೂ ಹೆಚ್ಚಿಗೆ ರನ್ ಗಳಿಸಿದ ವಿಶೇಷ ದಾಖಲೆಗೆ ಶಮಿ ಪಾತ್ರರಾಗಿದ್ದಾರೆ. ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶಮಿ ಬಾರಿಸಿರುವ 56 ರನ್, ಲಾರ್ಡ್ಸ್‌ನಲ್ಲಿ ಇನ್ನಿಂಗ್ಸ್‌ ಒಂದರಲ್ಲಿ ಸಚಿನ್ ತೆಂಡೂಲ್ಕರ್ (ಭಾರತ), ವಿರಾಟ್ ಕೊಹ್ಲಿ (ಭಾರತ), ರಿಕಿ ಪಾಂಟಿಂಗ್‌ (ಆಸ್ಟ್ರೇಲಿಯಾ), ಜ್ಯಾಕ್ ಕ್ಯಾಲೀಸ್ (ದಕ್ಷಿಣ ಆಫ್ರಿಕಾ), ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ), ಚೇತೇಶ್ವರ್ ಪೂಜಾರ (ಭಾರತ) ಬಾರಿಸಿರುವ ರನ್‌ಗಿಂತ ಹೆಚ್ಚೆನಿಸಿದೆ. 53 ಟೆಸ್ಟ್‌ ಪಂದ್ಯಗಳನ್ನಾಡಿರುವ 584 ರನ್, 191 ವಿಕೆಟ್ ದಾಖಲೆ ಹೊಂದಿದ್ದಾರೆ. ಸೋಮವಾರದ ಪಂದ್ಯದಲ್ಲಿ ಶಮಿಯ 56 (70 ಎಸೆತ) ರನ್‌ನಲ್ಲಿ 6 ಫೋರ್ಸ್, 1 ಸಿಕ್ಸರ್ ಕೂಡ ಸೇರಿತ್ತು. ಮತ್ತೊಬ್ಬ ಬೌಲರ್ ಬೂಮ್ರಾ ಕೂಡ 64 ಎಸೆತಗಳಲ್ಲಿ 34 ರನ್ ಕೊಡುಗೆ ನೀಡಿದ್ದರು.

Story first published: Monday, August 16, 2021, 21:26 [IST]
Other articles published on Aug 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X