ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಟಿ20 ಸರಣಿಗೆ ಮತ್ತೆ ವರುಣ್ ಚಕ್ರವರ್ತಿ ಅನುಮಾನ!

England vs India: Varun Chakravarthy unlikely for T20Is against England

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ವರುಣ್ ಚಕ್ರವರ್ತಿ ಅನುಮಾನ ಎನ್ನಲಾಗುತ್ತಿದೆ. ಈ ಮೂಲಕ ರಾಷ್ಟ್ರೀಯ ತಂಡಕ್ಕಾಗಿ ಬಂದ ಎರಡನೇ ಅವಕಾಶವನ್ನೂ ಕಳೆದುಕೊಳ್ಳುವ ಸಂಕಷ್ಟದಲ್ಲಿ ವರುಣ್ ಚಕ್ರವರ್ತಿ ಇದ್ದಾರೆ. ಫಿಟ್‌ನೆಸ್ ಪರೀಕ್ಷೆಯಲ್ಲಿ ವಿಫಲವಾದ ಕಾರಣ ವರುಣ್ ಚಕ್ರವರ್ತಿ ಈ ಬಾರಿಯ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆಗಳು ಕಂಡುಬರುತ್ತಿದೆ.

ಇತ್ತೀಚೆಗಷ್ಟೇ ಬಿಸಿಸಿಐ ರಾಷ್ಟ್ರೀಯ ತಂಡದ ಆಟಗಾರರ ಫಿಟ್‌ನೆಸ್ ಪರೀಕ್ಷೆಯಲ್ಲಿ ಹೊಸ ಮಾನದಂಡವನ್ನು ನೀಡಿತ್ತು. ಆಟಗಾರರು 8:30 ನಿಮಿಷದಲ್ಲಿ ಎರಡು ಕಿಲೋ ಮೀಟರ್ ಓಟವನ್ನು ಪೂರ್ಣಗೊಳಿಸಬೇಕಿತ್ತು. ಅಥವಾ ಯೋ ಯೋ ಪರೀಕ್ಷೆಯಲ್ಲಿ 17.1 ಅಂಕವನ್ನು ಗಳಿಸಬೇಕಿದೆ. ಈ ಪರೀಕ್ಷೆಯಲ್ಲಿ ವರುಣ್ ಚಕ್ರವರ್ತಿ ವಿಫಲವಾಗಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಕ್ರಿಕ್ ಬಝ್ ವರದಿ ಮಾಡಿದೆ.

ಐಪಿಎಲ್: ಟಾಮ್ ಬ್ಯಾಂಟನ್ ಐಪಿಎಲ್ ಬಿಡಲಿ ಎಂದ ಮೈಕಲ್ ವಾನ್ಐಪಿಎಲ್: ಟಾಮ್ ಬ್ಯಾಂಟನ್ ಐಪಿಎಲ್ ಬಿಡಲಿ ಎಂದ ಮೈಕಲ್ ವಾನ್

ವರುಣ್ ಚಕ್ರವರ್ತಿಗೆ ಎರಡನೇ ಅವಕಾಶ

ವರುಣ್ ಚಕ್ರವರ್ತಿಗೆ ಎರಡನೇ ಅವಕಾಶ

ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡುವ ಮೂಲಕ ಆಯ್ಕೆಗಾರರ ಗಮನ ಸೆಳೆದು ಬಳಿಕ ಆಸ್ಟ್ರೇಲಿಯಾ ಪ್ರವಾಸಕ್ಕೆ ವರುಣ್ ಚಕ್ರವರ್ತಿ ಆಯ್ಕೆಯಾಗಿದ್ದರು. ಆದರೆ ಪ್ರವಾಸಕ್ಕೂ ಮುನ್ನವೇ ವರುಣ್ ಚಕ್ರವರ್ತಿ ಗಾಯಗೊಂಡು ಪ್ರವಾಸದಿಂದ ಹೊರಬಿದ್ದಿದ್ದರು. ಇದೀಗ ಎರಡನೇ ಅವಕಾಶ ವರುಣ್ ಚಕ್ರವರ್ತಿಗೆ ದೊರಕಿದ್ದರೂ ಈಗ ಆ ಅವಕಾಶವೂ ಕಳೆದುಕೊಳ್ಳುವ ಭೀತಿಯನ್ನು ವರುಣ್ ಚಕ್ರವರ್ತಿ ಎದುರಿಸುತ್ತಿದ್ದಾರೆ.

ವರುಣ್ ಚಕ್ರವರ್ತಿ ಪ್ರತಿಕ್ರಿಯೆ

ವರುಣ್ ಚಕ್ರವರ್ತಿ ಪ್ರತಿಕ್ರಿಯೆ

ಇನ್ನು ಈ ಬಗ್ಗೆ ವರುಣ್ ಚಕ್ರವರ್ತಿ ಬಳಿ ಪ್ರತಿಕ್ರಿಯೆಯನ್ನು ಕ್ರಿಕ್ ಬಝ್ ಪಡೆದುಕೊಂಡಿದೆ. ಇದರಲ್ಲಿ ವರುಣ್ ಚಕ್ರವರ್ತಿ "ನನಗೆ ಈ ಬಗ್ಗೆ ಈವರೆಗೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ. ವರುಣ್ ಚಕ್ರವರ್ತಿ ಸದ್ಯ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಜೊತೆಗೆ ಮುಂಬೈನಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.

ಮಾರ್ಚ್ 12ರಿಂದ ಸರಣಿ ಆರಂಭ

ಮಾರ್ಚ್ 12ರಿಂದ ಸರಣಿ ಆರಂಭ

ಇಂಗ್ಲೆಂಡ್ ತಂಡದ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ ಮಾರ್ಚ್ 12ರಿಂದ ಆರಂಭವಾಗಲಿದೆ. ಎಲ್ಲಾ ಪಂದ್ಯಗಳು ಕೂಡ ಹೈದರಾಬಾದ್‌ನಲ್ಲಿ ನೂತನವಾಗಿ ನಿರ್ಮಾಣವಾಗಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

Story first published: Monday, March 1, 2021, 7:32 [IST]
Other articles published on Mar 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X