ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳೆಯರ ಏಕದಿನ ಸರಣಿ: ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಜಯ

England vs India Women: India won the match in series finale by 4 wickets

ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಭಾರತ ಅಂತಿಮ ಪಂದ್ಯದಲ್ಲಿ ಗೆದ್ದು ಬೀಗಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿದೆ. ಈ ಪಂದ್ಯದಲ್ಲಿಯೂ ನಾಯಕಿ ಮಿಥಾಲಿರಾಜ್ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು.

ಈ ಪಂದ್ಯದಲ್ಲಿ ಮೊದಲ ಬಾರಿಗೆ ಭಾರತದ ಮಹಿಳಾ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಇಂಗ್ಲೆಂಡ್ ಆರಂಭಿಕ ವಿಕೆಟ್‌ಅನ್ನು ಒಂದು ರನ್‌ಗಳಿಸುವಷ್ಟರಲ್ಲಿ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್‌ಗೆ ವಿನ್‌ಫೀಲ್ಡ್ ಹಿಲ್ ಹಾಗೂ ನಾಯಕಿ ನೈಟ್ ಅರ್ಧಶತಕದ ಜೊತೆಯಾಟವನ್ನು ಆಡಿದರು. ನಂತರ ಸೈವರ್ ಕೂಡ ಇಂಗ್ಲೆಂಡ್‌ ಪರವಾಗಿ ಉತ್ತಮ ಪ್ರದರ್ಶನವನ್ನು ನೀಡಿದರು.

2ನೇ ಹಂತದ ಐಪಿಎಲ್ 2021ರ ಪಂದ್ಯಗಳಲ್ಲಿ ಸ್ಟೀವ್ ಸ್ಮಿತ್ ಆಡುತ್ತಿಲ್ಲ!2ನೇ ಹಂತದ ಐಪಿಎಲ್ 2021ರ ಪಂದ್ಯಗಳಲ್ಲಿ ಸ್ಟೀವ್ ಸ್ಮಿತ್ ಆಡುತ್ತಿಲ್ಲ!

ಆದರೆ ಅದಾದ ನಂತರ ಇಂಗ್ಲೆಂಡ್‌ನ ಯಾವ ಬ್ಯಾಟರ್‌ಗಳು ಕೂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದೆ 47 ಓವರ್‌ಗಳಲ್ಲಿ 219 ರನ್‌ಗಳಿಗೆ ಆಲೌಟ್ ಆಗಿತ್ತು. ಭಾರತದ ಪರವಾಗಿ ದೀಪ್ತಿ ಶರ್ಮಾ ಮೂರು ವಿಕೆಟ್ ಕಿತ್ತು ಮಿಂಚಿದರೆ ಉಳಿದ ಎಲ್ಲಾ ಬೌಲರ್‌ಗಳು ಕೂಡ ತಲಾ ಒಂದು ವಿಕೆಟ್ ಕಿತ್ತರು.

ಇನ್ನು ಇಂಗ್ಲೆಂಡ್ ಮಹಿಳೆಯರ ತಂಡ ನೀಡಿದ 220 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ವನಿತೆಯರ ತಂಡಕ್ಕೆ ಉತ್ತಮ ಆರಂಭಿಕ ಜೊತೆಯಾಟ ದೊರೆಯಿತು. ಮೊದಲ ವಿಕೆಟ್‌ಗೆ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ 46 ರನ್‌ಗಳ ಕೊಡುಗೆ ನೀಡಿದರು. 19 ರನ್‌ಗಳಿಸಿದ ಶಫಾಲಿ ಕೇಟ್ ಕ್ರಾಸ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಜಮೀಮಾ ರೋಡ್ರಿಗಸ್ ಕೂಡ 4 ನರ್‌ಗಳಿಸಿ ಫೆವಿಲಿಯನ್ ಸೇರಿಕೊಂಡರು.

Ravi Shastri ಸ್ಥಾನ ತುಂಬಬಲ್ಲ ಈ ಮಾಜಿ ಆಟಗಾರರಲ್ಲಿ ಯಾರು ಬೆಸ್ಟ್? | Team Indian Coach | Oneindia Kannada

ನಂತರ ನಾಯಕಿ ಮಿಥಾಲಿ ರಾಜ್ ಕ್ರೀಸ್‌ಗೆ ಇಳಿದು ತಮ್ಮ ಅದ್ಭುತ ಆಟವನ್ನು ಪ್ರದರ್ಶಿಸಿದರು. ಕೊನೆಯವರೆಗೂ ಹೋರಾಟವನ್ನು ನಡೆಸಿದ ಮಿಥಾಲಿ ರಾಜ್ ಭಾರತ ತಂಡಕ್ಕೆ ಗೆಲುವನ್ನು ಖಾತ್ರಿಪಡಿಸಿದರು. ಇನ್ನೂ 3.3 ಓವರ್‌ಗಳು ಬಾಕಿಯಿರುವಂತೆಯೇ ಇಂಗ್ಲೆಂಡ್ ನೀಡಿದ ಗುರಿಯನ್ನು ಮೀರಿ ನಿಂತಿತು. ಈ ಮೂಲಕ ಭಾರತ ಅಂತಿಮ ಪಂದ್ಯವನ್ನು ಗೆದ್ದುಕೊಂಡಿದೆ. ಮಿಥಾಲಿ ರಾಜ್ ಈ ಪಂದ್ಯದಲ್ಲಿ ಅಜೇಯ 75 ರನ್‌ ಬಾರಿಸಿ ಮಿಂಚಿದರು.

Story first published: Sunday, July 4, 2021, 9:07 [IST]
Other articles published on Jul 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X