ಸೌತಾಂಪ್ಟನ್: ಸೌತಾಂಪ್ಟನ್ನ ರೋಸ್ಬೌಲ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಮತ್ತು ಐರ್ಲೆಂಡ್ ಮಧ್ಯೆ ದ್ವಿತೀಯ ಏಕದಿನ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದಿರುವ ಐರ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ. ಇಂಗ್ಲೆಂಡ್ಗೆ ಪ್ರವಾಸ ಬಂದಿರುವ ಆಂಡ್ರ್ಯೂ ಬಲ್ಬಿರ್ನಿ ಪಡೆ ಮೊದಲ ಏಕದಿನ ಪಂದ್ಯದಲ್ಲಿ ಸೋತಿತ್ತು.
ಅಕ್ಟೋಬರ್ನಲ್ಲಿ ಭಾರತೀಯ ಕ್ರಿಕೆಟನ್ನು ಕೊರೊನಾ ಹೆಚ್ಚು ಕಾಡಲಿದೆ: ದ್ರಾವಿಡ್
ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲಿ ವೇಗಿ ಡೇವಿಡ್ ವಿಲ್ಲಿ ನೆರವಿನಿಂದ ಆಂಗ್ಲರು 7 ವಿಕೆಟ್ ಸುಲಭ ಗೆಲುವನ್ನಾಚರಿಸಿದ್ದರು. ಸರಣಿಯಲ್ಲೀಗ ಇಂಗ್ಲೆಂಡ್ 1-0ಯ ಮುನ್ನಡೆಯಲ್ಲಿರುವುದರಿಂದ ಇಂದಿನ ಪಂದ್ಯದ ಗೆಲುವು ಐರ್ಲೆಂಡ್ ಪಾಲಿಗೆ ಮಹತ್ವದ್ದಾಗಿದೆ.
ಇಂಗ್ಲೆಂಡ್ vs ಐರ್ಲೆಂಡ್, 1ನೇ ಏಕದಿನ, Live ಸ್ಕೋರ್ಕಾರ್ಡ್
ಇಂಗ್ಲೆಂಡ್ ತಂಡ: ಜೇಸನ್ ರಾಯ್, ಜಾನಿ ಬೈರ್ಸ್ಟೋವ್ (ವಿಕೆ), ಜೇಮ್ಸ್ ವಿನ್ಸ್, ಟಾಮ್ ಬ್ಯಾಂಟನ್, ಇಯೊನ್ ಮೋರ್ಗಾನ್ (ಸಿ), ಸ್ಯಾಮ್ ಬಿಲ್ಲಿಂಗ್ಸ್, ಮೊಯೀನ್ ಅಲಿ, ಡೇವಿಡ್ ವಿಲ್ಲಿ, ಆದಿಲ್ ರಶೀದ್, ರೀಸ್ ಟೋಪ್ಲಿ, ಸಾಕಿಬ್ ಮಹಮೂದ್.
330 ರನ್ ಗುರಿ, ಭಾರತ 0/1: ಪಾಕ್ ವಿರುದ್ಧದ ರೋಚಕ ಪಂದ್ಯ ನೆನೆದ ಗಂಭೀರ್
ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್, ಗರೆಥ್ ಡೆಲಾನಿ, ಆಂಡ್ರ್ಯೂ ಬಾಲ್ಬಿರ್ನಿ (ಸಿ), ಹ್ಯಾರಿ ಟೆಕ್ಟರ್, ಕೆವಿನ್ ಒ ಬ್ರಿಯಾನ್, ಲಾರ್ಕಾನ್ ಟಕರ್ (ವಿಕೆ), ಕರ್ಟಿಸ್ ಕ್ಯಾಂಪರ್, ಸಿಮಿ ಸಿಂಗ್, ಆಂಡಿ ಮೆಕ್ಬ್ರೈನ್, ಜೋಶುವಾ ಲಿಟಲ್, ಕ್ರೇಗ್ ಯಂಗ್.