ಇಂಗ್ಲೆಂಡ್ vs ಐರ್ಲೆಂಡ್ Live ಸ್ಕೋರ್: ಆಘಾತ ನೀಡಿ ಆಘಾತ ಅನುಭವಿಸಿದ ಐರ್ಲೆಂಡ್

ಸೌಥಾಂಪ್ಟನ್‌ನ ರೋಸ್‌ಬೌಲ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಹಾಗೂ ಐರ್ಲೆಂಡ್ ಮೂರನೇ ಪಂದ್ಯದಲ್ಲಿ ಮುಖಾಮುಖಿಯಾಗಿದೆ. ಮೊದಲೆರಡು ಪಂದ್ಯಗಳನ್ನು ಗೆದ್ದು ಇಂಗ್ಲೆಂಡ್ ಸರಣಿಯನ್ನು ವಶಪಡಿಸಿಕೊಂಡಿದ್ದು ಇಂದಿನ ಪಮದ್ಯ ಕೇವಲ ಔಪಚಾರಿಕವಾಗಿದೆ. ಆದರೆ ಕೊನೆಯ ಪಂದ್ಯದಲ್ಲಾದರೂ ಗೆದ್ದು ವೈಟ್‌ವಾಶ್ ಅವಮಾನದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಐರ್ಲೆಂಡ್‌ಗೆ ಆರಂಭಿಕ ಯಶಸ್ಸಿನ ನಂತರ ಹಿನ್ನಡೆಯುಂಟಾಗಿದೆ.

ಟಾಸ್ ಗೆದ್ದು ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿದ ಐರ್ಲೆಂಡ್ ಆರಂಭದಲ್ಲಿ ಕ್ರಿಕೆಟ್ ಜನಕರಿಗೆ ಆಘಾತವನ್ನು ನೀಡಿದರು. ಆದರೆ ಮುಂದೆ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಐರ್ಲೆಂಡ್ ತಂಡಕ್ಕೆ ಭಾರೀ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. ಈ ಮೂಲಕ ಇಂಗ್ಲೆಂಡ್ ದೊಡ್ಡ ಮೊತ್ತವನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು.

Live ಸ್ಕೋರ್ ಪಟ್ಟಿ ಹೀಗಿದೆ:

1
46770

ನಾಯಕನಾಗಿ ಎಂಎಸ್ ಧೋನಿ ದಾಖಲೆ ಮುರಿದ ಇಯಾನ್ ಮಾರ್ಗನ್

14ರನ್‌ಗೆ ಇಂಗ್ಲೆಂಡ್‌ನ ಎರಡು ಪ್ರಮುಖ ವಿಕೆಟ್ ಪಡೆಯುವಲ್ಲಿ ಐರ್ಲೆಂಡ್ ಬೌಲರ್‌ಗಳು ಯಶಸ್ವಿಯಾದರು. ಈ ಮೂಲಕ ಇಂಗ್ಲೆಂಡ್ ತಂಡವನ್ನು ಬೇಗನೆ ಕಟ್ಟಿಹಾಕುವ ಉತ್ಸಾಹದಲ್ಲಿ ಐರಿಷ್ ಪಡೆಯಿತ್ತು. ಆದರೆ ಇಯಾನ್ ಮಾರ್ಗನ್ ಎಲ್ಲಾ ಪ್ರಯತ್ನವನ್ನು ಬುಡಮೇಲು ಮಾಡಿದರು. ನಾಲ್ಕನೇ ಕ್ರಮಾಂಕದಲ್ಲಿ ಬಂದ ಮಾರ್ಗನ್ ಕೇವಲ 84 ಎಸೆತಗಳಲ್ಲಿ 106 ರನ್ ಸಿಡಿಸಿ ಮಿಂಚುಹರಿಸಿದರು.

ಐರ್ಲೆಂಡ್ ತಂಡದ ಪರವಾಗಿ ಕ್ರೇಗ್ ಯಂಗ್ 3 ವಿಕೆಟ್ ಪಡೆದರೆ ಆಲ್‌ರೌಂಡರ್ ಕರ್ಟೀಸ್ ಕ್ಯಾಂಫೈರ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಮ್‌ಬ್ಯಾಕ್‌ ಬಳಿಕ ಧೋನಿ, ಕೊಹ್ಲಿ ಬೆಂಬಲ ಹೇಗಿತ್ತು: ವಿವರವಾಗಿ ಬಿಚ್ಚಿಟ್ಟ ಯುವರಾಜ್ ಸಿಂಗ್

ಐರ್ಲೆಂಡ್ ಆಡುವ ಬಳಗ: ಪಾಲ್ ಸ್ಟಿರ್ಲಿಂಗ್, ಗರೆಥ್ ಡೆಲಾನಿ, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಹ್ಯಾರಿ ಟೆಕ್ಟರ್, ಕೆವಿನ್ ಒ ಬ್ರಿಯಾನ್, ಲಾರ್ಕಾನ್ ಟಕರ್ (ವಿಕೆಟ್ ಕೀಪರ್), ಕರ್ಟಿಸ್ ಕ್ಯಾಂಪರ್, ಮಾರ್ಕ್ ಅಡೈರ್, ಆಂಡಿ ಮೆಕ್‌ಬ್ರೈನ್, ಜೋಶುವಾ ಲಿಟಲ್, ಕ್ರೇಗ್ ಯಂಗ್

ಇಂಗ್ಲೆಂಡ್ ಆಡುವ ಬಳಗ: ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್ (ವಾರ), ಜೇಮ್ಸ್ ವಿನ್ಸ್, ಇಯೊನ್ ಮೋರ್ಗಾನ್ (ಸಿ), ಟಾಮ್ ಬ್ಯಾಂಟನ್, ಸ್ಯಾಮ್ ಬಿಲ್ಲಿಂಗ್ಸ್, ಮೊಯೀನ್ ಅಲಿ, ಡೇವಿಡ್ ವಿಲ್ಲಿ, ಆದಿಲ್ ರಶೀದ್, ಟಾಮ್ ಕುರ್ರನ್, ಸಾಕಿಬ್ ಮಹಮೂದ್

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, August 4, 2020, 22:06 [IST]
Other articles published on Aug 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X