ಪಾಕಿಸ್ತಾನ vs ಇಂಗ್ಲೆಂಡ್ ಮೊದಲ ಟೆಸ್ಟ್: ಸಂಭಾವ್ಯ ತಂಡ, ನೇರಪ್ರಸಾರ, ಸಮಯ

ಐರ್ಲೆಂಡ್ ವಿರುದ್ಧದ ಏಕದಿನ ಸರಣಿ ಅಂತ್ಯ ಗೊಂದ ಮರು ದಿನವೇ ಇಂಗ್ಲೆಂಡ್ ಮತ್ತೊಂದು ಸರಣಿಗೆ ಸಿದ್ಧವಾಗಿದೆ. ಪಾಕಿಸ್ತಾನದ ವಿರುದ್ಧ ಇಂದಿನಿಂದ ಆರಂಭವಾಗಲಿದ್ದು ಎರಡೂ ತಂಡಗಳು ಉತ್ಸಾಹದಲ್ಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಗೆದ್ದು ಬೀಗಿರುವ ಇಂಗ್ಲೆಂಡ್ ಪಾಕಿಸ್ತಾನದ ವಿರುದ್ಧವೂ ಅದೇ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದೆ.

ಮತ್ತೊಂದೆಡೆ ಪಾಕಿಸ್ತಾನ ತಂಡ ಕಳೆದ ಒಂದೂವರೆ ತಿಂಗಳಿನಿಂದ ಇಂಗ್ಲೆಂಡ್‌ನಲ್ಲೇ ಬೀಡುಬಿಟ್ಟಿದ್ದು ಕಠಿಣ ಅಭ್ಯಾಸವನ್ನು ನಡೆಸಿದೆ. ಈ ಮೂಲಕ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಮುನ್ನಡೆ ಪಡೆಯುವ ಹಂಬಲದಲ್ಲಿ ಪಾಕ್ ತಂಡವಿದೆ. ಪಾಕಿಸ್ತಾನದ ಬಲಿಷ್ಠ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಯಾವ ರೀತಿ ಉತ್ತರವನ್ನು ನೀಡುತ್ತಾರೆ ಎಂಬುದು ಈ ಪಂದ್ಯದ ಕುತೂಹಲವಾಗಿದೆ.

ವಿಶ್ವಕ್ರಿಕೆಟ್‌ನಲ್ಲಿ ಮತ್ತೊಂದು ಬೃಹತ್ ಚೇಸಿಂಗ್: ಇಂಗ್ಲೆಂಡ್ ವಿರುದ್ಧ 329 ರನ್ ಬೆನ್ನಟ್ಟಿ ಗೆದ್ದ ಐರ್ಲೆಂಡ್!

ಪಂದ್ಯದ ನೇರಪ್ರಸಾರ ಹಾಗೂ ಸಮಯ

ಪಂದ್ಯದ ನೇರಪ್ರಸಾರ ಹಾಗೂ ಸಮಯ

ಮ್ಯಾಂಚೆಸ್ಟರ್‌ನ ಓಲ್ಡ್‌ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಇಂದಿನ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ಭಾರತದಲ್ಲಿ ಸೋನಿ ಟೆನ್ ನೆಟ್‌ವರ್ಕ್‌ನಲ್ಲಿ ಈ ಪಂದ್ಯದದ ನೇರಪ್ರಸಾರವನ್ನು ಕಾಣಬಹುದಾಗಿದೆ.

ಇಂಗ್ಲೆಂಡ್ ಸಂಭಾವ್ಯ ತಂಡ

ಇಂಗ್ಲೆಂಡ್ ಸಂಭಾವ್ಯ ತಂಡ

ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಜಾಕ್ ಕ್ರಾಲೆ, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಜೋಫ್ರಾ ಆರ್ಚರ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್

ಪಾಕಿಸ್ತಾನ ಸಂಭಾವ್ಯ ತಂಡ

ಪಾಕಿಸ್ತಾನ ಸಂಭಾವ್ಯ ತಂಡ

ಶಾನ್ ಮಸೂದ್, ಅಬಿದ್ ಅಲಿ, ಅಜರ್ ಅಲಿ (ನಾಯಕ), ಬಾಬರ್ ಆಜಮ್, ಅಸಾದ್ ಶಫಿಕ್, ಫವಾದ್ ಆಲಂ / ಶಾದಾಬ್ ಖಾನ್ / ಕಾಶಿಫ್ ಭಟ್ಟಿ, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಯಾಸಿರ್ ಶಾ, ಶಾಹೀನ್ ಶಾ ಅಫ್ರಿದಿ, ನಸೀಮ್ ಶಾ, ಮೊಹಮ್ಮದ್ ಅಬ್ಬಾಸ್

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, August 5, 2020, 10:05 [IST]
Other articles published on Aug 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X