ಇಂಗ್ಲೆಂಡ್ vs ಪಾಕಿಸ್ತಾನ: ಮೊದಲನೇ ಟೆಸ್ಟ್‌ ವೇಳೆಯ ಹವಾಮಾನ ವರದಿ

ಮ್ಯಾನ್ಚೆಸ್ಟರ್, ಆಗಸ್ಟ್ 4: ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಗೆದ್ದಿರುವ ಇಂಗ್ಲೆಂಡ್ ತಂಡ ಆಗಸ್ಟ್ 5ರಿಂದ ಪಾಕಿಸ್ತಾನ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇಂಗ್ಲೆಂಡ್-ವೆಸ್ಟ್ ಇಂಡೀಸ್ ಸರಣಿಯ ಆರಂಭದಲ್ಲಿ ಕೆರಿಬಿಯನ್ನರು 1-0ಯ ಮುನ್ನಡೆಯಲ್ಲಿದ್ದರಾದರೂ ಆ ಬಳಿಕ ಎರಡೂ ಪಂದ್ಯಗಳನ್ನು ಗೆದ್ದ ಆಂಗ್ಲರು ಸರಣಿ ವಶಪಡಿಸಿಕೊಂಡಿದ್ದರು.

ಟೀಮ್ ಇಂಡಿಯಾದ 10 ಖ್ಯಾತ ಕ್ರಿಕೆಟಿಗರ ಪ್ರೀತಿಯ ಸಹೋದರಿಯರಿವರು

ವೆಸ್ಟ್ ಇಂಡೀಸ್‌ಗೆ ಹೋಲಿಸಿದರೆ ಪಾಕಿಸ್ತಾನ ತಂಡ ಇಂಗ್ಲೆಂಡ್‌ಗೆ ಹೆಚ್ಚಿನ ಸವಾಲೊಡ್ಡಲಿದೆ. ಯಾಕೆಂದರೆ ಪಾಕ್ ತಂಡಕ್ಕೆ ಯೂನಿಸ್ ಖಾನ್ ಮತ್ತು ಮಿಸ್ಬಾ ಉಲ್ ಹಕ್ ಕೋಚಿಂಗ್ ಬಲವಿದೆ. ಜೊತೆಗೆ ತಂಡದಲ್ಲಿ ಅಝರ್ ಅಲಿ, ಬಾಬರ್ ಅಝಾಮ್, ಅಸಾದ್ ಶಾಫಿಕ್ ಮತ್ತು ಅಬಿದ್ ಅಲಿ ಅಂಥ ಉತ್ತಮ ಬ್ಯಾಟ್ಸ್‌ಮನ್‌ಗಳಿದ್ದಾರೆ, ನಸೀಮ್ ಶಾ, ಶಾಹೀನ್ ಅಫ್ರಿದಿ ಅವರಂಥ ಬೌಲರ್‌ಗಳಿದ್ದಾರೆ.

ವಿರಾಟ್ ಕೊಹ್ಲಿ-ರವಿಶಾಸ್ತ್ರಿ ಜೋಡಿಯ ಯಶಸ್ಸಿಗೆ ಕಾರಣ ಹೇಳಿದ ಆಶಿಶ್ ನೆಹ್ರಾ

ಇಂಗ್ಲೆಂಡ್-ಪಾಕ್ ಮೊದಲ ಟೆಸ್ಟ್ ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇತ್ತಂಡಗಳ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಲಿದೆಯಾ? ಅಂಥ ತೊಂದರೆಯೇನಿಲ್ಲ ಅನ್ನುತ್ತದೆ ಮ್ಯಾನ್ಚೆಸ್ಟರ್ ಹವಾಮಾನ ವರದಿ. ಪಂದ್ಯಗಳು ಭಾರತೀಯ ಕಾಲಮಾನ 3.30 pmನಂತೆ ಆರಂಭವಾಗಲಿದೆ.

ಬಿಸಿಸಿಐ ಕೋವಿಡ್-19 ಟಾಸ್ಕ್‌ಫೋರ್ಸ್‌ನಲ್ಲಿ ಗ್ರೇಟ್ ವಾಲ್ ರಾಹುಲ್ ದ್ರಾವಿಡ್

ಮ್ಯಾನ್ಚೆಸ್ಟರ್ ಹವಾಮಾನ ವರದಿಯ ಪ್ರಕಾರ, ಆಗಸ್ಟ್ 5ರ ಬುಧವಾರ ಮಳೆಯ ಸಾಧ್ಯತೆ 55 ಶೇ. ಇದೆ. ಆದರೆ ಈ ದಿನ ಮಳೆ ಬೆಳಗ್ಗೆ ಸುರಿಯುತ್ತದೆ. ಪಂದ್ಯ ಆರಂಭಗೊಳ್ಳುವ ವೇಳೆ ಬಿಸಿಲಿರಲಿದೆ. ಮೊದಲ ದಿನ ಮಳೆಯ ಅಡಚಣೆಯೇ ಇಲ್ಲದೆ ಆಟ ಮುಂದುವರೆಯುವುದನ್ನು ನಿರೀಕ್ಷಿಸಲಾಗಿದೆ.

ಐಪಿಎಲ್‌ 2020: ತಡವಾಗಿ ಯುಎಇಗೆ ಪ್ರಯಾಣಿಸಲಿವೆ ತಂಡಗಳು

ಎರಡನೇ ದಿನದಾಟವಾದ ಗುರುವಾರ (ಆಗಸ್ಟ್ 6) ಕೂಡ ಮುಂಜಾನೆ ಮಳೆಯಾಗಲಿದೆ. ಈ ದಿನ ಮಳೆಯ ಸಾದ್ಯತೆ 40 ಶೇ. ಇದೆ. ಆದರೆ ಬಹುತೇಕ ಆಟದ ವೇಳೆ ಬಿಸಿಲು ಇರಲಿದೆ. ಇನ್ನು ಆಗಸ್ಟ್ 7, 8, 9ರಂದು ಮಳೆಯ ಸಾಧ್ಯತೆ ಕ್ರಮವಾಗಿ 16 ಶೇ., 2 ಶೇ. ಮತ್ತು 5 ಶೇ. ಇರಲಿದೆ. ಇದರರ್ಥ ಈ ಮೂರೂ ದಿನ ಮಳೆಯ ಸಾಧ್ಯತೆ ತೀರಾ ಕಮ್ಮಿ. ಬಹುತೇಕ ಬಿಸಿಲು ಇರಲಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, August 4, 2020, 16:02 [IST]
Other articles published on Aug 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X