ಇಂಗ್ಲೆಂಡ್vs ಪಾಕ್ ಟೆಸ್ಟ್ ಹೈಲೈಟ್ಸ್: ಕುತೂಹಕಾರಿ ಘಟ್ಟದಲ್ಲಿ ಮೊದಲ ಪಂದ್ಯ

ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶಿಸಿದ ಬಳಿಕ ಪಾಕಿಸ್ತಾನ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಮುಗ್ಗರಿಸಿದೆ. ಇಂಗ್ಲೆಂಡ್ ಬೌಲಿಂಗ್ ದಾಳಿಕೆ ಪಾಕಿಸ್ತಾನದ ಯಾವ ಬ್ಯಾಟ್ಸ್‌ಮನ್‌ ಕೂಡ ತಕ್ಕ ಉತ್ತರವನ್ನು ನೀಡುವಲ್ಲಿ ಯಶಸ್ವಿಯಾಗಿಲ್ಲ.

ಮೂರವೇ ದಿನ ಆಟದ ಅಂತ್ಯಕ್ಕೆ ಪಾಕಿಸ್ತಾನ ತನ್ನ 8 ವಿಕೆಟ್ ಕಳೆದುಕೊಂಡು 137 ರನ್ ಗಳಿಸಿದೆ. ಇಂಗ್ಲೆಂಡ್‌ನ ಬೌಲರ್‌ಗಳಾದ ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್, ಹಾಗೂ ಬೆನ್ ಸ್ಟೋಕ್ಸ್ ತಲಾ 2 ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು. ಡಾಮಿನಿಕ್ ಬೆಸ್ 1 ವಿಕೆಟ್ ಪಡೆದರು. ಈ ಕುಸಿತ ಹೊರತಾಗಿಯೂ ಮೊದಲ ಇನ್ನಿಂಗ್ಸ್‌ದ ಉತ್ತಮ ಮುನ್ನಡೆಯಿಂದಾಗಿ ಪಾಕಿಸ್ತಾನ ಸದ್ಯ 244 ರನ್‌ಗಳ ಮುನ್ನಡೆಯಲ್ಲಿದೆ.

ಸಿಪಿಎಲ್ 2020: ಕೆರಿಬಿಯನ್ ನಾಡಿನ ಟಿ20 ದಿಗ್ಗಜ ಈ ಬಾರಿಯ ಟೂರ್ನಿಗೆ ಅಲಭ್ಯ

ಇನ್ನು ಇದಕ್ಕೂ ಮುನ್ನ ಇಂಗ್ಲೆಂಡ್ ಮೂರನೇ ದಿನದಾಟವನ್ನು ಆರಂಭಿಸಿತ್ತು. ಎರಡನೇ ದಿನದಂತ್ಯಕ್ಕೆ ನಾಲ್ಕು ವಿಕೆಟ್ ಕಳೆದು ಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್‌ಗೆ ಒಲ್ಲೀ ಪೋಪ್ ಸ್ವಲ್ಪ ಮಟ್ಟಿಗೆ ಭರವಸೆ ಮೂಡಿಸಿದರಾದರೂ ಅವರ ಹೋರಾಟವೂ 62 ರನ್‌ಗಳಿಗೇ ಸೀಮಿತವಾಯಿತು. ಉಳಿದಂತೆ ಯಾವ ಇಂಗ್ಲೆಂಡ್‌ನ ಯಾವ ಆಟಗಾರನೂ ಪಾಕಿಸ್ತಾನಕ್ಕೆ ತಿರುಗೇಟು ನೀಡುವ ಪ್ರಯತ್ನವನ್ನೇ ಮಾಡಲಿಲ್ಲ.

ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 219 ರನ್‌ಗೆ ಇಂಗ್ಲೆಂಡ್ ತನ್ನ ಆಟವನ್ನು ಮುಗಿಸಿತ್ತು. ಅಲ್ಲಿಗೆ ಪಾಕಿಸ್ತಾನ 107 ರನ್‌ಗಳ ಮೊದಲ ಇನ್ನಂಗ್ಸ್ ಮುನ್ನಡೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಎರಡನೇ ಇನ್ನಿಂಗ್ಸ್‌ನಲ್ಲ ಪಾಕಿಸ್ತಾನದ ವಿರುದ್ಧ ಇಗ್ಲೆಂಡ್ ಬೌಲರ್‌ಗಳು ತಿರುಗಿ ಬೀಳಲು ಯಶಸ್ವಿಯಾಗಿದ್ದಾರೆ. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ಪಡೆದ ಮುನ್ನಡೆ ಪಾಕಿಸ್ತಾನಕ್ಕೆ ಲಾಭದಾಯಕವಾಗುವ ಸಾಧ್ಯತೆ ದಟ್ಟವಾಗಿದೆ.

ಆರ್‌ಸಿಬಿಗೆ ಆರೋನ್ ಫಿಂಚ್: ಕೊಹ್ಲಿ ನಾಯಕತ್ವದಲ್ಲಿ ಆಡುವ ಬಗ್ಗೆ ಫಿಂಚ್ ಮಾತು

ಇನ್ನೂ ಎರಡು ದಿನಗಳ ಆಟ ಬಾಕಿಯಿದ್ದು ಫಲಿತಾಂಶ ಯಾರ ಕಡೆ ವಾಲಲಿದೆ ಎಂಬುದು ಕುತೂಹಲ ಮೂಡಿಸಿದೆ. ಅದರಲ್ಲೂ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಪಾಕ್ ಬೌಲರ್‌ಗಳನ್ನು ಯಾವ ರೀತಿ ಎದುರಿಸುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, August 8, 2020, 8:57 [IST]
Other articles published on Aug 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X