ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ಪಾಕಿಸ್ತಾನ ರೋಚಕ ಟಿ20 ಪಂದ್ಯದ ಹೈಲೈಟ್ಸ್: ಪಾಕ್‌ಗೆ ಸೋಲುಣಿಸಿದ ಇಂಗ್ಲೆಂಡ್

England Vs Pakistan 2nd T20 Highlights, England Won By 5 Wickets

ಇಂಗ್ಲೆಂಡ್‌ ಹಾಗೂ ಪಾಕಿಸ್ತಾನ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಅಭಿಮಾನಿಗಳಿಗೆ ಸಾಕಷ್ಟು ರೋಚಕ ಅನುಭವವನ್ನು ನೀಡುವಲ್ಲಿ ಯಶಸ್ವಿಯಾಯಿತು. ಪಾಕಿಸ್ತಾನ ನೀಡಿದ ಬೃಹತ್ ರನ್‌ಗಳ ಟಾರ್ಗೆಟನ್ನು ಬೆನ್ನತ್ತಿದ ಇಂಗ್ಲೆಂಡ್ ಗೆದ್ದು ಬೀಗುವಲ್ಲಿ ಯಶಸ್ವಿಯಾಗಿತು. ಈ ಮೂಲಕ ಚುಟುಕು ಕ್ರಿಕೆಟ್‌ನಲ್ಲೂ ಮೇಲುಗೈ ಸಾಧಿಸುವಲ್ಲಿ ಇಂಗ್ಲೆಂಡ್ ಯಶಸ್ವಿಯಾಗಿದೆ.

ಮ್ಯಾಂಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫಾರ್ಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡ ಇಂಗ್ಲೆಂಡ್‌ಗೆ ಬೃಹತ್ ಗುರಿಯನ್ನು ನೀಡಿತ್ತು. ಪಾಕ್‌ನ ಬ್ಯಾಟ್ಸ್‌ಮನ್‌ಗಳ ಭರ್ಜರಿ ಆಟದಿಂದಾಗಿ 195 ರನ್‌ಗಳನ್ನು ಗಳಿಸಿ ಇಂಗ್ಲೆಂಡ್‌ ತಂಡಕ್ಕೆ ಕಠಿಣ ಸವಾಲನ್ನು ನೀಡಿತ್ತು. ಆದರೆ ಇಂಗ್ಲೆಂಡ್ ಈ ಬೃಹತ್ ಮೊತ್ತವನ್ನು ಭರ್ಜರಿಯಾಗಿ ಬೆನ್ನಟ್ಟಿ ಗೆಲುವನ್ನು ಸಾಧಿಸಿತು.

ಯುಎಇ ಐಪಿಎಲ್‌ನ ಇತಿಹಾಸ : ಮುಂಬೈ ಇಂಡಿಯನ್ಸ್ ತಂಡದ ಕರಾಳ ನೆನಪುಯುಎಇ ಐಪಿಎಲ್‌ನ ಇತಿಹಾಸ : ಮುಂಬೈ ಇಂಡಿಯನ್ಸ್ ತಂಡದ ಕರಾಳ ನೆನಪು

ಹಾಗಾದರೆ ಪಾಕ್ ಹಾಗೂ ಇಂಗ್ಲೆಂಡ್ ನಡುವಿನ ಸೆಣೆಸಾಟ ಹೇಗಿತ್ತು. ಸಂಪೂರ್ಣ ಹೈಲೈಟ್ಸ್ ಇಲ್ಲಿದೆ.

ಪಾಕ್ ತಂಡದ ಭರ್ಜರಿ ಬ್ಯಾಟಿಂಗ್

ಪಾಕ್ ತಂಡದ ಭರ್ಜರಿ ಬ್ಯಾಟಿಂಗ್

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ ತಂಡಕ್ಕೆ ನಾಯಕ ಬಾಬರ್ ಅಜಂ(44 ಎಸೆತ 56 ರನ್) ಹಾಗೂ ಫಖರ್ ಜಮಾನ್(22 ಎಸೆತ 36 ರನ್) ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ 72 ರನ್‌ಗಳ ಉತ್ತಮ ಜೊತೆಯಾಟ ನೀಡಿದ ಬಳಿಕ ಈ ಜೋಡಿ ಬೇರ್ಪಟ್ಟಿತು. ಬಳಿಕ ಹಫೀಜ್ ಸ್ಪೋಟಕ ಆಟ ಪಾಕ್‌ ಇನ್ನಿಂಗ್ಸ್‌ಗೆ ಮೆರುಗು ನೀಡಿತು.

ಹಫೀಜ್ ಸ್ಪೋಟಕ ಆಟ

ಹಫೀಜ್ ಸ್ಪೋಟಕ ಆಟ

ಅನುಭವಿ ಮೊಹಮದ್ ಹಫೀಜ್ ಸ್ಪೋಟಕ ಆಟದಿಂದಾಗಿ ಪಾಕಿಸ್ತಾನ ಬೃಹತ್ ಮೊತ್ತವನ್ನು ಪೇರಿಸುವಲ್ಲಿ ಯಶಸ್ವಿಯಾಯಿತು. 36 ಎಸೆತಗಳನ್ನು ಎದುರಿಸಿದ ಹಫೀಜ್ ಭರ್ಜರಿ 69 ರನ್ ದಾಖಲಿಸುವಲ್ಲಿ ಯಶಸ್ವಿಯಾದರು. ಅಂತಿಮ ಓವರ್‌ನಲ್ಲಿ ಹಫೀಜ್ ಔಟಾಗುವ ಮುನ್ನ ಇಂಗ್ಲೆಂಡ್‌ಗೆ ದೊಡ್ಡ ಗುರಿಯನ್ನು ನಿಗದಿ ಮಾಡುವಲ್ಲಿ ಹಫೀಸ್ ಪ್ರಮುಖ ಪಾತ್ರವನ್ನು ವಹಿಸಿದ್ದರು.

ಇಂಗ್ಲೆಂಡ್ ಭರ್ಜರಿ ಆರಂಭ

ಇಂಗ್ಲೆಂಡ್ ಭರ್ಜರಿ ಆರಂಭ

ಪಾಕಿಸ್ತಾನ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್‌ಗೆ ಉತ್ತಮ ಆರಂಭ ದೊರೆಯಿತು. ಆರಮಭಿಕ ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ ಮಿಂಚಿದರು. ಮೊದಲ ವಿಕೆಡ್‌ಗೆ ಬೈರ್‌ಸ್ಟೋವ್(44) ಹಾಗೂ ಟಾಮ್ ಬ್ಯಾಂಟನ್(20) 66 ರನ್‌ಗಳ ಜೊತೆಯಾಟವನ್ನು ನೀಡಿದರು.

ಮಲನ್-ಮಾರ್ಗನ್ ಭರ್ಜರಿ ಆಟ

ಮಲನ್-ಮಾರ್ಗನ್ ಭರ್ಜರಿ ಆಟ

ಇಂಗ್ಲೆಂಡ್ ತನ್ನ 2 ವಿಕೆಟ್ ಕಳೆದುಕೊಂಡ ನಂತರ ಜೊತೆಯಾದ ಡೇವಿಡ್ ಮಲನ್ ಹಾಗೂ ನಾಯಕ ಮಾರ್ಗನ್ ಭರ್ಜರಿಯಾಗಿ ಪಾಕಿಸ್ತಾನ ತಂಡಕ್ಕೆ ತಿರುಗೇಟು ನೀಡಿದರು. ಪಾಕ್ ಬೌಲರ್‌ಗಳನ್ನು ಭರ್ಜರಿಯಾಗಿ ದಂಡಿಸಿದ ಈ ಒಬ್ಬರು ಆಟಗಾರರು ತಲಾ ಅರ್ಧ ಶತಕದ ಸಾಧನೆಯನ್ನು ಮಾಡಿದರು. 33 ಎಸತಗಳನ್ನು ಎದುರಿಸಿದ ನಾಯಕ ಇಯಾನ್ ಮಾರ್ಗನ್ 66 ರನ್ ಗಳಿಸಿದರೆ ಮಲನ್ ಔಟಾಗದೆ 54 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಯಶಸ್ವಿಯಾದರು.

ಪಾಕ್ ಬೌಲರ್‌ಗಳ ವೈಫಲ್ಯ

ಪಾಕ್ ಬೌಲರ್‌ಗಳ ವೈಫಲ್ಯ

ಪಾಕಿಸ್ತಾನ ತಂಡ ತನ್ನ ಬೌಲಿಂಗ್ ಅಸ್ತ್ರವನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಯುವ ಬೌಲರ್‌ಗಳ ತಂಡ ಚುಟುಕು ಕ್ರಿಕೆಟ್‌ನಲ್ಲಿ ಯಶಸ್ಸು ಸಾಧಿಸುವ ನಿರೀಕ್ಷೆಯನ್ನು ಹೊಂದಿತ್ತು. ಆದರೆ ನಿನ್ನೆಯ ಪಂದ್ಯದಲ್ಲಿ ಪಾಕ್ ಬೌಲರ್‌ಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ನಾಲ್ವರು ಬೌಲರ್‌ಗಳು 10ಕ್ಕೂ ಹೆಚ್ಚಿನ ಸರಾಸರಿಯಲ್ಲಿ ರನ್ ನೀಡಿ ತಂಡಕ್ಕೆ ದುಬಾರಿಯಾರು.

ಅಂತಿಮ ಪಂದ್ಯದಲ್ಲಿ ಗೆಲ್ಲಬೇಕಾದ ಒತ್ತಡ

ಅಂತಿಮ ಪಂದ್ಯದಲ್ಲಿ ಗೆಲ್ಲಬೇಕಾದ ಒತ್ತಡ

ಪಾಕಿಸ್ತಾನ ತಂಡ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್‌ಗೆ ಬಿಟ್ಟುಕೊಟ್ಟ ಬಳಿಕ ಇದೀಗ ಟೆ20 ಸರಣಿಯಲ್ಲೂ ಹಿನ್ನೆಡೆಯನ್ನು ಕಂಡಿದೆ. ಆದರೆ ಚುಟುಕು ಸರಣಿಯಲ್ಲಿ ಇನ್ನು ಒಂದು ಪಂದ್ಯವಿದ್ದು ಗೆದ್ದರೆ ಸರಣಿ ಸಮಬಲವಾಗಲಿದೆ. ಟಿ20 ಸರಣಿಯ ಮೊದಲ ಪಂದ್ಯ ಮಳೆಗೆ ಆಹುತಿಯಾಗಿತ್ತು.

Story first published: Monday, August 31, 2020, 15:20 [IST]
Other articles published on Aug 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X