ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್

England vs Pakistan: James Anderson on the cusp of huge milestone

ಸೌತಾಂಪ್ಟನ್: ಇಂಗ್ಲೆಂಡ್ vs ಪಾಕಿಸ್ತಾನ ದ್ವಿತೀಯ ಟೆಸ್ಟ್ ವೇಳೆ ಆಂಗ್ಲ ವೇಗಿ ಜೇಮ್ಸ್ ಆ್ಯಂಡರ್ಸನ್ ಅಪರೂಪದ ದಾಖಲೆ ನಿರ್ಮಿಸುವುದರಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಅಂಥ ಗಮನಾರ್ಹ ಸಾಧನೆ ತೋರಿರದ ಆ್ಯಂಡರ್ಸನ್‌ಗೆ ಸೌತಾಂಪ್ಟನ್‌ನ ಏಜಸ್‌ ಬೌಲ್‌ನಲ್ಲಿ ನಡೆಯುವ ಪಂದ್ಯದಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಲು ಅವಕಾಶವಿದೆ. ವಿಶ್ವದಲ್ಲಿ ಈ ದಾಖಲೆ ನಿರ್ಮಿಸಿರೋದು ಕೇವಲ ಮೂರು ಬೌಲರ್‌ಗಳು ಮಾತ್ರ.

ಮುಂಬೈ ಇಂಡಿಯನ್ಸ್ ಪರ ಹೆಚ್ಚು ರನ್ ಬಾರಿಸಿರುವ ಟಾಪ್ 5 ಬ್ಯಾಟ್ಸ್‌ಮನ್‌ಗಳುಮುಂಬೈ ಇಂಡಿಯನ್ಸ್ ಪರ ಹೆಚ್ಚು ರನ್ ಬಾರಿಸಿರುವ ಟಾಪ್ 5 ಬ್ಯಾಟ್ಸ್‌ಮನ್‌ಗಳು

ಟೆಸ್ಟ್‌ ಕ್ರಿಕೆಟ್‌ನಲ್ಲಿ 154 ಪಂದ್ಯಗಳನ್ನಾಡಿರುವ ಜೇಮ್ಸ್ ಆ್ಯಂಡರ್ಸನ್, 590 ವಿಕೆಟ್ ಸಾಧನೆ ಹೊಂದಿದ್ದಾರೆ. 600 ವಿಕೆಟ್ ಗಳಿಸಲು ಆ್ಯಂಡರ್ಸನ್‌ಗೆ ಕೇವಲ 10 ವಿಕೆಟ್‌ಗಳು ಬೇಕು. ಇಷ್ಟು ವಿಕೆಟ್‌ಗಳು ದ್ವಿತೀಯ ಟೆಸ್ಟ್‌ನಲ್ಲೇ ಲಭಿಸಿದರೆ ವಿಶ್ವದಲ್ಲಿ ಈ ದಾಖಲೆ ನಿರ್ಮಿಸಿದ 4ನೇ ಬೌಲರ್ ಆಗಿ ಗುರುತಿಸಿಕೊಳ್ಳಲಿದ್ದಾರೆ.

ಐಪಿಎಲ್‌ಗೆ ಪತಂಜಲಿ ಪ್ರಾಯೋಜಕತ್ವ: ತಮಾಷೆಯ ಮೀಮ್ಸ್ ಇಲ್ಲಿವೆ ನೋಡಿಐಪಿಎಲ್‌ಗೆ ಪತಂಜಲಿ ಪ್ರಾಯೋಜಕತ್ವ: ತಮಾಷೆಯ ಮೀಮ್ಸ್ ಇಲ್ಲಿವೆ ನೋಡಿ

ವಿಶೇಷವೆಂದರೆ ಈ ಅಪರೂಪದ ದಾಖಲೆ ನಿರ್ಮಿಸಿದವರಲ್ಲಿ ಒಬ್ಬ ಭಾರತೀಯ ಬೌಲರ್ ಕೂಡ ಇದ್ದಾರೆ.

ಭಾರತ ವಿರುದ್ಧ ಬೆಸ್ಟ್ ಬೌಲಿಂಗ್

ಭಾರತ ವಿರುದ್ಧ ಬೆಸ್ಟ್ ಬೌಲಿಂಗ್

ಟೆಸ್ಟ್‌ನಲ್ಲಿ ಆ್ಯಂಡರ್ಸನ್ ಬೆಸ್ಟ್ ಬೌಲಿಂಗ್ ಫಿಗರ್ ಅಂದರೆ 5/53. 2014ರಲ್ಲಿ ನಡೆದಿದ್ದ ಭಾರತ ವಿರುದ್ಧದ ಪಂದ್ಯದಲ್ಲಿ ಆ್ಯಂಡರ್ಸನ್ ಈ ಸಾಧನೆ ತೋರಿದ್ದರು. ಇನ್ನು ಇತ್ತೀಚೆಗಷ್ಟೇ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ 3/62, 2/49 ಮತ್ತು 0/42 ಬೌಲಿಂಗ್ ಪ್ರದರ್ಶಿಸಿದ್ದರು.

ಗೆಲುವಿನ ಒತ್ತಡದಲ್ಲಿ ಪಾಕ್

ಗೆಲುವಿನ ಒತ್ತಡದಲ್ಲಿ ಪಾಕ್

38ರ ಹರೆಯದ ಜೇಮ್ಸ್ ದ್ವಿತೀಯ ಟೆಸ್ಟ್ ವೇಳೆ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಮೊದಲ ಪಂದ್ಯವನ್ನು ಇಂಗ್ಲೆಂಡ್ 3 ವಿಕೆಟ್ ನಿಂದ ಗೆದ್ದಿರುವುದರಿಂದ ಸರಣಿ ಉಳಿವಿನ ನಿಟ್ಟಿನಲ್ಲಿ ಪಾಕಿಸ್ತಾನಕ್ಕೆ ದ್ವಿತೀಯ ಟೆಸ್ಟ್ ಪ್ರಮುಖವೆನಿಸಿದೆ. ಪಂದ್ಯ ಆಗಸ್ಟ್ 13ರಂದು ಭಾರತೀಯ ಕಾಲಮಾನ 3.30 pmಗೆ ಆರಂಭಗೊಳ್ಳಲಿದೆ.

600 ವಿಕೆಟ್‌ಗಳ ವಿಶ್ವದಾಖಲೆ

600 ವಿಕೆಟ್‌ಗಳ ವಿಶ್ವದಾಖಲೆ

ವಿಶ್ವದಲ್ಲಿ ಈಗ ಮೂರು ಬೌಲರ್‌ಗಳು ಮಾತ್ರ 600 ವಿಕೆಟ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅವರೆಂದರೆ ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ (800 ವಿಕೆಟ್), ಆಸ್ಟ್ರೇಲಿಯಾದ ಸ್ಪಿನ್ನರ್ ಶೇನ್ ವಾರ್ನ್ (708) ಮತ್ತು ಭಾರತದ ಸ್ಪಿನ್ ಮಾಂತ್ರಿಕ, ಕನ್ನಡಿಗ ಅನಿಲ್ ಕುಂಬ್ಳೆ (619).

500+ ವಿಕೆಟ್ ಸರದಾರರು

500+ ವಿಕೆಟ್ ಸರದಾರರು

ಮುರಳೀಧರನ್, ವಾರ್ನ್ ಮತ್ತು ಕುಂಬ್ಳೆ ಅಲ್ಲದೆ ಇನ್ನೂ 4 ಮಂದಿ ಟೆಸ್ಟ್‌ 500+ ವಿಕೆಟ್ ದಾಖಲೆ ಪಟ್ಟಿಯಲ್ಲಿದ್ದಾರೆ. ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ (590 ವಿಕೆಟ್), ಆಸ್ಟ್ರೇಲಿಯಾದ ಗ್ಲೆನ್ ಮೆಗ್ರಾತ್ (563), ವೆಸ್ಟ್ ಇಂಡೀಸ್‌ನ ಕರ್ಟ್ನಿ ವಾಲ್ಷ್ (519), ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ (507) ಇದ್ದಾರೆ.

Story first published: Thursday, August 13, 2020, 16:26 [IST]
Other articles published on Aug 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X